ದೊಡ್ಡ ಮನೆಯಲ್ಲಿ ಅಪ್ಪ ಇದ್ದಾನೆ. ಅವನ ಸಂಗಡ ಅವನ ಕೊನೆಯ ಮಗ ಇದ್ದಾನೆ. ಅಪ್ಪನಿಗೆ ಆ ಹಳೆಮನೆಯ ಮಾಸಲು ಗೋಡೆಗಳ ಮಧ್ಯೆ ಬದುಕಿದರೆ ಮಾತ್ರ ಜೀವ ಆಡುತ್ತದೆ. ಅವನ ಕೊನೆಯ ಮಗನಿಗೆ ಸಂಗೀತ ಎಂದರೆ ಪ್ರಾಣ. ಗಂಡ ತೀರಿಕೊಂಡ ನಂತರ ಅಪ್ಪನ ಮನೆಯಲ್ಲೇ ಉಳಿದಿರುವ ಹೆಣ್ಣು ಮಗಳೊಬ್ಬಳು ಈ ಹುಡುಗನಿಗೆ ಸಂಗೀತಪಾಠ ಮಾಡುತ್ತಾಳೆ. ಆದರೆ ಅವಳ ತಮ್ಮನಿಗೆ ಇದು ಸರಿಬರುವುದಿಲ್ಲ. ಆ ತಮ್ಮ ಯಾವುದೋ ಬಿಸಿನೆಸ್ ಎಂದು ಓಡಾಡುತ್ತಾನೆ. ಮೊಬೈಲ್ ತೆಗೆದುಕೊಂಡು, ಅಪ್ಪ ಅಮ್ಮನಿಗೆ ಅದನ್ನು ತೋರಿಸಿ [...]