Entries from March 2009

March 26, 2009

ಜಗದಗಲ, ಮುಗಿಲಗಲ, ಹೆದ್ದಾರಿಯಗಲ

 
ನಮ್ಮಜ್ಜಿ ನಾವು ಚಿಕ್ಕವರಿದ್ದಾಗ ಬೈಯುತ್ತಿದ್ದರು. ‘ಬಾಗಿಲ ಮೇಲೆ ಕುಳಿತುಕೊಳ್ಳಬೇಡ. ದೇವರು ಕೂರೋ ಜಾಗ’ ಅಂತ. ಆದರೆ ನಾವು ಅವಳ ಕಣ್ಣು ತಪ್ಪಿಸಿ ತಪ್ಪಿಸಿ, ಅವಳ ಮಾತನ್ನು ದಿಕ್ಕರಿಸುತ್ತಿದ್ದೆವು. ಮತ್ತದು ಅನಿವಾರ್ಯ ಕೂಡ ಆಗಿತ್ತು. ನಮ್ಮಂಥ ಮಧ್ಯಮವರ್ಗದ ಮನೆಗಳೂ, ಅದರ ಬಾಗಿಲುಗಳೂ ಅರಮನೆಯ ದಪ್ಪ ಬಾಗಿಲಂತೆ, ಗೋಡೆಗಳಂತೆ ವಿಸ್ತಾರ ಅಲ್ಲ. ಆದರೆ ಅದೇ ಕಿರಿದು ಬಾಗಿಲಲ್ಲಿ ನಾನು, ನನ್ನ ತಮ್ಮ, ಅಣ್ಣ, ಪಕ್ಕದ ಮನೆಗೆ ಬಂದ ಪುಟಾಣಿ ನೆಂಟ, ಅತ್ತೆ ಮಗಳು, ಮಾವನ ಮಗ….ಎಲ್ಲರೂ ಸೇರುತ್ತಿದ್ದೆವು. ಮನೆ ಕಿರಿದಾಗಿದ್ದಷ್ಟೂ [...]

March 22, 2009

ಕಳ್ಳತನವ ಮಾಡಲಿಕ್ಕೆ ಮತ್ತೆ ಸಮಯವು!

 
ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ  ಕೆಲಸದ ಒತ್ತಡ, ತಿರುಗಾಟ ಮೊದಲಾದ ಕಾರಣಕ್ಕೆ ಮುಚ್ಚಿದ್ದ `ಕಳ್ಳಕುಳ್ಳ’ರ ಬ್ಲಾಗಂಗಡಿಯ ಶೆಟ್ಟರ್ ಮತ್ತೆ ಕರಗುಟ್ಟುತ್ತಾ ತೆರೆದುಕೊಳ್ಳುತ್ತಿದೆ. ಒಳಗೆ ಧೂಳಿದ್ದರೆ ಬೈಬಾರದು. ಈ ಎರಡು ತಿಂಗಳಲ್ಲಿ ಸಣ್ಣ ಸಣ್ಣ, ಆದರೆ ಸಾಂಸ್ಕ್ರತಿಕವಾಗಿ ಮುಖ್ಯವೆನ್ನುವಂಥ ಘಟನೆಗಳು ನಡೆದಿವೆ. ಅದನ್ನೆಲ್ಲಾ ಇಲ್ಲಿ ಮಾತಾಡೋಣ.
Let’s restart with hopes…