November 19, 2008

ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ

ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವನ್ನು ಮಾತಾ­ಡಿ­ಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗು­ವಿನ ಅರ್ಪ­ಣಾ­ಭಾವ, ವಾತಾ­ವ­ರ­ಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾ­ಸ­ನೆ­ಗಳು ಒಂದಾ­ಗು­ತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗು­ವಿಗೂ ಜೋಗುಳ ವರ.
ಹಾಗೆ ನೋಡಿ­ದರೆ ಜೋಗುಳ ಎಲ್ಲರ ಎದೆ­ಯೊ­ಳ­ಗಿ­ರುವ ಒಂದು ಆಕಾ­ರ­ವಿ­ಲ್ಲದ ಭಾವ. ಅಲ್ಲಿ ರಾಗ­ಜ್ಞಾನ ಚೆನ್ನಾ­ಗಿ­ರ­ಬೇ­ಕಾ­ಗಿಲ್ಲ, ಸಾಹಿ­ತ್ಯದ ಹಂಗಿಲ್ಲ, ಜೋಗುಳ ಹಾಡು­ವು­ದನ್ನು ಯಾರಾ­ದರೂ ಮೆಚ್ಚಿ ಅಭಿ­ನಂ­ದಿ­ಸಲಿ [...]