ಈ ಡಿಸೆಂಬರ್ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿದೆ. ಭಯೋತ್ಪಾದಕ ಕೃತ್ಯಗಳಿಂದಾಗಿ ಯಾರೂ ನೆಮ್ಮದಿಯಾಗಿ ಆಫೀಸಿಗೆ, ಸಿನಿಮಾಕ್ಕೆ, ಶಾಪಿಂಗ್‌ಗೆ ಹೋಗುತ್ತಿಲ್ಲ. ಚಿತ್ರಮಂದಿರಗಳಿಗೆ, ಮಾಲ್‌ಗಳಿಗೆ ವ್ಯಾಪಾರವಿಲ್ಲ. ಜನ ಸಂಚಾರದಲ್ಲಿ ಒಂದು ಬಗೆಯ ದುಗುಡ.
ಎಲ್ಲಕ್ಕೂ ಮುಖ್ಯವಾಗಿ ಡಿಸೆಂಬರ್ ಮಹಾ ಚಳಿಯ ತಿಂಗಳು. ಬೆಂಗಳೂರಿನಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇದ್ದಂತಿಲ್ಲ. ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು. ಆಮೇಲೆ ಬಿಸಿಲಿಗೆ ಮೈ, ಕೈ ಒಡೆದುಕೊಂಡು ಇಡೀ [...]