ಕೊಡೆಯೆಂದರೆ ಬಾಲ್ಯ, ಕೊಡೆಯೆಂದರೆ ನೆನಪು, ಕೊಡೆಯೆಂದರೆ ತಾಯಿ, ಕೊಡೆಯೇ ನಮ್ಮನು ಕಾಯಿ! ಮಲೆನಾಡಿನಿಂದ ಬಂದ ಎಲ್ಲಾ ಜನರ ಕನಸಲ್ಲೂ ಒಂದು ಕೊಡೆ ಇದ್ದೇ ಇದೆ. ಅದು ತೀವ್ರ ಗಾಳಿ ಬೀಸುವ ಗದ್ದೆ ಬಯಲಲ್ಲಿ ಆಚೆ ಈಚೆ ಮಗಚಿಕೊಳ್ಳುತ್ತಾ, ಕೆಲವೊಮ್ಮೆ ತಲೆ ಕೆಳಗಾಗುತ್ತಾ ನಮ್ಮನ್ನು ಹಿಂಬಾಲಿಸುತ್ತಿದೆ. ಮಲೆನಾಡಿನ ಕಡೆ ಈಗಲೂ ಬಿಚ್ಚಿಟ್ಟ ಕೊಡೆಗಳೆಲ್ಲಾ ಮನೆಯ ಜಗಲಿಯಲ್ಲಿ ರಾತ್ರಿ ಪೂರ್ತಿ ಗಾಳಿಗೆ ಒಣಗುತ್ತಾ, ಬೆಳಗಿನ ಎಳೆ ಬಿಸಿಲಿಗೆ ಕನಸು ಕಾಣುತ್ತಿವೆ. ಮಳೆಗಾಲ ಮುಗಿದು, ಚಳಿ ಪ್ರಾರಂಭವಾಗಿರುವಾಗ ಮಳೆಯ, ಮಳೆಗೆ ಹಿಡಿಯುವ [...]
Entries from November 2007
November 15, 2007
ಆಕಾಶದ ಸಹವಾಸ ದೋಷ!
ಹಾರುವ ಯಾನ ವಿಮಾನದಲಿ ಚಿಕ್ಕವರಾಗಿದ್ದಾಗ ಬಸ್ಸೆಂದರೆ ಹತ್ತಲು ಆಸೆಪಡುವ ಕಾಲವಿತ್ತು. ಆಮೇಲೆ ಬೈಕ್ ಆಸೆ ಬಂತು, ಆಮೇಲೆ ಕಾರು, ಆಮೇಲೆ ರೈಲು, ಆಮೇಲೆ ವಿಮಾನ. ಆದರೆ ಈಗ ಎಲ್ಲವೂ ಬದಲಾಗಿದೆ. ಈಗ ವಿಮಾನವೂ ಮಕ್ಕಳಲ್ಲಿ ಚಿಕ್ಕ ಸಂಭ್ರಮವನ್ನು ಹುಟ್ಟುಹಾಕದೇ ಹೋಗಬಹುದು. ಆದರೆ ನಾನು ಮೊನ್ನೆ ಮೊನ್ನೆ ಮೊದಲ ಬಾರಿ ವಿಮಾನ ಹತ್ತಿದೆ, ಈ ನೆಲದ ಸಹವಾಸವನ್ನು ಸ್ವಲ್ಪ ಕಾಲ ತೊರೆದು ಆಕಾಶದ ಸಹವಾಸ ಮಾಡಿದ್ದೆ.
ಅದರ ಸಹವಾಸ ದೋಷ ಇಲ್ಲಿ ಅನುಭವವಾಗಿದೆ, ಓದಿ!
ರೇಣುಕಾ ಶರ್ಮ ಬಂದಿದ್ದರೆ ಇಲ್ಲಿ ಸ್ವರ್ಗದ [...]
November 14, 2007
ಕಳ್ಳ ಕುಳ್ಳರ ನಮಸ್ಕಾರ!
ಬ್ಲಾಗ್ ಮಳ್ಳರಿಗೆ ಈ ಕಳ್ಳ ಕುಳ್ಳರ ನಮಸ್ಕಾರ!
ಇದು ವಿಕಾಸ್ ನೇಗಿಲೋಣಿ ಮತ್ತು ಚೇತನ್ ನಾಡಿಗೇರ್ ಎಂಬ ಇಬ್ಬರು ಸ್ನೇಹಿತರು ಸೇರಿ ಪ್ರಾರಂಭಿಸುತ್ತಿರುವ ಒಂದು ಬ್ಲಾಗ್. ಕಳ್ಳ ಮತ್ತು ಕುಳ್ಳ ಎಂಬ ಅಭಿದಾನವನ್ನು ಇಬ್ಬರಲ್ಲೊಬ್ಬರಿಗೆ ಖಚಿತವಾಗಿ ಆರೋಪಿಸಿದರೆ ಅದು ವಿವಾದವಾಗುವುದರಿಂದ ಹೆಸರಿಸುವುದು ನಿಮಗೆ ಬಿಟ್ಟಿದ್ದು. ನಾವಿಬ್ಬರೂ ವೃತ್ತಿಯಲ್ಲಿ ಪತ್ರಕರ್ತರು. ಪ್ರವೃತ್ತಿಯಲ್ಲಿ ಇಬ್ಬರಿಗೂ ಸಿನಿಮಾ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಸಮಾನ ಅಭಿರುಚಿ ಇದೆ.