ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ…
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್ ಕಾಯ್ಕಿಣಿ [...]
Entries from October 2008
October 29, 2008
ನೀ ಬಂದು ನಿಂದಿಲ್ಲಿ ಪಟಾಕಿ ಹಚ್ಚಾ!
October 25, 2008
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ
ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್ ಲೈಟ್ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ’ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್‌ಫ್ಯೂಸ್. `ವಾಟ್ಸ್ ದಿ ಆಯಿಲ್ ಯಾರ್’. ಎಣ್ಣೆ ಎರೆದು ತಲೆ ಮೀಸಲು ಮೊಮ್ಮಗ [...]
October 25, 2008
ಶುಭಾಶಯಗಳು (ಕವಿತೆ)
ದೀಪಾವಳಿ ಹಬ್ಬ ಬಂದಿದೆ. ಎಲ್ಲೆಡೆಯೂ ಪಟಾಕಿ, ಆಕಾಶಬುಟ್ಟಿ, ಹಣತೆ, ಸೊಡರುಗಳ ಉತ್ಸವ. ಇತ್ತೀಚೆಗೆ ತಾನೇ `ತರಂಗ’ ವಾರಪತ್ರಿಕೆಯಲ್ಲಿ ಪ್ರಕಟವಾದ `ಶುಭಾಶಯಗಳು’ ಕವಿತೆಯನ್ನು ಈ ದೀಪಾವಳಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಓದಿ.
ಪವರ್‌ಕಟ್‌ನ ನಂತರ
ಬೆಳಗಿದ ಬಲ್ಬೇ,
ಹೊತ್ತಿಕೊಂಡ ಸ್ಟೆಬಿಲೈಜರ್ ದೀಪವೇ
ಕರೆಂಟ್ ಹೋದ ಕೂಡಲೇ
ಆರಿಸಬಾರದಿತ್ತೇ
ಎಂದು ಬೈಸಿಕೊಳ್ಳುತ್ತಾ
ಪಕ್ಕನೆ ಬೆಳಕಾದ ಟೀವಿ ಪರದೆಯೇ,
ಅಡುಗೆ ಮನೆಯ
ಎಲೆಕ್ಟ್ರಿಕ್ ಒಲೆಯೇ,
ಕೋಣೆಯೊಳಗಿನ ಕಂಪ್ಯೂಟರ್ರೇ…
ನಿನ್ನ ದೀಪಾವಳಿಗೆ ನನ್ನ ಶುಭಾಶಯಗಳು
October 21, 2008
ಅಮ್ಮನಿಗೆ ಮಗು ತಾಯಿ, ಶಿಶುವೆ ಅಮ್ಮನ ಕಾಯಿ!
ಅಮ್ಮ ಯಾವತ್ತೂ ಬದಲಿಗೆ ತರಲಾಗದ ಪದ, ಭಾವ, ಸಂಗ. ಅಮ್ಮನ ಬಗ್ಗೆ ಬರೆದರೆ ಎಲ್ಲರಿಗೂ ಅವರಮ್ಮ, ಅಮ್ಮನ ಥರ ಕಂಡ ಒಂದಿಷ್ಟು ಸಂಬಂಧಗಳು, ಅಮ್ಮನಂತೆ ಕಾಯ್ದ ಗೆಳೆಯ/ಗೆಳತಿ ನೆನಪಾಗುತ್ತಾರೆ. ಈ ಈ `ಕಳ್ಳಕುಳ್ಳ’ರ ಬ್ಲಾಗಂಗಡಿಯಲ್ಲಿ ಇತ್ತೀಚಿಗೆ ಅಮ್ಮ ಅಮ್ಮ ಎಂಬ ಕಳ್ಳು ಸಂಬಂಧದ ಬಗ್ಗೆ ಬರೆದ ಕವಿತೆಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವ. ಅನೇಕರು ಕಣ್ಣೀರಿಟ್ಟ ಪ್ರಸಂಗವನ್ನೂ ವಿವರಿಸಿದ್ದಾರೆ. ಪ್ರತಿಕ್ರಿತಿಸಿ, ಅಮ್ಮನ ಕವಿತೆಗೆ ಕೃತಜ್ಞರಾಗಿದ್ದಾರೆ.
ಧನ್ಯವಾದಗಳು.
ಇದೀಗ ಅಮ್ಮನ ಬದುಕು, ಬವಣೆಗಳ ಹಿನ್ನೆಲೆಯಲ್ಲಿ ಸಾಗುವ ಒಂದು ಕತೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. `ಉದಯವಾಣಿ’ಯಲ್ಲೇ [...]
October 15, 2008
ಅಮ್ಮನ ಕೈ ಬಳೆ ಸದ್ದಿಲ್ಲ
ದೇವರ ಪಟದ ಹೂವು
ಬಾಡಿ ಬೀಳುವಾಗ
ಹೊಲಕೆ ಹೋಗಿ ಬಂದ
ಅಮ್ಮ ಜ್ವರವೆಂದು
ಮಲಗಿದವಳು ಏಳಲೇ ಇಲ್ಲ!
ಅವಳ ಮೈ ತಣ್ಣಗಾದ ಹೊತ್ತಿನಿಂದ
ಒಳ ಮನೆ ಕತ್ತಲಲ್ಲಿ
ಹಚ್ಚಿಟ್ಟ ಹಣತೆ ಆರಲಿಲ್ಲ,
ಬೊಂಬು ಬಂತು
ಗಡಿಗೆ ಬಂತು
ಯಾರೋ ದಾನ ಕೊಡಲು
ಕುಂಬಳಕಾಯಿ ತಂದರು
ಪೇಟೆಯಲ್ಲಿದ್ದ ಮಗ ಬಂದ
ತೊಲ ಬಂಗಾರದ ಮಗಳು ಬಂದಳು
ನೆಂಟ-ಬೀಗ-ಸೋದರಳಿಯ
ಏನೂ ತಿಳಿಯದ ಮೊಮ್ಮಕ್ಕಳು
ಬಂದರು… ಹೋದರು….
October 11, 2008
ಮೌನವಾಗಿರು ಸಾಕು, ಮಾತು ಬಿಸಾಕು
ಇತ್ತೀಚೆಗೆ ಮುಂಬೈನಲ್ಲಿ ಬಾಂಬ್ ಬ್ಲಾಸ್ಟ್ ಆದ ಹೊತ್ತಿಗೆ ನಟ ಅಭಿಷೇಕ್ ಬಚ್ಚನ್‌ಗೆ ಶೂಟಿಂಗ್ ಇತ್ತಂತೆ. ಆದರೆ ಬ್ಲಾಸ್ಟ್ ಪ್ರೀತ್ಯರ್ಥವಾಗಿ ಒಂದು ವಾರದ ಶೂಟಿಂಗ್ ರದ್ದಾಯಿತಂತೆ.
`ಹಾಗಾಗಿ ನನಗೆ ಅಚಾನಕ್ ರಜೆ ಸಿಕ್ಕಿತು. ಯಾವಾಗಲೂ ಬರೀ ಕೆಲಸ ಕೆಲಸ ಶೂಟಿಂಗೇ ಆಗಿತ್ತು. ಈ ಬ್ಲಾಸ್ಟ್ ರಜೆಯ ಕಾಲದಲ್ಲಿ ನಾನು ನನ್ನ ಸಂಸಾರದ ಜೊತೆ ಕಾಲ ಕಳೆದೆ’
-ಹೀಗೆಂದು ಅಭಿಷೇಕ್ ಬಚ್ಚನ್ `ಖುಷಿ ಖುಷಿ’ಯಾಗಿ ಹೇಳಿಕೊಂಡಿದ್ದನ್ನು ಇತ್ತೀಚೆಗೆ ಪತ್ರಿಕೆಯೊಂದರ ಪಟ್ಟಣ ಪುರವಣಿಯೊಂದು ಅಷ್ಟೇ ಖುಷಿಯಿಂದ ಪ್ರಕಟಿಸಿತ್ತು. ವರದಿ ಓದಿ ಕೆಲವರಾದರೂ ಗಾಬರಿಯಾದಾರು. ಅಂದರೆ [...]
October 7, 2008
ಬಂದೇ ಬರತಾವ ಕಾಲ್
ಮಿಸ್ಡ್ ಕಾಲ್ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.
ಹಠಾತ್ ಸಿಗ್ನಲ್ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ’
October 1, 2008
ಗಾಂೀಸ್ಮೃತಿ
ಮತ್ತೊಮ್ಮೆ `ಅಕ್ಟೋಬರ್ 2′ ಬಂದಿದೆ. ಕೆಲವರು ಆ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ರಜೆ ಒದಗಿಸುವ ದಿನವಾಗಿ ನೋಡಿದ್ದಾರೆ. ಕೆಲವರು ಆ ದಿನ ಮದ್ಯ ಸರಬರಾಜಿಲ್ಲ ಎಂದು ಬೇಜಾರಾಗಿದ್ದಾರೆ. ಕೆಲವರು ಆ ದಿನ ಸತ್ಯಾಗ್ರಹದ ಡೇಟ್ ಆಗಿ ಇಟ್ಟುಕೊಂಡಿದ್ದಾರೆ. ಕೆಲವರಿಗೆ ಆ ದಿನ ಸರ್ಕಾರಕ್ಕೆ ತಮ್ಮ ಆಗ್ರಹ ನೀಡಲು ಪುಣ್ಯದಿನ.
ಕೆಲವರಿಗೆ ಮಾತ್ರ ಅದು ಗಾಂೀಜಿಯನ್ನು ನಿಜವಾಗಿ ನೆನಪು ಮಾಡಿಕೊಳ್ಳುವ ಸುದಿನ.
ಗಾಂೀಜಿ ಒಂದು ದಿನದ ಮಟ್ಟಿಗೆ ನೆನಪಾಗಬೇಕೇ ಎನ್ನುವುದು ಮತ್ತೂ ಕೆಲವರ ನೋವು. ಗಾಂೀಜಿ ಭಾರತ- ಪಾಕಿಸ್ತಾನವನ್ನು ಒಡೆದರು ಎಂಬುದು [...]