ಕೆ ಜಿ ಶಂಕರ ಪಿಳ್ಳೆ. ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.
ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ’, `ಬೊಕ್ಕ’, `ತರಾವರಿ [...]
Entries Tagged as ‘Uncategorized’
January 5, 2009
`ಹೆಣ್ಣಾಗಿದ್ದರೆ ನಾನೂ ವೇಶ್ಯೆಯಾಗುತ್ತಿದ್ದೆ’
November 28, 2008
ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು
ಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ’ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ’ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ [...]
November 26, 2008
ಪತ್ರಕರ್ತನ ಪತ್ರಕತೆ
ಸುರೇಶ್ ಕೆ `ಉದಯವಾಣಿ’ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ’ ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್ ಅಚಾನಕ್ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್ ಲೇಖನಕ್ಕೆ ಬಂದು ನಿಂತಿರುವ ನಮ್ಮ [...]
November 19, 2008
ಕಿರುಗೆಜ್ಜೆ ಲಜ್ಜೆಗೆ ಜೋ ಜೋ
ಜೋಗುಳ ಎನ್ನುವುದು ಒಂದು ಅತ್ಯಂತ ಮಾನವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗುವಿನ ಉಸಿರಾಟದ ಲಯವನ್ನು ಮಾತಾಡಿಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗುವಿನ ಅರ್ಪಣಾಭಾವ, ವಾತಾವರಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾಸನೆಗಳು ಒಂದಾಗುತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗುವಿಗೂ ಜೋಗುಳ ವರ.
ಹಾಗೆ ನೋಡಿದರೆ ಜೋಗುಳ ಎಲ್ಲರ ಎದೆಯೊಳಗಿರುವ ಒಂದು ಆಕಾರವಿಲ್ಲದ ಭಾವ. ಅಲ್ಲಿ ರಾಗಜ್ಞಾನ ಚೆನ್ನಾಗಿರಬೇಕಾಗಿಲ್ಲ, ಸಾಹಿತ್ಯದ ಹಂಗಿಲ್ಲ, ಜೋಗುಳ ಹಾಡುವುದನ್ನು ಯಾರಾದರೂ ಮೆಚ್ಚಿ ಅಭಿನಂದಿಸಲಿ [...]
November 14, 2008
ಕತೆ ಹೇಳುವೆ, ಕೇಳುವಂತವನಾಗು
ಈ ದಾರಿ ಸುಸ್ತು ಕಡಿಮೆ ಮಾಡಲು ನಿನಗೆ ನಾನೊಂದು ಕತೆ ಹೇಳುತ್ತೇನೆ.
ಹೀಗೆ ನಮ್ಮ ಅನೇಕ ಜನಪದ ಕತೆಗಳು ಶುರುವಾಗುತ್ತವೆ. ಗಿಳಿ ಕತೆ ಹೇಳಿದ್ದು, ಬೇತಾಳ ಕತೆ ಹೇಳಿದ್ದು ನಮಗೆಲ್ಲಾ ಗೊತ್ತು.
ಆದರೆ ಇಲ್ಲಿ ಸ್ವಲ್ಪ ತಾಂತ್ರಿಕವಾಗಿ ಅಪ್‌ಡೇಟ್ ಆಗಿ `ಬ್ಲಾಗ್’ ಕತೆ ಹೇಳುತ್ತದೆ. ಕಳ್ಳಕುಳ್ಳ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟ ಕತೆಯನು’ ಮಾಲಿಕೆಯಲ್ಲಿ ಕತೆ ಶುರುವಾಗುತ್ತದೆ ಎಂದು ನಿನ್ನೆ ಹೇಳಲಾಗಿತ್ತಲ್ಲಾ, ಹೌದು ಕತೆ ಶುರುವಾಗುತ್ತದೆ.
ಅದಕ್ಕಾಗಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ. ಕತೆ ಹೇಳುವವರು ಈಗ ರೆಡಿ ಆಗುತ್ತಿದ್ದಾರೆ. ನೆಟ್ ಡೌನ್ [...]
November 8, 2008
ಬಾಲ ದಾರಿಯಲ್ಲಿ ಸೂರ್ಯ ಜಾರಿಹೋದ
ಬೀದೀಲಿ ಬಿದ್ದೋರು, ಸದ್ದಿಲ್ಲದೇ ಇದ್ದೋರು, ಒಳಗೊಳಗೇ ಅತ್ತೋರು ನನ್ನ ಜನಗಳು…
`ನನ್ನ ಜನಗಳು’ ಎಂಬ ಸಿದಲಿಂಗಯ್ಯ ಅವರ ಕವಿತೆಯಲ್ಲಿ ಬರುವ ಮೇಲ್ಕಂಡ ಸಾಲಲ್ಲಿ ಇರುವ ಸಂಕಟ ಅಸಾಧಾರಣವಾದುದು. `ಸ್ಲಂ ಬಾಲಾ’ ಚಿತ್ರದಲ್ಲೂ ಆ ವೇದನೆ, ಸಂಕಟ ಇದೆ. `ಸೈಜುಗಲ್ಲು ಹೊತ್ತೋರು’ ದಲಿತರಾದರೆ ಮಂತ್ರಿಗಳ ಸಾಮ್ರಾಜ್ಯಕ್ಕೆ `ಸೈಜುಗಲ್ಲಾಗಿ’ ಹೋಗುವವ ಸ್ಲಂ ಬಾಲಾ. ಅವರ ರಾಜಕೀಯ ಹಾದಿಯನ್ನು ವಿರೋದಿಗಳಿಂದ ಮುಕ್ತ ಮಾಡುತ್ತಾ, ತನ್ನ `ದೊಡ್ಡೋರ’ ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನೂ ಬಲಿ ಕೊಡುತ್ತಾ, ಅವರ ಚುನಾವಣಾ ಸಾಫಲ್ಯಕ್ಕಾಗಿ ಕೊಲೆಗಿಲೆ ಮಾಡುತ್ತಾ ಬಾಲಾ ಬೆಳೆಯುತ್ತಾನೆ. [...]
October 29, 2008
ನೀ ಬಂದು ನಿಂದಿಲ್ಲಿ ಪಟಾಕಿ ಹಚ್ಚಾ!
ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ…
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್ ಕಾಯ್ಕಿಣಿ [...]
October 7, 2008
ಬಂದೇ ಬರತಾವ ಕಾಲ್
ಮಿಸ್ಡ್ ಕಾಲ್ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.
ಹಠಾತ್ ಸಿಗ್ನಲ್ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ’
October 1, 2008
ಗಾಂೀಸ್ಮೃತಿ
ಮತ್ತೊಮ್ಮೆ `ಅಕ್ಟೋಬರ್ 2′ ಬಂದಿದೆ. ಕೆಲವರು ಆ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ರಜೆ ಒದಗಿಸುವ ದಿನವಾಗಿ ನೋಡಿದ್ದಾರೆ. ಕೆಲವರು ಆ ದಿನ ಮದ್ಯ ಸರಬರಾಜಿಲ್ಲ ಎಂದು ಬೇಜಾರಾಗಿದ್ದಾರೆ. ಕೆಲವರು ಆ ದಿನ ಸತ್ಯಾಗ್ರಹದ ಡೇಟ್ ಆಗಿ ಇಟ್ಟುಕೊಂಡಿದ್ದಾರೆ. ಕೆಲವರಿಗೆ ಆ ದಿನ ಸರ್ಕಾರಕ್ಕೆ ತಮ್ಮ ಆಗ್ರಹ ನೀಡಲು ಪುಣ್ಯದಿನ.
ಕೆಲವರಿಗೆ ಮಾತ್ರ ಅದು ಗಾಂೀಜಿಯನ್ನು ನಿಜವಾಗಿ ನೆನಪು ಮಾಡಿಕೊಳ್ಳುವ ಸುದಿನ.
ಗಾಂೀಜಿ ಒಂದು ದಿನದ ಮಟ್ಟಿಗೆ ನೆನಪಾಗಬೇಕೇ ಎನ್ನುವುದು ಮತ್ತೂ ಕೆಲವರ ನೋವು. ಗಾಂೀಜಿ ಭಾರತ- ಪಾಕಿಸ್ತಾನವನ್ನು ಒಡೆದರು ಎಂಬುದು [...]
September 30, 2008
ಶ್ರೀಸಾಮಾನ್ಯನಿಗೆ ನಮಸ್ಕಾರ!
ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು.
ಆತನ ಹೆಸರು: ಶೇಷ ಅಲಿಯಾಸ್ ಶೇಷ ನಾಯ್ಕ.
ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ’ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್ ತಂದುಕೊಡುತ್ತಿದ್ದ, ಪೇಪರ್ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ [...]