January 9, 2009

`ಬಿದ್ದು ಸಾಯಲು ನೀರಿದ್ದ ಬಾವಿಯೇ ಆಗಬೇಕಿಲ್ಲ’

ಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ’ ಎಂದು ಒಂದು ಸಂಕಲನವನ್ನು ಹೊರತಂದು, ಬರೀ ಸೂರ್ಯನ ಮೇಲೆ ಒಂದು ಸಂಕಲನವಿಡೀ ಕವಿತೆಗಳನ್ನು ಬರೆದುಕೊಟ್ಟಿದ್ದರು. `ಸೂರ್ಯ, ಇನ್ನೊಂದು ಲೋಕದ ಕಿಂಡಿ’, `ಸೂರ್ಯ- ಇಡೀ ಲೋಕದ ಕಸವನ್ನು ಕಿರಣಗಳ ಕಸಬರಿಕೆಯಿಂದ ಗುಡಿಸುವ ಜಾಡಮಾಲಿ’ ಎಂಬಂಥ ಹೊಳಹುಗಳಿದ್ದ ಸಂಕಲನ ಅದು.
ಆದರೆ ಶಾ ಬಾಲುರಾವ್‌ ಅವರು ಬಹಳ ಚೆಲುವಾದ ಕವಿತೆಗಳನ್ನು ಬಹಳ ಹಿಂದೆ ಪ್ರಕಟಿಸಿದ್ದರು. `ನಡೆದದ್ದೇ ದಾರಿ’ ಎನ್ನುವುದು ಆ ಸಂಕಲನದ ಹೆಸರು. ಒಟ್ಟು ನಲವತ್ತೆಂಟು ಕವಿತೆಗಳಿವೆ [...]