Archive for March 30, 2010

ಲೇಖನ, ಕತೆ, ವಿಮರ್ಶೆ, ವಾದ, ವಿವಾದ, ಪ್ರಮಾದ, ವಿಷಾದ ಪತ್ರಗಳ ರಾಶಿಯ ಮಧ್ಯೆ ಮುಗ್ಧವಾಗಿ ಸಿಗುವುದು ಹಾಗೂ ಹಾಯಾಗಿ ನಗುವುದು ಎಂದರೆ ಅದು ಕವಿತೆ ಮಾತ್ರ. ಅಂಥ ಹೊಸ ಕವಿತೆ, ನಿಮಗಾಗಿ…   ನಾನು ನಾನಾಗಿಯೇ ಈ ಬೀದಿಗಳಲ್ಲಿ ಓಡಾಡುವುದಿಲ್ಲ. ನನ್ನ ಕಾಲ್ಗಳು ಒಂದೆಡೆ, ನನ್ನ ಭಾವನೆ ಒಂದೆಡೆ ನನ್ನ ಬುದ್ಧಿ ಒಂದು ಕಡೆ, ನನ್ನ ಸಂಬಂಧ, ನನ್ನ ಪ್ರೀತಿ  ನನ್ನ ದ್ವೇಷ, ನನ್ನ ರೋಷ, ನನ್ನ ಅರ್ಧ ಕನಸು, ನನ್ನ ಪಾಪಪ್ರಜ್ಞೆ ಒಂದೊಂದು ಬೀದಿಗಳಲ್ಲಿ ರಾತ್ರೋರಾತ್ರಿ [...]