Entries from September 2008

September 30, 2008

ಶ್ರೀಸಾಮಾನ್ಯನಿಗೆ ನಮಸ್ಕಾರ!

ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು.
ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.
ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ’ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್‌ ತಂದುಕೊಡುತ್ತಿದ್ದ, ಪೇಪರ್‌ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ [...]

September 24, 2008

ಕವಿತೆಯ ಕಣ್ಣೀರು

ಕೋಮು ಗಲಬೆ ಎಂಬ `ಚಿಕುನ್‌ ಗುನ್ಯಾ’ ರೋಗ ಸಾಂಕ್ರಾಮಿಕವಾಗಿ ದಿನೇ ದಿನೇ ಕರ್ನಾಟಕವನ್ನು ಆವರಿಸಿಕೊಳ್ಳುತ್ತಿದೆ. ಮತಾಂತರಕ್ಕೆ ಕಾಯ್ದೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಹಿಂಸಾಚಾರದಿಂದಲೇ ಪರಿಹರಿಸಿಕೊಳ್ಳಲು ಎಲ್ಲರೂ ಉತ್ಸುಕರಾದಂತೆ ಕಾಣುತ್ತಿದ್ದಾರೆ.
ಅವರು ಹೊಡೆದರೆಂದು ಇವರೂ, ಇವರು ಬೈದರೆಂದು ಅವರೂ ಗುದ್ದಾಟ ನಡೆಸಿ ರಸ್ತೆ, ಬೀದಿ, ಮನೆ, ಕಾಂಪೋಂಡ್‌ಗಳು ಅನಾಥವಾಗುತ್ತಿವೆ. ಇದಕ್ಕೆ ಸರಿಯಾಗಿ ಉಪ್ಪು ಖಾರ ಹಚ್ಚಿ, ಒಗ್ಗರಣೆ ಹಾಕಿ, ರಾಜಕೀಯ ನಡೆಸಲೂ ಎಲ್ಲಾ ಪಕ್ಷಗಳೂ ನಾಚಿಕೆ ಬಿಟ್ಟು ಮುಂದಾಗಿವೆ.
ಇದರ ನಡುವೆ ಸಾಮಾನ್ಯನ ನೋವು- ಆತಂಕವನ್ನು ಕೇಳುವವರು, ಬಹುಸಂಖ್ಯಾತ- ಅಲ್ಪಸಂಖ್ಯಾತರ [...]

September 22, 2008

ನಗರ ಚಳಿಯಲ್ಲೊಂದು ಅಡ್ರೆಸ್ಟಿಕೆ!

ಊರು ಬಿಟ್ಟು ಪಟ್ಟಣ ಸೇರಿದ ಮನುಷ್ಯರು ಬೆಳಿಗ್ಗೆ ಬಸ್‌ಸ್ಟ್ಯಾಂಡ್‌ನಲ್ಲಿ ಅಡ್ರೆಸ್‌ ಇಲ್ಲದೇ ನಿಲ್ಲುತ್ತಾರೆ. ತಿಕ್ಕದ ಹಲ್ಲು, ಬಾಚದ ಕೂದಲು, ಅರ್ಧಂಬರ್ಧ ಇನ್‌ಷರ್ಟ್‌, ಎತ್ತೆತ್ತಲೋ ಎತ್ತಿ ಹಾಕುವ ಕಾಲ್ಗಳು, ಭವಿಷ್ಯದ ಬಗ್ಗೆ ಆತಂಕ, ಹಿಂಬದಿ ಪಾಕೀಟಿನಲ್ಲಿರುವ ಹಣದ ಸುರಕ್ಷೆಯ ಬಗ್ಗೆ ಭಯ, ಬಸ್‌ ತಪ್ಪಿಹೋದರೆ ಎಂಬ ಚಡಪಡಿಕೆ, ಡಾಯ್ಲೆಟ್‌ಗೆ ಹೋಗುವ ಅವಸರ.
ಆಗಷ್ಟೇ ನಾವು ನಂನಮ್ಮ ಊರಲ್ಲಿ ಡಿಗ್ರಿ ಮುಗಿಸಿ, ಯಾವುದೋ ವಿಶ್ವವಿದ್ಯಾಲಯದಲ್ಲಿ ಪಿಜಿ ಪೂರೈಸಿ ನಮ್ಮ ಕೈ ಮೇಲೆ ಕೆಲಸ ಇಟ್ಟು, ತಿಂಗಳಿಗೊಂದಾವರ್ತಿ ಸಂಬಳ ನೀಡುವ ಸಾಹುಕಾರರಿಗಾಗಿ ಕಾಯುತ್ತಿರುತ್ತೇವೆ. [...]

September 17, 2008

ಹುಟ್ಟಿ ಹಬ್ಬವಾಗುವ ಕ್ರಿಯೆ!

ಗುರುವಾರ ಕನ್ನಡ ಚಿತ್ರರಂಗದಲ್ಲಿ ಹುಟ್ಟುಹಬ್ಬಗಳ ಹರಿದಿನ. ಡಾ ವಿಷ್ಣುವರ್ಧನ್‌ ಹಾಗೂ ಸೂಪರ್‌ ಸ್ಟಾರ್‌ ಉಪೇಂದ್ರ ಅವರಿಗೆ ಗ್ರಾಂಡ್‌ ಹುಟ್ಟುಹಬ್ಬ. ಹಾರಗಳೂ, ತುರಾಯಿಗಳೂ, ಕೇಕುಗಳೂ, ಬಾಕುಗಳೂ ಈ ಸಂದರ್ಭದಲ್ಲಿ ಗಾಂನಗರದಲ್ಲಿ ಓಡಾಡುತ್ತವೆ. ಒಬ್ಬರು ರೆಸಲ್ಯೂಷನ್‌ ಪಾಸ್‌ ಮಾಡಬಹುದು. ಮತ್ತೊಬ್ಬರು `ನನಗೆ ಯೋಗ ಇದೆ, ಯೋಗ್ಯತೆ ಇಲ್ಲ. ಆದರೂ ನನ್ನನ್ನು ಇಷ್ಟು ವರ್ಷ ಬೆಳೆಸಿದ್ದೀರಿ. ಧನ್ಯವಾದಗಳು’ ಎಂದು ಭಾಷಣ ಮಾಡಬಹುದು.
ಉಪೇಂದ್ರ ಅವರ `ಬುದ್ಧಿವಂತ’ ಚಿತ್ರ ಇದೇ ದಿನ ಬಿಡುಗಡೆಯಾಗಬೇಕಾಗಿದ್ದರೂ ಸೆನ್ಸಾರ್‌ ಮಂಡಳಿ ಸೆನ್ಸಾರ್‌ ಸರ್ಟಿಫಿಕೆಟ್‌ ನೀಡದಿರುವುದರಿಂದ ಒಂದು ವಾರ ಮುಂದೆ [...]

September 16, 2008

ದೇವರು ಕೋಣೆಯಲ್ಲಿರಲಿ

ಇಡೀ ಮಂಗಳೂರು ಮನೆ ಬಾಗಿಲು ಹಾಕಿಕೊಂಡು, ಕಿಟಕಿಯಲ್ಲಿ ಆಗಾಗ ಹಣಕಿ ಹಣಕಿ ನೋಡುತ್ತಿದೆ. ಚೆಲ್ಲಾಪಿಲ್ಲಿಯಾದ ಕಲ್ಲು, ಮಣ್ಣು, ರಕ್ತದ ಕಲೆ, ಕೋಲು, ಚಪ್ಪಲಿ, ಕನ್ನಡಕದ ಗ್ಲಾಸ್‌, ಒಡೆದ ಗಾಜು, ಮುರಿದ ಗೇಟುಗಳು ರಸ್ತೆಗಳನ್ನು ಕುಶಲ ಕೇಳುತ್ತಿವೆ.
ಆಸ್ಪತ್ರೆಗೆ ಹೋಗುವವರೂ, ಮೆಡಿಕಲ್‌ ಶಾಪ್‌ನಲ್ಲಿ ಕ್ರೋಸಿನ್‌, ಜೆಲುಸಿನ್‌ ತೆಗೆದುಕೊಂಡು ಬರಲು ಅಂದುಕೊಂಡವರೂ, ಭಾನುವಾರ ಹೊಸ ಸಿನಿಮಾ ನೊಡಿಕೊಂಡು ಬರೋಣ ಎಂದು ಆಸೆಪಟ್ಟವರೂ, ಈಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ ಮಾಡಿಸೋಣ ಎಂದು ಭಾವಿಸಿದವರೂ ಟೀವಿಯಲ್ಲಿ ನ್ಯೂಸ್‌ ಫ್ಲಾಷ್‌ ನೋಡುತ್ತಾ ತಟಸ್ಥವಾಗಿದ್ದಾರೆ.