ಮಿಸ್ಡ್ ಕಾಲ್ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.
ಹಠಾತ್ ಸಿಗ್ನಲ್ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ’
ಮಳೆಯ ಸುರಿವಿಗೆ ಹೆದರಿ
ವ್ಯಾನಿಟಿ ಬ್ಯಾಗ್‌ನಿಂದ
ಕೊಡೆ ಹೊರಬರಬಾರದು,
ಮಳೆಯ ಹನಿಗೆ
ಹೆರಳು ಹೆಣಿಕೆ,
ಪಕ್ಕದಲ್ಲಿ ಪ್ರಿಯನ ನಡಿಗೆ,
ಈ ಸುಮಧುರ ಸಮಾಗಮಕ್ಕೆ
ಇಬ್ಬರ ಮೊಬೈಲ್‌ನ
ರಿಂಗ್‌ಟೋನೇ ರೀರೆಕಾರ್ಡಿಂಗ್.
ಆಸ್ಪತ್ರೆಯ ಒಳಗಿದ್ದಾಗ
ಪ್ರಿಯಕರ ಫೋನ್ ಬರಬಾರದು,
ಹಾಸಿಗೆ ಮೇಲೆ ಮಲಗಿದ
ನಿಸ್ತೇಜ ಕಣ್ಣುಗಳು ಮಂಜಾಗುತ್ತವೆ.
ಒಳಗಿರುವ ಪ್ರಿಯತಮೆಯರ
ಪ್ರಿಯಕರರ
ಫೋನ್‌ಗಳಿಗೆ ಸಿಗ್ನಲ್ಲೇ ಸಿಗಬಾರದು,
ಎಷ್ಟಾದರೂ
ವೃದಾಪ್ಯಕ್ಕೆ ಹರೆಯ
ನಡುವೆ ನಾಟ್ ರೀಚೇಬಲ್!
4 Comments
October 8, 2008 at 10:17 am
ಚೆಂದ, ಚೆಂದದ ಕವಿತೆ..
October 10, 2008 at 10:02 am
ಯಾರ್ರಿ ಇದು ಬರೆದಿದ್ದು? ನಾವ್ಯಾರಿಗೆ ಅಂತ ಬೆನ್ನುತಟ್ಟಬೇಕು? ಕಳ್ಳನೋ ಕುಳ್ಳನೋ? ಆಮೇಲೆ ಹೇಳಿ ಅದೆಲ್ಲ. ಬಟ್ ಚೆನ್ನಾಗಿದೆ ಕವನ
October 10, 2008 at 2:35 pm
ಕಾಲ್ ಮಿಸ್ ಕಾಲ್ ಗಳ ಮಧ್ಯೆ ಇರುವ ಕಾಲ…ಇದನೆಲ್ಲ ಹಿಡಿದಿಡಲು ಕವಿತೆಗೆ ಮಾತ್ರ ಸಾಧ್ಯವೇನೋ…ಖುಷಿ ಕೊಟ್ಟಿತು ಕವನ..
November 3, 2008 at 3:34 pm
kavithe chennagide kulla heege bari