ಶಿಲ್ಪವಾದಾಗಲೇ ಶಿಲೆಗೆ ಪಾಪ ವಿಮೋಚನೆ. ದೇವರ ಮುಡಿ ಸೇರುವುದೇ ಹೂವಿನ ನಿಜವಾದ ಮುಕ್ತಿ ಕಲ್ಪನೆ. ಮುಡಿ ಏರದ ಹೂವೂ, ಶಿಲ್ಪವಾಗದ ಕಲ್ಲೂ ಶಪಿತ ಗಂಧರ್ವರಿಗೆ ಸಮ. ಇಂಥ ಶಪಿತ ಗಂಧರ್ವ ಶಿಲಾತಪಸ್ವಿಗಳಿರುವ ಹಂಪಿಗೆ ಇತ್ತೀಚೆಗೆ `ಉತ್ಸವ’ದ ಉತ್ಸಾಹ.
ಮಂತ್ರಿಗಳ ಭಾಷಣವೂ, ಸ್ಥಳೀಯ ಮುಖಂಡರ ಪ್ರತಿಷ್ಠೆಯೂ, ಅವ್ಯವಸ್ಥೆಯ ಆಗರವೂ ಆದ ಈ `ಉತ್ಸವ’ ನಿಜವಾಗಿಯೂ ಖುಷಿ ಕೊಟ್ಟಿದ್ದು ಕಲ್ಲುಗಳಿಗೆ ಮಾತ್ರ. ಮೂರು ದಿನಗಳ ಕಾಲ ಅವುಗಳಿಗೆ ಯಾತ್ರಿಕರ ಜೊತೆ ಓಡಾಟ, ಮೌನ ಸಂಭಾಷಣೆಯ ಒಡನಾಟ. ಮೂರು ದಿನ `ಕಲ್ಲು ಕರಗಿದ [...]