`ಎಲ್ಲರೊಳಗೂ ಒಂದೆ ಕತೆ ಇರುತ್ತದೆ’ ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ’ ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ’ ಮಾಡಲಿದೆ. ಒಂದಿಷ್ಟು ರೀಮೇಕ್, ಒಂದಿಷ್ಟು ಸ್ವಮೇಕ್ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ [...]