November 1, 2008

ಜೋಡು ಹಾದಿ, ಹೂ ಹಾದಿ

ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು ಕೊಂದುಕೊಳ್ಳದಿದ್ದರೆ ಏನೋ ಪುಣ್ಯ. ಆದಕ್ಕಾಗಿ ಒಂದೇ ಕ್ಷಣ `ಅಬ್ಬಾ, ಸದ್ಯ’ ಎಂಬ ನಿಟ್ಟುಸಿರು. ಆ ಕ್ಷಣದಿಂದಲೇ ಬಾಡತೊಡಗುತ್ತದೆ ಪರಿಮಳದೊಂದಿಗೆ ಮಲ್ಲಿಗೆಯ ತನುಮನ. ಬಿಳಿ ಕಂದಾಗುತ್ತದೆ, ಕೆಂಪಾಗುತ್ತದೆ, ಎಳೆದರೂ ಜಗ್ಗದ ರಬ್ಬರಾಗುತ್ತದೆ, ತನ್ನ ಸೂತ್ರವನ್ನು ಕಿತ್ತುಕೊಂಡು ಕಸವಾಗುತ್ತದೆ.
ಅಸಂಖ್ಯ [...]

November 1, 2008

speak everyday KANNADA!

ಟೀವಿ, ಎಫೆಮ್‌, ಇಂಟರ್‌ನೆಟ್‌, ಬ್ಲೂಟೂತ್‌, ಐಪಾಡ್‌, ಎಂಪಿಥ್ರೀ, ಕ್ಯಾಬ್‌, ಐಟಿ ಫರ್ಮ್‌0ಗಳ ಸಂತೆಯೊಳಗೆ ಒಂದು ಇನ್ನೊಮ್ಮೆ ಕನ್ನಡ ರಾಜ್ಯೋತ್ಸವ ಆಗಮಿಸಿದೆ. `ರಾಜ್ಯೋತ್ಸವಕ್ಕೆ ನಾವೊಂದು ಕಾಂಟೆಸ್ಟ್‌ ಮಾಡಿದ್ದೇವೆ. ನಿನೀವು ವಿನ್‌ ಆದರೆ ಲಾಟ್ಸ್‌ ಆಫ್‌ ಪ್ರೈಸಸ್‌ ಇದೆ. ಪಾರ್ಟಿಸಿಪೇಟ್‌ ಮಾಡಿ’ ಎಂಬಂಥ ಭಾಷಾಪ್ರಪಂಚದಲ್ಲಿ ನಾವು ಅನಿವಾರ್ಯವಾಗಿ ರಾಜ್ಯೋತ್ಸವ ಆಚರಿಸಬೇಕು.
ಇದರ ಜವಾಬ್ದಾರಿಯನ್ನು ನಾವು ನೀವು ಜಾಗತೀಕರಣದ ಮೇಲೆ ಹಾಕಿ ಕುಳಿತುಕೊಳ್ಳಬಹುದು. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಜವಾಬ್ದಾರರು. ಕನ್ನಡದವರೇ ಅಂಗಡಿಗಳ ಮಾಲೀಕರಾದರೂ ಬಂದ ಗಿರಾಕಿಗಳ ಜೊತೆ ಅವರದೇ ಭಾಷೆಯಲ್ಲಿ ವ್ಯವಹರಿಸಿ, [...]