February 6, 2008

ನೀನ್ ನಾನಾದ್ರೆ ನಾನ್ ನೀನೇನಾ? …

ಏನೋ ಮಸುಕು ಮಸುಕು. ಎಲ್ಲಾ ಅಸ್ಪಷ್ಟ. ಇಷ್ಟು ಹೊತ್ತಿನಲ್ಲಿ ಅದೂ ನನ್ನ ರೂಮಿನಲ್ಲಿ ಅದ್ಯಾರು? …
ಮಲಗಿದ್ದಲ್ಲೇ ಸ್ವಲ್ಪ ತಲೆ ಎತ್ತಿ ಕಣ್ಣುಜ್ಜಿಕೊಂಡರು ಶಾಂತವೇರಿ ಸಿದ್ದಪ್ಪನವರು. ಹೆಂಡತಿ ಕನಕಲಕ್ಷ್ಮೀ ಸತ್ತ ಮೇಲೆ ಅವರಿಗೆ ಒಬ್ಬರೇ ಮಲಗುವುದು ವಾಡಿಕೆ. ಊಟ ಮುಗಿದ ಮೇಲೆ ಮಗ ಚಂದ್ರಮೋಹನ್ ಬಂದು ಒಂದೈದು ನಿಮಿಷ ಅವರೊಂದಿಗೆ ಉಭಯಕುಶಲೋಪರಿ ಹರುಟುತ್ತಾ ಕುಳಿತು ಹೋಗುವುದು ಬಿಟ್ಟರೆ, ಮತ್ತೆ ಅವರ ಕೋಣೆಗೆ ಬೆಳಗ್ಗಿನವರೆಗೂ ಯಾರೂ ಬರುವುದಿಲ್ಲ. ಹೀಗಿರುವಾಗ ಅದ್ಯಾರು ತಮ್ಮ ರೂಮಿನಲ್ಲಿ ಇಷ್ಟು ಹೊತ್ತಿನಲ್ಲಿ ಕೂತಿದ್ದಾರೆ? ಸಿದ್ದಪ್ಪನವರಿಗೆ ಆಶ್ಚರ್ಯವಾಯಿತು. [...]

February 6, 2008

ಚಾಪ್ಲಿನ್ ಬದಲಾದ!

ಚಾಪ್ಲಿನ್‌ಗೆ ತಾನು ನಿರ್ದೇಶಕನಾಗಿ, ಕತೆಗಾರನಾಗಿ ಯಾವತ್ತಾದರೂ ಬದಲಾಗಬೇಕು ಅಂತ ಅನಿಸಿತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇನಾದರೂ ಹಾಗೇ ಅನಿಸಿದ್ದರೆ, ಆತ ಬದಲಾಗುವುದಕ್ಕೆ ಏನೇನು ಮಾಡಿದನೋ ಅದು ಗೊತ್ತಿಲ್ಲ. ಒಂದು ಪಕ್ಷ ಅವನಿಗೆ ಬದಲಾಗಬೇಕು ಎಂದು ದಟ್ಟವಾಗಿ ಅನಿಸಿದರೆ ಮತ್ತು ಆತ ಬದಲಾದರೆ ಹೇಗೆ? ಎಂಬ ಕಲ್ಪನೆ ಬಂದಾಗ ಹೊಳೆದಿದ್ದೇ ಈ ಕತೆ. ಕತೆಯಾದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಜಾಗ. ಇಲ್ಲಿ ಆತ್ಮಚರಿತ್ರೆಯ ಅಂಶಗಳಿಲ್ಲ. ಆದರೆ, ಚರಿತ್ರೆಯ ಅಂಶಗಳಂತೂ ಖಂಡಿತಾ ಇದೆ. ಕಲ್ಪನೆ, ಚರಿತ್ರೆ ಎಲ್ಲಾ ಒಟ್ಟುಗೊಡಿದಾಗ ಚಾಪ್ಲಿನ್ ಬದಲಾದ [...]