ಜೋಗುಳ ಎನ್ನುವುದು ಒಂದು ಅತ್ಯಂತ ಮಾನವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗುವಿನ ಉಸಿರಾಟದ ಲಯವನ್ನು ಮಾತಾಡಿಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗುವಿನ ಅರ್ಪಣಾಭಾವ, ವಾತಾವರಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾಸನೆಗಳು ಒಂದಾಗುತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗುವಿಗೂ ಜೋಗುಳ ವರ.
ಹಾಗೆ ನೋಡಿದರೆ ಜೋಗುಳ ಎಲ್ಲರ ಎದೆಯೊಳಗಿರುವ ಒಂದು ಆಕಾರವಿಲ್ಲದ ಭಾವ. ಅಲ್ಲಿ ರಾಗಜ್ಞಾನ ಚೆನ್ನಾಗಿರಬೇಕಾಗಿಲ್ಲ, ಸಾಹಿತ್ಯದ ಹಂಗಿಲ್ಲ, ಜೋಗುಳ ಹಾಡುವುದನ್ನು ಯಾರಾದರೂ ಮೆಚ್ಚಿ ಅಭಿನಂದಿಸಲಿ ಎಂಬ ಅಪೇಕ್ಷೆಯಿಲ್ಲ. ತನ್ನ ಕರುಳಿನ ಕೊಡುಗೆಯನ್ನು ಅಮ್ಮ ಮಲಗಿಸುತ್ತಾಳೆ, ಮಲಗಿಸುತ್ತುನುನುನು’ ಅಂತ ಹಾಡುತ್ತಾಳೆ, ರಾಗ ಬದಲಾದುದನ್ನೂ ಗಮನಿಸದಾಗುತ್ತಾಳೆ. ಇಲ್ಲಿ ಬೇಕಾಗಿರುವುದು ಎರಡು ಮನಸ್ಸಗಳ ನಡುವಿನ ಒಂದು ಭಾವ ಮಾತ್ರ.
ಅಷ್ಟೇ ಆಲ್ಲ, ಜೋಗುಳ ತಾಯ್ತನದ ಪ್ರತೀಕ. ಮಗು ಹುಟ್ಟಿ ಬೆಳೆಯುವರೆಗೆ ಆಮ್ಮ ಜೊಗುಳ ಹೇಳುತ್ತಾಳೆ. ಜೋಗುಳ ಕೇಳಿ ಮಗು ಬೆಳೆದು, ಜೋಗುಳವನ್ನು ಮರೆಯಬಹುದು. ಒಂದು ಕಾಲಕ್ಕೆಅಮ್ಮನ ಜೋಗುಳಕ್ಕೆ ಹಠ ಮಾಡುತ್ತಿದ್ದ ಮಗ/ಳು ನಿಧಾನವಾಗಿ ಬದುಕಿನ ಕುಲುಮೆಯಲ್ಲಿ ಬದಲಾಗುತ್ತಾ ಹೋಗುತ್ತಾನೆ/ಳೆ. ಆಗ ತನ್ನ ಮಗ/ಳು ತನ್ನ ಅಂತ್ಯಕಾಲದ ಹೊತ್ತಿಗೆ ಹಾಡಬಹುದಾದ ಮೌನ ಜೋಗುಳಕ್ಕಾಗಿ ಕಾಯುತ್ತಾಳೆ ಅಮ್ಮ. ತನ್ನ ಕೆನ್ನೆಯ ಮೇಲೆ ನೇವರಿಸುವ ತನ್ನ ಕುಡಿಯ ಕೈಗಾಗಿ ಅಮ್ಮ ಈ ಜಗದ ತೊಟ್ಟಿಲಲ್ಲಿ ಮಲಗಿ ಮೌನವಾಗಿ ಅಳುತ್ತಾಳೆ.
ಅಮ್ಮನಿಗೆ ಮಗು ತಾಯಿ
ಮಗುವೇ ಆಮ್ಮನ ಕಾಯಿ!
***
ಇದೀಗ ಅಮ್ಮನ ರೀತಿ ಬೇರೆ, ಮಗುವಿನ ರೀತಿ ಬೇರೆ. ಜೋಗುಳ ಇಲ್ಲೀಗ ಇನ್ನಷ್ಟು ಸಾಂಕೇತಿಕ. ಬೇಬಿಸಿಟಿಂಗ್ನಲ್ಲಿ ತನ್ನ ಮಗುವನ್ನು ಬಿಟ್ಟ ಆಮ್ಮ, ಗಡಿಬಿಡಿಯಲ್ಲಿ ಕಂದನನ್ನು ಮುದ್ದಿಸಿ ಹೊರಟರೆ ಅದೇ ಮಗುವಿನ ಪಾಲಿನ ಜೋಗುಳ. ರಾತ್ರಿ ಆಯಾಳ ಕೈಯಲ್ಲಿ ಮಗುವನ್ನು ಬಿಟ್ಟು ಗಂಡ, ಹೆಂಡತಿ ನೈಟ್ ಶಿಫ್ಟ್‌ಗೆ ಹೊರಟು ನಿಂತಾಗ ಮಗುವಿನೆಡೆ ಆ ಪೋಷಕರು ಎಸೆದ ಒಮದು ಮಮತೆಯ ನೋಟವೇ ಆ ಮಗುವಿನ ಪಾಲಿಗೆ ಜೋಗುಳ. ಸರೋಗೇಟ್ ಮದರ್, ಸಿಂಗಲ್ ಪೇರೆಂಟಿಂಗ್ ಎಂಬೆಲ್ಲಾ ತಂತ್ರಜ್ಞಾನಪ್ರೇರಿತ ತಾಯ್ತನದ ಜಗತ್ತಲ್ಲಿ ಮನೆ ಮನೆಯ ರಾಮ, ಕೃಷ್ಣ, ಚಂದ್ರಹಾಸರು ದಿಕ್ಕೆಟ್ಟು ನೋಡುತ್ತಿದ್ದಾರಾ? ಮಡಿಲಲ್ಲಿ ಮಗು ನಲಿಯೇ, ನಲಿದ ಮಗುವೂ ಮಡಿಲಲ್ಲಿ ನಿಲ್ಲದೇ ಯಶೋದೆ, ದೇವಕಿಯರು ಕಂಗಾಲಾಗಿದ್ದಾರಾ?
ತಾಯ್ತನದ ಹಲವು ಮುಖಗಳನ್ನು ಹೊತ್ತ ಧಾರಾವಾಹಿಯೊಂದು ಇದೇ ನವೆಂಬರ್ 24ರಿಂದ ಝೀ ಚಾನಲ್ನಲ್ಲಿ ಪ್ರಸಾರವಾಗುತ್ತಿದೆ. `ಪ್ರೀತಿ ಇಲ್ಲದ ಮೇಲೆ’ ಎಂಬ ಜನಪ್ರಿಯ ಧಾರಾವಾಹಿಯ ಚುಕ್ಕಾಣಿ ಹಿಡಿದಿದ್ದ ವಿನು ಬಳಂಜ ಅವರೇ ಈ ಧಾರಾವಾಹಿಯ ನಿರ್ದೇಶಕ. ಹೆಸರು: ಜೋಗುಳ. `ನಚಿಕೇತ್’ ಬರೆದ ಕತೆಗೆ ಚಿತ್ರಕತೆ ಸಿದಪಡಿಸಿರುವವರು ಪತ್ರಕರ್ತ ಸತ್ಯಮೂರ್ತಿ ಆನಂದೂರು. ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯ ದೊಡ್ಡ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮ (ಶಿವು) ಈ ಧಾರಾವಾಹಿಗೆ ಸಂಗೀತ ನೀಡುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. 24ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಬರೆದಿದ್ದು ವಿಕಾಸ ನೇಗಿಲೋಣಿ.
ಆದರ ಪೂರ್ಣಪದ್ಯ ಇಲ್ಲಿದೆ:
ಭಾವಗಳ ತೊಟ್ಟಿಲಲ್ಲಿ ಮನಸೇ ಮಗುವಾಗಿ
ಲಾಲಿಯ ಹಾಡಲಿ ಜಗವೆಲ್ಲಾ
ಜೋಜೋ ಜೋಜೋ…
ಕಿಲಕಿಲ ನಗುವಿನ ಶ್ಯಾಮನೇ
ತೆರೆಸಲಿ ಹೃದಯದ ಕಣ್ಣನೇ
ಮನೆ ಮನದ ಕನಸಾಗು
ಕನಸೇ ನೀ ಉಸಿರಾಗು
ಕನಸಿನ ತೇರಲಿ ಬಯಕೆಗಳ ಆಗಮನ
ಪಯಣದ ದಾರಿಯಲಿ ಹೆಜ್ಜೆ ಹೆಜ್ಜೆಯೂ ರೋಮಾಂಚನ
ಎಲ್ಲರ ಎದೆಯೊಳಗೆ ಮಗುವೊಂದು ಮಲಗಲಿ
ಸದ್ದು ಮಾಡದೇ ಅಮ್ಮ ಮುದ್ದಿಸಲಿ
ಜೋ ಜೋ ಎಂದರೆ ಕಂದನಿಗೆ ಸವಿಹಾಲು
ಜೋಗುಳದ ಪ್ರೀತಿಯಲಿ ಎಲ್ಲರಿಗೂ ಸಮಪಾಲು
ಕಿರುಗೆಜ್ಜೆ ಲಜ್ಜೆಗೆ ಜೋ ಜೋ
ಬೆಳೆಯೋ ಹೆಜ್ಜೆಗೆ ಜೋ ಜೋ

6 Comments
November 19, 2008 at 11:59 am
ಎಲ್ಲರ ಎದೆಯೊಳಗೆ ಮಗುವೊಂದು ಮಲಗಲಿ… ತುಂಬಾ ಚೆನ್ನಾಗಿದೆ. ಕಂಗ್ರಾಟ್ಸ್ ವಿಕಾಸ್.
ಮೊನ್ನೆ ‘ಕಳ್ಳ’ ಸಿಕ್ಕಿದ್ದರು. ಈ ಹಿಂದೆ ಒಂದು ರಾತ್ರಿ ಸಿಕ್ಕಿದ್ದರು. ಆಗ ನಾನೇ ಕಳ್ಳನಂತೆ ತಪ್ಪಿಸಿಕೊಂಡೆ
-ಜಿ ಎನ್ ಮೋಹನ್
November 20, 2008 at 5:41 am
“ಎಲ್ಲರ ಎದೆಯೊಳಗೆ ಮಗುವೊಂದು ಮಲಗಲಿ
ಸದ್ದು ಮಾಡದೇ ಅಮ್ಮ ಮುದ್ದಿಸಲಿ”
ಸೂಪರ್ ಸಾಲುಗಳು ಸರ್..:)
November 20, 2008 at 1:03 pm
A promising lyricist in the making!
November 30, 2008 at 9:06 pm
Dear Vikas,
yesterday first time I saw the ‘Jogula” ad on Zee Kannada. one moment i was really stunned at the lines
ಎಲ್ಲರ ಎದೆಯೊಳಗೆ ಮಗುವೊಂದು ಮಲಗಲಿ
ಸದ್ದು ಮಾಡದೇ ಅಮ್ಮ ಮುದ್ದಿಸಲಿ
really, they are lyrical genious. thanks for adding some value to the TV serials.
December 1, 2008 at 12:36 pm
ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ರಂಜಿತ್, ಪ್ರಶಾಂತ್ ರೈ, ವೆಂಕಟರಮಣ ಹೆಗಡೆ, ಜಿ ಎನ್ ಮೋಹನ್ ಅವರಿಗೆಲ್ಲಾ ಧನ್ಯವಾದಗಳು!
ಎಲ್ಲರೂ ನನಗಿಷ್ಟವಾದ ಸಾಲನ್ನೇ ಮೆಚ್ಚಿಕೊಂಡಿದ್ದಕ್ಕೆ ನನಗೆ ಇನ್ನಷ್ಟು ಹೆಚ್ಚು ಸಂಭ್ರಮವಾಯಿತು. ವೆಂಕಟರಮಣ ಹೆಗಡೆ ಅವರ ಮಾತಿಗೊಂದು ಸಣ್ಣ ಸ್ಪಷ್ಟನೆ.
ಇತ್ತೀಚೆಗೆ ಹಿರಿಯ ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಿದ್ದರು: ಹಿಂದಿ ಧಾರಾವಾಹಿಗಳಿಗೆ ಹೋಲಿಸಿದರೆ ಕನ್ನಡ ಧಾರಾವಾಹಿಗಳ ಸಂಸ್ಕೃತಿ ಅಷ್ಟು ಹದಗೆಟ್ಟಿಲ್ಲ!
ಟೀವಿ ಕಾರ್ಯಕ್ರಮಗಳ ಮೌಲ್ಯವನ್ನು ಹೆಚ್ಚಿಸಿದ್ದೀರಿ ಎಂಬ ದೊಡ್ಡ ಮಾತನ್ನು ವೆಂಕಟರಮಣ ಅವರು ಹೇಳಿದ್ದೀರಿ, ಅದು ನನಗೆ ಸಿಕ್ಕ ಅಪೂರ್ವ ಕಾಮೆಂಟ್ ಎನ್ನುತ್ತಾ ವಿನಮ್ರನಾಗಿ ಸ್ವೀಕರಿಸುತ್ತೇನೆ.
ನಿಮ್ಮೆಲ್ಲರ ಪ್ರೀತಿಯ
ವಿಕಾಸ್ ನೇಗಿಲೋಣಿ
February 25, 2009 at 3:29 pm
ee tanaka nodida Dharavahigalli edu atuthamavagi moodi barutha ede.Nijavagi edu Bhavanegala tottilu.Kannalle abinaya sochiso kalavidaru ee Dharavahiya + point.Nannanta sanna kalavidaru entaha apporva avakashakkagi entaha patragaligagi kayuthirutheve.Jogulada title musicgagi kayuthirutheve.uttama kathe, olleya kalavidaru, olleya title track kottadakkagi dhanyavadagalu.