ನಾವೆಲ್ಲಾ `ಇಲ್ಲಿ ಬಂದೆ ಸುಮ್ಮನೆ’ಗಳು!
ನಮ್ಮಲ್ಲಿ ಹೆಚ್ಚಿನವರಿಗೆ `ಅಲ್ಲಿದೆ ನಮ್ಮನೆ’. ಹೊಟ್ಟೆ ಪಾಡಿನ ಹೆಸರು ಹೇಳಿಕೊಂಡು ನಮ್ಮ ಪಾಡಿಗೆ ನಾವು ಪಟ್ಟಣವಾಸಿಗಳಾದವರು. ಇಲ್ಲಿನ ಬಾಡಿಗೆ, ಭೋಗ್ಯದ ಮನೆಯಾಚೆ ನಮಗಿರುವುದು ಸೋಗೆ ಮನೆ, ನಾಡ ಹೆಂಚಿನ ಮನೆ, ಹೊಗೆ ತುಂಬಿದ ಮನೆ, ಮಳೆ ಬಂದರೆ ಮನೆ ಸೋರುವ ಮನೆ, ರಾತ್ರಿ ಪೂರ್ತಿ ಧೋ ಎಂದು ಮಳೆಯ ಸದ್ದು ಕೇಳಿದ ಮನೆ, ನಾಟಿ ಮಾಡಲು ಬೆಳಿಗ್ಗೆ ಬೇಗ ಸಜ್ಜಾದ ಮನೆ, ತೋಟಕ್ಕೆ ಔಷಧ ಹೊಡೆಸಬೇಕೆಂದು ಗಡಿಬಿಡಿ ಮಾಡಿದ ಮನೆ, ಅಮ್ಮನಿಗೆ ಅಪ್ಪ [...]
Entries from August 2008
August 26, 2008
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ
August 25, 2008
ಈ ಮನೆಯಲ್ಲಿ ಯಾವಾಗಲೂ (ಕವಿತೆ)
ಹಲವು ಲೇಖನಗಳ ನಡುವೆ ಹೀಗೊಂದು ಕವಿತೆ ನಿಮ್ಮ ಮುಂದೆ. ಈ ಬೆಂಗಾಳಿ ಕವಿತೆ ಹಲವು ಕಾರಣಕ್ಕೆ ನಿಮ್ಮನ್ನು ತಲ್ಲಣಗೊಳಿಸುತ್ತಾ ಹೋಗುತ್ತದೆ, ಅದರ ನಡುವೆಯೇ ಸಣ್ಣ ಭರವಸೆಯನ್ನೂ ಮೂಡಿಸುತ್ತದೆ. ಬಹಳ ಸೂಕ್ಷ್ಮವಾದ ಈ ಕವಿತೆಯ `ಅನುವಾದ’ದ ಪ್ರಯತ್ನ ಮಾತ್ರ ಇಲ್ಲಿದೆ. ಮೂಲ ಕವಿತೆಯ ಸತ್ವವನ್ನು ಈ ಅನುವಾದ ತಾರದೇ ಹೋದರೆ ಕ್ಷಮೆ ಇರಲಿ.
ಯಾವಾಗಲೂ ಈ ಮನೆಯಲ್ಲಿ ಹೀಗೇ
ಬೆಳಗಿನ ಹೊಗೆ ಮನೆಯ ಮಾಡಿಂದ ಮೇಲೆ ಮೇಲೆ
ಬಾಗಿಲು, ಕಿಟಕಿಗಳ ಕಿಂಡಿಯಲ್ಲೂ
ಅವುಗಳ ನಿಟ್ಟುಸಿರ ಮಾಲೆ.
ಅಮ್ಮನ ಕಣ್ಣೀರಿನ ಮುಖವನ್ನು
ಅನ್ನದ ತಪ್ಪಲೆ,
ನೀರಿನ ಹೂಜಿಗಳು ಖಾಲಿಖಾಲಿಯಾಗಿ
ಪ್ರತಿಬಿಂಬಿಸುತ್ತಿವೆ.
ಬೀದಿಯಲ್ಲಿ ಬಿದ್ದ [...]
August 20, 2008
ಡೆಡ್ ಎಂಡ್, ಟರ್ನ್ ಲೆಫ್ಟ್!
ಶುಭಂ, ದಿ ಎಂಡ್, ಸಮಾಪ್ತಿ
ಹೀಗೆ ಸಿನಿಮಾಗಳು ಮುಗಿಯುತ್ತಿದ್ದ ಕಾಲಕ್ಕೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಹೋರಡಲನುವಾಗುತ್ತಿದ್ದರು, ಮಕ್ಕಳಿಗೆ `ಸಾಕಿನ್ನು, ಟೀವಿ ಆರಿಸಿ’ ಎಂಬ ಬುಲಾವ್ ಬರುತ್ತಿತ್ತು. ಆಟ ಬಿಟ್ಟು, ಟೀವಿ ಹಚ್ಚಿದ್ದ ಮಕ್ಕಳಿಗೆ ಆಡಲು ಮತ್ತೆ ಮನಸ್ಸಾಗುತ್ತಿತ್ತು. ಒಲೆಯ ಮೇಲಿಟ್ಟ ಅನ್ನದ ತಪ್ಪಲೆ ನೆನಪಾಗುತ್ತಿತ್ತು. ಬಿಟ್ಟ ಕೆಲಸಗಳೆಲ್ಲಾ ಎಲ್ಲರಿಗೂ ಅದೇ ಕ್ಷಣದಲ್ಲಿ ನೆನಪಿಗೆ ಬಂದು `ಥೂ ಎಲ್ಲಾ ಹಾಳಾಯಿತು’ ಎಂದು ಚಿಂತೆ ಮೂಡುತ್ತಿತ್ತು.
ಆದರೆ ಸಿನಿಮಾಗಳು ಮಾರ್ಡ್ರನ್ ಆಗತೊಡಗಿದ ಮೇಲೆ `ದಿ ಎಂಡ್’ ಎಂದೆಲ್ಲಾ ಯಾರೂ ಹೇಳಿ, ಸಿನಿಮಾ [...]
August 16, 2008
ದೋಣಿ ಸಾಗಲಾ ಮುಂದೆ ಹೋಗಲಾ?
ಅದೆಷ್ಟೋ ಮುಖ್ಯಮಂತ್ರಿಗಳು ಪ್ರತಿ ವರ್ಷ ಕಾವೇರಿ ನದಿಗೆ ಬಾಗೀನವನ್ನು ತೇಲಿ ಬಿಡುತ್ತಿದ್ದ ಹೊತ್ತಿಗೆ ಆಗ ಬಾಲ್ಯದಲ್ಲಿದ್ದ ನನ್ನಂಥವರು ನೀರಿನಲ್ಲಿ ಕಾಗದದ ದೋಣಿ ತೇಲಿ ಬಿಡುತ್ತಿದ್ದೆವು.
ಕಾಗದದ ದೋಣಿಗಳಿಗಾಗಿ ಜೀವತೆತ್ತ ನೋರ್ಟ್ಸ್ ಹಾಳೆಗಳೂ, ಪತ್ರಿಕೆಯ ಪುಟಪುಗಳೂ, ಅಮ್ಮ ಕೂಡಿಟ್ಟ ಅಮೂಲ್ಯ ರಸೀತಿ ಪತ್ರಗಳೂ, ತವರುಮನೆಯಿಂದ ಅಮ್ಮನಿಗೆ ಬರುತ್ತಿದ್ದ ಕಾಗದ, ಪತ್ರಗಳೂ ದೋಣಿಯಾಗಿ ಮನೆಯ ಅಂಗಳದ ನೀರಲ್ಲಿ ತೇಲಿಸೋ ಇಲ್ಲಾ ಮುಳುಗಿಸೋ ಎಂದು ಸದ್ದಿಲ್ಲದೇ ಹುಯಿಲಿಡುತ್ತಿದ್ದವು. ದೋಣಿ ಹೆಸರಲ್ಲಿ ನೀರುಪಾಲಾದ ಕಾಗದ, ಪತ್ರಗಳನ್ನು ಕಂಡು ಕಂಗಾಲಾಗಿ ಅಮ್ಮ ರಾತ್ರಿ ಬೆತ್ತದ ಸೇವೆ [...]
August 12, 2008
ಮುಕ್ತ… ಮುಕ್ತ…
ಈ ಧಾರಾವಾಹಿ ಎಂಬ ಶ್ರೀ ಕೃಷ್ಣ ಪರಮಾತ್ಮ ಸಂಜೆ ಆರರಿಂದ ಪ್ರಾರಂಭವಾಗಿ ರಾತ್ರಿ ಹತ್ತೂವರೆವರೆಗೆ ಮುಂದುವರಿಯುವ `ಮಧ್ಯಮವರ್ಗದ ಜೀವನ’ವನ್ನು ಪೊರೆಯುತ್ತಿದ್ದಾನೆ. ಆ ಹೊತ್ತಿಗೆ ಮನೆಯಲ್ಲಿರುವ ಹೆಣ್ಣುಮಕ್ಕಳು ಕೆಲಸ ಮರೆಯುತ್ತಾ, ಹೆಂಗಸರು ಒಲೆ ಮೇಲಿಟ್ಟ ಅನ್ನ ಮರೆಯುತ್ತಾ, ಗಂಡಸರು ಓದಲಿಟ್ಟ ಪೇಪರ್ ಮರೆಯುತ್ತಾ, ಗಂಡು ಮಕ್ಕಳು ಸಂಜೆಯಾಗುವವರೆಗೂ ಆಡುವ ಕ್ರಿಕೆಟ್ ಮರೆಯುತ್ತಾ ಟೀವಿ ಮುಂದೆ ಪ್ರತಿಷ್ಠಾಪಿಸಲ್ಪಡುತ್ತಾವೆ…
ಕೃಷ್ಣನಾ ಕೊಳಲಿನ ಕರೆ
ತೊಟ್ಟಿಲ ಹಸುಗೂಸು ಮರೆ ಮರೆ
ೃಂದಾವನಕೆ ತ್ವರೆ ತ್ವರೆ
ಕೃಷ್ಣನ… ಕೊಳಲಿನ… ಕರೆ…
***
`ಮಿಂಚು’ವಿನ ಜಗದೀಶ ಆರಾಮಾಗಲಿ, ಅಲ್ಲಿನ ರಾಜೀವನಿಗೆ ಜೈಲಾಗಲಿ, ಕಾತ್ಯಾಯಿನಿ ಮತ್ತೆ [...]
August 11, 2008
ಅಳು ಬರುವ ಹಾಗಿದೆ…
ಮಳೆಗಾಲ ಉತ್ಕರ್ಷ ಸ್ಥಿತಿಯಲ್ಲಿ ಇರಬೇಕಾಗಿದ್ದ ಈ ಆಗಸ್ಟ್ ತಿಂಗಳ ಆರಂಭ ಭಾಗದಲ್ಲಿ `ಮಳೆ ಬರುವ ಸೂಚನೆ’ಯಲ್ಲೇ ದಿನಾ ಬೆಳಗಾಗುತ್ತಿದೆ. ಬರುವ ಸ್ವಾತಂತ್ರ್ಯ ದಿನಾಚರಣೆ, ಬರುವ ವರಮಹಾಲಕ್ಷ್ಮೀ ಹಬ್ಬ, ಬರುವ ಚೌತಿ, ಬರುವ ಕೃಷ್ಣಾಷ್ಟಮಿಗಳನ್ನು ಬರಮಾಡಿಕೊಳ್ಳಲು ಯಾಕೆ ಯಾರಿಗೂ ಮನಸೇ ಇಲ್ಲ?
`ಒಂದು ಕಾಲಕ್ಕೆ ಹಬ್ಬ ಎಂದರೆ ಎಂಥ ಗೌಜು, ಎಂಥ ಗದ್ದಲ, ಎಂಥ ಮೋಜು, ಎಂಥ ಮಸ್ತಿ…’ ಎಂದು ಹಳೆಯ ರಾಗವನ್ನು ಹಾಡಬೇಕೆಂದಿಲ್ಲ. ಆದರೆ ಈ ಸಲ ಒಂದು ಕಡೆ ಮಳೆಯ ಅಬ್ಬರ, ಮತ್ತೊಂದು ಕಡೆ ಮಳೆ ಬರುವ [...]
August 11, 2008
ಹೊಸರುಚಿ
ಮೂರ್ನಾಲ್ಕು ದಿನಗಳಿಂದ
ನಾವು ನಮ್ಮ ನೆಂಟರ
ಕಾಲು, ಕೈ, ಹೃದಯ, ಕರುಳುಗಳನ್ನು
ಬೇಯಿಸಿಕೊಂಡು ತಿನ್ನುತ್ತಿದ್ದೇವೆ.
ಬೇಯಿಸಿದ್ದನ್ನು ತಿನ್ನುವಾಗ ಆಗುವ
ಸಂಭ್ರಮ ಹ್ಯಾಗಿರುತ್ತದೆಂದು ನನಗೆ
ತಿಳಿದೇ ಇರಲಿಲ್ಲ, ನೋಡಿ.
ಎಲ್ಲರೂ ಹೊಸ ರುಚಿ
ಮಾಡುವುದು ಹೇಗೆ ಎಂದು
ಕೇಳುತ್ತಾರೆ,
ಪತ್ರಿಕೆ, ಚಾನಲ್‌ನವರು
ಮಾಡುವ ವಿಧಾನವನ್ನಷ್ಟೇ
ಹೇಳುತ್ತಾರೆ.
ಆದರೆ ತಿನ್ನುವುದು ಹೇಗೆ?
ಈ ಸಲದ ನಮ್ಮ ಸ್ಪೆಷಲ್;
ನಾವು ಕಂಡುಕೊಂಡ ಆ ಹೊಸ ರುಚಿಯನ್ನು
ತಿನ್ನುವುದು ಹೇಗೆ?
ಬೆಳಿಗ್ಗೆಯಿಂದ ಸಂಜೆಯವರೆಗೆ
ಮನೆಗೆ ಫೋನು ಮಾಡಿ
ತಯಾರಾಗುತ್ತಿರುವ
ಹೊಸ ರುಚಿಯ ಬಗ್ಗೆ,
ನೆಂಟರಿಷ್ಟರ ಅವಯವಗಳು
ಖಾದ್ಯಗಳಾಗಿ ತಯಾರಾಗುತ್ತಿರುವ ಬಗ್ಗೆ
ವಿವರವಾಗಿ ತಿಳಿದುಕೊಳ್ಳಿ.
ಎಸ್ಸೆಮ್ಮೆಸ್ ಮೂಲಕ
ತಕ್ಷಣದ ಬೆಳವಣಿಗೆಯನ್ನು
ರವಾನಿಸಲು ಹೇಳುತ್ತಿರಿ.
ಆನಂತರ ಆಫೀಸಿನಿಂದ ಬನ್ನಿ,
ಕೈಕಾಲು ತೊಳೆದುಕೊಳ್ಳಿ,
ಬಟ್ಟೆ ಬದಲಿಸಿಕೊಳ್ಳಿ,
ಹೆಂಡತಿ ಕೊಟ್ಟ ಕಾಫಿ, ಸುದ್ದಿ, ಗಾಳಿಮಾತಿನೊಂದಿಗೆ
ಟೀವಿ ಆನ್ ಮಾಡಿ.
ಸತ್ತ ನಿಮ್ಮ ನೆಂಟರಿಷ್ಟರು
ಕ್ಯಾಮರಾ ಬೆಳಕಿನ [...]
August 8, 2008
ಪರಿಚಿತ ನೋವೇ…
ಪರಿಚಿತನಾದದ್ದಕ್ಕೇ
ಈ ಪರಿಯ
ಫಜೀತಿ,
ನೀ ನಮ್ಮೆಲ್ಲರ ಗೊಡವೆ,
ಕೆಟ್ಟ ಕನವರಿಕೆಯ
ನೋವೇ
ಸಾವೇ!
ನೀ ಪರಿಚಿತನಲ್ಲದೇ ಇನ್ನೇನು;
ಸಾವಿರದ ಮನೆಯ
ಸಾಸಿವೆ ಕೇಳಿದರೆ
ನಾವು ಕೊಡುವುದಿಲ್ಲ,
ಅರೆ ಏಕೆ ಎನ್ನುತ್ತೀರಾ?
ಇಷ್ಟೇ ಸಾಕು ಎಂದರೂ ಬಿಡದಷ್ಟು
ಮಂದಿ
ನನ್ನ ಮುಂದೆ ಸರತಿ ನಿಂತು
ಸತ್ತಿದ್ದಾರೆ
ನಮ್ಮವರು ಅವರ ಎತ್ತಿದ್ದಾರೆ
ಬಿಕ್ಕುತ್ತಲೇ ಬೆಂಕಿ ಇಕ್ಕಿದ್ದಾರೆ…
ನನ್ನ ಸುತ್ತಮುತ್ತೆಲ್ಲಾ
ಕೆಲವರು ಇದ್ದೂ ಸತ್ತು,
ಸತ್ತೂ ಅಮರರಾದಂತೆ ಇದ್ದು,
ಮತ್ತೂ ಕೆಲವರು ಭೂತವಾಗೆದ್ದು,
ನನ್ನೊಳಗಿನ ಪ್ರಶ್ನೆಗಳ ಗುದ್ದಾಟವಾಗಿದ್ದಾಗ
ನಮ್ಮೊಂದಿಗೆ ಸುಳಿದಾಡುತ್ತಿದ್ದುದು
ನೀವೇ,
ಸಾವೇ!
ಸಾವೇ,
ನೀವೇ ಹಾಗೆ
ಶಬ್ದಕ್ಕಷ್ಟೇ ನಿಮಗೆ
ಪದ ಪರ್ಯಾಯ
ಮತ್ತೆ
ಎಲ್ಲರ ಉತ್ತರಕ್ರಿಯೆ
ಅನಿವಾರ್ಯ…
August 8, 2008
ಹಳೆ ಊರಲ್ಲಿ ಹೊಸ ಹುಡುಕಾಟ
ಮೊನ್ನೆ ಬಿಸಿಲ ಝಳ ಕಡಿಮೆಯಾಗುತ್ತಿರುವ ಒಂದು ಸಂಜೆ ಸಣ್ಣ ಬ್ಯಾಗ್ ಹೆಗಲಿಗೇರಿಸಿಕೊಂಡು, ಉಡುಪಿ ಬಸ್‌ಸ್ಟಾಪ್‌ನಲ್ಲಿ ಇಳಿದೆ. ಒಂದು ಕಾಲಕ್ಕೆ ಆ ಜಾಗ ನನ್ನ ಅತ್ಯಂತ ಪರಿಚಿತ ಜಾಗವಾಗಿತ್ತು ಎಂಬುದನ್ನು ಆಗ ನನಗೆ ನಂಬಲೇ ಆಗಲಿಲ್ಲ. ಅದೇ ರಸ್ತೆ, ಅದೇ ಒಳದಾರಿ, ಅದೇ ಬಂಗಾರದಂಗಡಿ, ಅದೇ ಬ್ಯಾಂಕ್, ಅದೇ ರಥಬೀದಿ, ಅದೇ ಶಾಲೆ, ಅದೇ ಆಟದ ಬಯಲು. ಹೀಗೆ ಭೌತಿಕವಾಗಿ ಅದೇ ಶಹರ, ಅದೇ ವಿವರ. ಬಸ್‌ಸ್ಟ್ಯಾಂಡ್ ಜಾಗ ಬದಲಿಸಿಕೊಂಡಿತ್ತು, ರಸ್ತೆಗಳು ಕೆಲವೆಡೆ ಒನ್‌ವೇ, ಕೆಲವೆಡೆ ಟೂ ವೇ [...]