ಜಗದಗಲ, ಮುಗಿಲಗಲ, ಹೆದ್ದಾರಿಯಗಲ
ನಮ್ಮಜ್ಜಿ ನಾವು ಚಿಕ್ಕವರಿದ್ದಾಗ ಬೈಯುತ್ತಿದ್ದರು. ‘ಬಾಗಿಲ ಮೇಲೆ ಕುಳಿತುಕೊಳ್ಳಬೇಡ. ದೇವರು ಕೂರೋ ಜಾಗ’ ಅಂತ. ಆದರೆ ನಾವು ಅವಳ ಕಣ್ಣು ತಪ್ಪಿಸಿ ತಪ್ಪಿಸಿ, ಅವಳ ಮಾತನ್ನು ದಿಕ್ಕರಿಸುತ್ತಿದ್ದೆವು. ಮತ್ತದು ಅನಿವಾರ್ಯ ಕೂಡ ಆಗಿತ್ತು. ನಮ್ಮಂಥ ಮಧ್ಯಮವರ್ಗದ ಮನೆಗಳೂ, ಅದರ ಬಾಗಿಲುಗಳೂ ಅರಮನೆಯ ದಪ್ಪ ಬಾಗಿಲಂತೆ, ಗೋಡೆಗಳಂತೆ ವಿಸ್ತಾರ ಅಲ್ಲ. ಆದರೆ ಅದೇ ಕಿರಿದು ಬಾಗಿಲಲ್ಲಿ ನಾನು, ನನ್ನ ತಮ್ಮ, ಅಣ್ಣ, ಪಕ್ಕದ ಮನೆಗೆ ಬಂದ ಪುಟಾಣಿ ನೆಂಟ, ಅತ್ತೆ ಮಗಳು, ಮಾವನ ಮಗ….ಎಲ್ಲರೂ ಸೇರುತ್ತಿದ್ದೆವು. ಮನೆ ಕಿರಿದಾಗಿದ್ದಷ್ಟೂ ಮಂದಿ ಹೆಚ್ಚುತ್ತಾ, ಅವಕಾಶ ಸಣ್ಣದಾಗುತ್ತಾ ಕೇಕೆ ದೊಡ್ಡದಾಗುತ್ತಾ ಮನೆಯೆಲ್ಲಾ ಗಲಗಲ ಎನ್ನುತ್ತಿತ್ತು. ಅಮ್ಮ ಅಡುಗೆ ಮಾಡುತ್ತಾ, ಅಪ್ಪ ಕೆಲಸದ ನಡುವೆ ಆಗಾಗ ಸೇರಿಕೊಳ್ಳುತ್ತಾ ನಮ್ಮ ಈ ಬೇಸಿಗೆ ರಜೆಯನ್ನು ಇಪ್ಪತ್ತಮೂರು ವರ್ಷಗಳ ಹಿಂದೆ ಮಧುರ, ಸುಂದರ ಮಾಡಿತ್ತು.

ನಮ್ಮ ಕಿರು ಬಾಗಿಲು, ದೇವರಿಗೂ ಕೂರಲು ಜಾಗ ಇರದ ಆವಾಸವಾಗಿ ದೇವರಂಥ ಮಕ್ಕಳ ಜೊತೆ ಖುಷಿಯಾಗುತ್ತಿತ್ತು.

ಬೇಸಿಗೆ ರಜೆಗೆ ಪೇಟೆಯ ಒಬ್ಬ ಮೊಮ್ಮಗ ಬರುತ್ತಾನೆ, ಬಂದವ ಅಷ್ಟೋ ಇಷ್ಟೋ ಆಡುತ್ತಾನೆ, ಕರೆಂಟ್ ಇಲ್ಲದೇ ಟಿ.ವಿ ಮುಂದೆ ಶತಪಥ ಹಾಕುತ್ತಾನೆ, ಕಂಪ್ಯೂಟರ್ ಗೇಮ್ ಇಲ್ಲವೆಂದು ಗಲಾಟೆ ಮಾಡುತ್ತಾನೆ, ನಾಲ್ಕು ದಿನಗಳ ‘ಸುದೀರ್ಘ’ ರಜೆ ಮುಗಿಸಿ, ರಾತ್ರಿ ಬಸ್ಸಿಗೆ ಹತ್ತಿ ಹಳ್ಳಿಯಿಂದ ಪಾರಾಗುತ್ತಾನೆ. ರಜೆಗೆಂದು ಪೇಟೆ ಸಂಸಾರ ವಾರಗಟ್ಟಲೆ ಹಳ್ಳಿಗೆ ದಾವಿಸುವುದಿಲ್ಲ. ಬಂದವರೂ ಎಲ್ಲಾ ಸೇರಿದರೂ ಒಂದು ಗುಂಪಾಗುವುದಿಲ್ಲ. ಒಂದೆರಡು ಸ್ವೀಟ್, ಹಲಸಿನಕಾಯಿ ಹುಳಿ, ಹಲಸಿನ ಹಪ್ಪಳಗಳನ್ನು ವಯಸ್ಸಾದ ಹೆಂಗಸು, ಪೇಟೆ ನೆಂಟರಿಗಾಗಿ ಮಾಡಲಾರಳು. ಮಾಡಿದರೂ ಕೊಂಡು ಹೋಗುವವರು ಎಷ್ಟು ಮಂದಿ?

ಈಗ ಬಾಗಿಲಲ್ಲಿ ಯಾವ ದಡಿಯ ದೇವರೂ ಕುಳಿತುಕೊಳ್ಳಬಹುದು!

ಕಿರಿದಾಗಿದ್ದನ್ನು ಹಿರಿದು ಮಾಡುವುದಕ್ಕೆ ಎಲ್ಲರೂ ಮುಂದು. ಹಳ್ಳಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಿರುವ ವೃದ್ಧ ಅಪ್ಪ-ಅಮ್ಮ ವಾಸ ಮಾಡುವ ಮನೆ ಕಿರಿದಾಯಿತು ಎಂದು ಲ್ಯಾಪ್ಟಾಪ್ ಲೋಲ ತನಯನಿಗೆ ಅನ್ನಿಸಿ ಅದನ್ನು ಜೀಣರ್ೋದ್ಧಾರ ಮಾಡುವ ಪ್ಲ್ಯಾನು ನಡೆಯುತ್ತಿದೆ. ಅಡಿಕೆ ರೇಟು ಕಡಿಮೆ ಕಡಿಮೆ ಆದರೆ ಇರುವ ಮನೆಯನ್ನು ಮಾರಿ ಹಾಕುವ ಆಲೋಚನೆ ಮಗರಾಯನದು.

ಕಿರಿ ಬಾಗಿಲು ಹಿರಿದು ಮಾಡಿ, ಕಿರು ಮನೆಯನ್ನು ಹಿರಿದಾಗಿ ಕಟ್ಟಿಸಿ, ಕಿರು ಕೆಲಸದಿಂದ ಹಿರಿ ಕೆಲಸಕ್ಕೆ ಹಾರಿ, ಕಿರು ಸಂಬಳದಿಂದ ಹಿರಿ ಸಂಬಳಕ್ಕೆ ನೆಗೆದು, ಕಡಿಮೆಯ ಮೊಬೈಲಿನಿಂದ ಜಾಸ್ತಿಯ ಮೊಬೈಲಿಗೆ ಜಿಗಿದು, ಕಾರು, ಸೈಟು, ಹೂಡಿಕೆ, ಸಾಲಗಳಲ್ಲೂ ಹಿರಿಯದಕೆ ಪ್ರಾಶಸ್ತ್ಯ.

ಈಗ ನಿಜಕ್ಕೂ ಎಂಥ ದೊಡ್ಡ ದೇವರೂ ಅವನ ಮನೆ, ಕಾರು, ಮೊಬೈಲುಗಳಲ್ಲಿ ಕುಳಿತುಕೊಳ್ಳಬಹುದು!

ಅಗಲ ಈಗ ಎಲ್ಲರ ಪ್ರಾಶಸ್ತ್ಯ. ಚಿಕ್ಕ ಜಾಗದ ಚೊಕ್ಕ ಸಂಸಾರದ ಅಚ್ಚು ಹಾಕಿದ ಫೋಟೋಗಳಿಗೆ ಎಲ್ಲಿದೆ ಜಾಗ?  ಬೆಂಗಳೂರಿನ ಗಲ್ಲಿಗಳ ವಿಸ್ತೀರ್ಣ ಈಗ ಹಿಗ್ಗುತ್ತಿದೆ. ನೃಪತುಂಗ ರಸ್ತೆ ಅಗಲವಾಗಿ, ಬನ್ನೇರುಘಟ್ಟ ರಸ್ತೆ ಅಗಲವಾಗಿ, ಅರಮನೆ ರಸ್ತೆ, ಆರ್.ಸಿ. ಕಾಲೇಜು ರಸ್ತೆಗಳು ವಿಸ್ತಾರವಾಗಿ ಮಹಾರಾಣಿ ಕಾಲೇಜು ರಸ್ತೆ ವಿಸ್ತಾರಕ್ಕೆ ಸಿದ್ಧವಾಗಿ ರಸ್ತೆ ರಸ್ತೆಗಳೂ, ಸಂದು ಗುಂಡಿಗಳೂ ‘ಅಗಲಿಕೆ’ಯ ಸಂಭ್ರಮಕ್ಕೆ ಸಂದಿವೆ.

ಪುಟ್ಟ ಇಕ್ಕಟ್ಟಿನ, ಬಿಕ್ಕಟ್ಟಿನ ಪ್ರಪಂಚದಲ್ಲಿ ಸಹಜವೂ ಸುಂದರವೂ ಆದ ಒಂದು ಸೌಂದರ್ಯ ಇತ್ತು ಎಂದು ಹಲುಬುವವರಿಗೆ ಇಲ್ಲಿ ವೇಕೆನ್ಸಿ ಇಲ್ಲ. ರಸ್ತೆ ಪಕ್ಕ ಬಿದ್ದ ಮರದಲ್ಲಿ ಚೆಲ್ಲಾಪಿಲ್ಲಿಯಾದ ಹಕ್ಕಿ ಗೂಡುಗಳಲ್ಲೂ ಒಂದು ಕಿರಿ ಬಾಗಿಲಿತ್ತು, ಆ ಬಾಗಿಲಲ್ಲೂ ದೇವರು ಕೂರದಂತೆ ಚಿಲಿಪಿಲಿ ತುಂಬಿತ್ತು. ಜಗದಗಲ, ಮುಗಿಲಗಲ, ಹೆದ್ದಾರಿಯಗಲ ಅಭಿವೃದ್ಧಿಯ ಕೊಡಲಿ, ಗುದ್ದಲಿ, ಪ್ರಹಾರ.

ಈಗ ಎಂಥ ದಡಿಯ ದೇವರೂ ನಗರದ, ಅಭಿವೃದ್ಧಿ ಶಹರದ ಬಾಗಿಲ ಮೇಲೆ ಕುಳಿತುಕೊಳ್ಳಬಹುದು!

ಕಳ್ಳತನವ ಮಾಡಲಿಕ್ಕೆ ಮತ್ತೆ ಸಮಯವು!
ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ  ಕೆಲಸದ ಒತ್ತಡ, ತಿರುಗಾಟ ಮೊದಲಾದ ಕಾರಣಕ್ಕೆ ಮುಚ್ಚಿದ್ದ `ಕಳ್ಳಕುಳ್ಳ’ರ ಬ್ಲಾಗಂಗಡಿಯ ಶೆಟ್ಟರ್ ಮತ್ತೆ ಕರಗುಟ್ಟುತ್ತಾ ತೆರೆದುಕೊಳ್ಳುತ್ತಿದೆ. ಒಳಗೆ ಧೂಳಿದ್ದರೆ ಬೈಬಾರದು. ಈ ಎರಡು ತಿಂಗಳಲ್ಲಿ ಸಣ್ಣ ಸಣ್ಣ, ಆದರೆ ಸಾಂಸ್ಕ್ರತಿಕವಾಗಿ ಮುಖ್ಯವೆನ್ನುವಂಥ ಘಟನೆಗಳು ನಡೆದಿವೆ. ಅದನ್ನೆಲ್ಲಾ ಇಲ್ಲಿ ಮಾತಾಡೋಣ.

Let’s restart with hopes…

`ಬಿದ್ದು ಸಾಯಲು ನೀರಿದ್ದ ಬಾವಿಯೇ ಆಗಬೇಕಿಲ್ಲ’
ಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ’ ಎಂದು ಒಂದು ಸಂಕಲನವನ್ನು ಹೊರತಂದು, ಬರೀ ಸೂರ್ಯನ ಮೇಲೆ ಒಂದು ಸಂಕಲನವಿಡೀ ಕವಿತೆಗಳನ್ನು ಬರೆದುಕೊಟ್ಟಿದ್ದರು. `ಸೂರ್ಯ, ಇನ್ನೊಂದು ಲೋಕದ ಕಿಂಡಿ’, `ಸೂರ್ಯ- ಇಡೀ ಲೋಕದ ಕಸವನ್ನು ಕಿರಣಗಳ ಕಸಬರಿಕೆಯಿಂದ ಗುಡಿಸುವ ಜಾಡಮಾಲಿ’ ಎಂಬಂಥ ಹೊಳಹುಗಳಿದ್ದ ಸಂಕಲನ ಅದು.

ಆದರೆ ಶಾ ಬಾಲುರಾವ್‌ ಅವರು ಬಹಳ ಚೆಲುವಾದ ಕವಿತೆಗಳನ್ನು ಬಹಳ ಹಿಂದೆ ಪ್ರಕಟಿಸಿದ್ದರು. `ನಡೆದದ್ದೇ ದಾರಿ’ ಎನ್ನುವುದು ಆ ಸಂಕಲನದ ಹೆಸರು. ಒಟ್ಟು ನಲವತ್ತೆಂಟು ಕವಿತೆಗಳಿವೆ ಅದರಲ್ಲಿ. 1998ರಲ್ಲಿ `ಅಕ್ಷರ ಪ್ರಕಾಶನ’ ಪ್ರಕಟಿಸಿದ ಆ ಸಂಕಲನದ ಕವಿಯ ಮಾತು ಈಗಿನ ಕಾವ್ಯ ಜಗತ್ತಿಗೂ ಒಂದು ದಾರಿದೀಪದಂತೆ ಕಾಣಬಹುದು. ಅವರು ಬರೆಯುವ ಕಾಲಕ್ಕೆ ಕಾವ್ಯ ಹೇಗಿತ್ತು ಎಂದು ಅವರು ಹೇಳಿಕೊಂಡಿದ್ದಾರಾದರೂ ಅದರಲ್ಲಿ ನಮ್ಮ ಕಾಲದ ಕಾವ್ಯಭೂಮಿಯ ಸ್ಥಿತಿಗತಿಯನ್ನೂ ಹೇಳುತ್ತಿದೆಯೇನೋ- ಅನಿಸುತ್ತದೆ. ಆ ಮಾತಿನ ಕೆಲವು ಭಾಗಗಳು, ಅವರ ಮಾತಿನಂತೆ ನಡೆದುಕೊಂಡಿರುವ ಒಂದಿಷ್ಟು ಕವಿತೆಗಳು ಇಲ್ಲಿವೆ. ನಿಮ್ಮ ಓದಿಗಾಗಿ. ದಯವಿಟ್ಟು ಕೊಂಡು ಓದಿ ಸಂಕಲನವನ್ನು. ಬೆಲೆ 50 ರೂಪಾಯಿಗಳು.

ಮುಮ್ಮಾತು

ನನಗೆ ತಮಾಷೆಯೆನಿಸುವ ನನ್ನ ಬದುಕಿನ ಹಲವಾರು ವ್ಯಂಗ್ಯಗಳಲ್ಲಿ ಒಂದೆಂದರೆ 1947-51ರ ಕಾಲೇಜು ದಿನಗಳಿಂದ ಹಿಡಿದು ಇವತ್ತಿನ ತನಕ ಕವಿತೆಯ ಹೆಸರಲ್ಲಿ ನನಗೆ ತೋಚಿದ್ದನ್ನು ತೋಚಿದಂತೆ ಗೀಚುತ್ತಾ ಬಂದಿದ್ದು, ಅವುಗಳಲ್ಲಿ ಅನೇಕವು ಆಗಿಂದಾಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು, ನನ್ನ ಅಂತರಂಗದ ತಜ್ಞ ಮಿತ್ರರಿಗೆ ಒಪ್ಪಿಗೆಯಾಗಿದ್ದರೂ ನನ್ನ ಸರಿಯಾದ ಕವಿತಾ ಸಂಗ್ರಹವೊಂದು ಇದುವರೆಗೂ ಬಂದಿಲ್ಲ….ಇದಕ್ಕೆ ಮುಖ್ಯ ಕಾರಣವೆಂದರೆ ನನ್ನ ಸೋಮಾರಿತನದ ಜೊತೆಗೆ ನನ್ನ ರಚನೆಯ ಬಗ್ಗೆ ನನ್ನೊಳಗಿನ ತೃಪ್ತಿ- ಅತೃಪ್ತಿಗಳ ಹೊಯ್ದಾಟ, ಗೊಂದಲ.

ಈಚೆಗೊಂದು ದಿನ ಇಲ್ಲಿ ಬಂದಿದ್ದ ನನ್ನ ತರುಣ ಕವಿಮಿತ್ರ ಜಯಂತ ಕಾಯ್ಕಿಣಿ, ಅದೇ ಆಗ ಪ್ರಕಟವಾಗಿದ್ದ ನನ್ನ ಒಂದೆರಡು ಕವಿತೆಯನ್ನು ಓದಿ ಮೆಚ್ಚಿದ್ದವನು `ಕಾಕಾ, ನಿಮ್ಮ ಕವಿತೆಗಳನ್ನೆಲ್ಲಾ ನೋಡಬೇಕಾಗಿದೆ, ತೆಗೆಯಿರಿ’ ಎಂದು ಹಠ ಹಿಡಿದ ಫಲವಾಗಿ ಕಪಾಟಿನ ಹಳೆಯ ಕಡತಗಳಲ್ಲಿ ಅಡಗಿದ್ದ ನೂರಕ್ಕೂ ಹೆಚ್ಚು ಕವಿತೆಗಳು ಹೊರಬಂದವು. ಅದರಲ್ಲಿ ನಲವತ್ತೆಂಟನ್ನು ಆರಿಸಿ ಈ ಸಂಗ್ರಹಕ್ಕೆ ಕೊಟ್ಟಿದೆ. ಈ ಆಯ್ಕೆಯಲ್ಲಿ ಸಮಪಾಲು ಕೀರ್ತಿ ಜಯಂತನಿಗೆ ಸಲ್ಲುತ್ತದೆ.

ಈಚಿನ ವರ್ಷಗಳಲ್ಲಿ ಕಾವ್ಯಕರ್ಮದ ಬಗ್ಗೆ ಕೆಲವು ವಿಶಿಷ್ಟ ಧೋರಣೆಗಳು ನನ್ನ ಕವಿತಾರಚನೆಯನ್ನು ನಿಯಂತ್ರಿಸಿವೆ. ಇಂದಿನ ಕನ್ನಡ ಕಾವ್ಯ ಇತ್ತ ವಸ್ತು- ವಿಷಯ, ಅತ್ತ ತಂತ್ರ- ಅಭಿವ್ಯಕ್ತಿ-ಎರಡರಲ್ಲೂ ಅತಿಯಾದ ಗಂಭೀರದೃಷ್ಟಿ ತಾಳಿ, ಏಕಮುಖವಾಗಿ ಸಾಗಿದೆ. ಕೆಲವು ಅಪವಾದದ ಹೊರತು, ಇದರಲ್ಲಿ ಹೆಚ್ಚಾಗಿ ಕಾಣುವುದು: ಆತ್ಮ ನಿರತರ ಒಳತುರಿಕೆ, ದಲಿತರ ದ್ವೇಷ- ಕ್ರೋಧ, ಸ್ತ್ರೀವಾದಿಗಳ ಸಿಟ್ಟು- ರೋದನ, ಹಸಿ- ಹುಸಿ ಮಾನವೀಯ ಕಾಳಜಿಗಳು, ಇಂದಿನ ಸಮಸ್ಯೆಗಳಿಗೆ ನಿನ್ನೆಯ ಇತಿಹಾಸ, ಪುರಾಣ, ಜಾನಪದಗಳಲ್ಲಿ ಉತ್ತರ ಹುಡುಕುವ ಪ್ರಯತ್ನ, ಇಂಥಹವೇ.

ಕವಿತೆ ಒಟ್ಟು ಬದುಕಿನ ಪ್ರತಿಧ್ವನಿ ಎನ್ನುವುದಾದರೆ ಬದುಕಿನಲ್ಲಿ ಸಲ್ಲುವುದೆಲ್ಲವೂ ಕವಿತೆಯಲ್ಲೂ ಸಲ್ಲಬೇಕು. ಗಂಭೀರ ವಿಷಯಗಳ ಜೊತೆಗೆ ಮೇಲ್ಮೈಗೆ ಸಾಧಾರಣ, ಅಲ್ಪ, ಕ್ಷೆಲ್ಲಕ ಎಂದು ಅನಿಸುವುದು ಸಹ, ಅದು ಬದುಕಿಗೆ ಸಂಗತವಾದರೆ, ಕಲ್ಪನಾಶೀಲನಾದ ಕವಿಯ ಕೈಯಲ್ಲಿ ಕವಿತೆಯಾಗಿ ಮಾರ್ಪಟ್ಟು ಓದುಗನಿಗೆ ಖುಷಿ ಕೊಡುವಂತಾಗಬೇಕು. `ಕವಿಜೀವದ ಬ್ಯಾಸರ ಹರಿಸಾಕ…ಹೂತ ಹುಣಸಿ ಮರ ಸಾಕ’ ಎಂದು ಬೇಂದ್ರೆ ಅಂದದ್ದು ಇದೇ ಅರ್ಥದಲ್ಲೇನೋ!

ಅಭಿವ್ಯಕ್ತಿಯ ವಿಷಯದಲ್ಲಿ ಕೂಡ ನಾವಿನ್ನೂ ಪೂರ್ಣ ಮುಕ್ತರಾಗಿಲ್ಲ. ಇವತ್ತಿಗೂ ನಮ್ಮ ಹೆಚ್ಚಿನ ಕವಿತೆಗಳು ಹಿಂದಿನ ನವೋದಯ ಅಥವ ನವ್ಯ ಕಾಲದ, ಇಲ್ಲವೇ ಇಂಗ್ಲಿಷ್‌ ಕಾವ್ಯಪರಂಪರೆಯಿಂದ ಎರವಲು ತಂದ ಎರಕದಲ್ಲೇ ತೊಳಲುತ್ತಿವೆ. ಕೆಲವು ಕವಿಗಳಲ್ಲಿ ಕವಿತೆ ಒಗಟಾಗಿಯೇ ಉಳಿದು, ಕವಿಗಳೇ ಕವಿಗಳನ್ನು `ಈ ನಿಮ್ಮ ಪದ್ಯದ ಅಥವೇನು?’ ಎಂದು ಕೇಳುವಂತಾಗಿದೆ. ಈ ಕಾರಣಗಳಿಂದಾಗಿ ಕನ್ನಡ ಕವಿತೆಗೆ ಓದುಗರು ಕಡಿಮೆಯಾಗಿ, ಅದು ಆತ್ಮಹತ್ಯೆಯ ದಾರಿ ಹಿಡಿದಿದೆ ಎಂದು ನನಗನಿಸುತ್ತದೆ.

ವಿಷಯ, ವಸ್ತುಗಳಲ್ಲಿ ಹೊಸ ಹೊಸದನ್ನು ಅರಸುವುದು, ಅಭಿವ್ಯಕ್ತಿಯಲ್ಲಿ ಹೊಸ ಧ್ವನಿ, ವರ್ಣ, ಲಯಗಳನ್ನು ಆಕರಿಸಿಕೊಂಡು (ಉದಾ. ಅಲಂಕಾರ ತೊರೆದ ತೀರ ಸರಳ ಮಾತುಗಳಲ್ಲಿ ಕವಿತೆಗಳನ್ನು ಹೊರಡಿಸುವುದು, ಗಂಭೀರ ವಿಷಯವನ್ನು ಸಹ ಹಗುರವಾಗಿ ಹೇಳಿಓದುಗರ ಮನಮುಟ್ಟಿಸುವುದು), ಹತ್ತು ಮಂದಿಯ ಮುಂದೆ ಓದಲು ಬರುವಂತೆ ಅದರ ನಡೆ ನುಡಿಗಳಲ್ಲಿ ಅಭಿನಯಶೀಲತೆ ತರುವುದು ನನ್ನ ಪ್ರಯತ್ನ. ಈ ಸಂಕಲನದ, ಹೆಚ್ಚಾಗಿ ಈಚಿನ, ಕವಿತೆಗಳಲ್ಲಿ ಅದರ ಸುಳಿವು ಕಂಡೀತು.

ಶಾ ಬಾಲುರಾವ್‌

ಡಿಸೆಂಬರ್‌, 1997

ನಮ್ಮಂಗಳದ ಬಾವಿಗಳು

ಬಿದ್ದು ಸಾಯಲು

ನೀರಿರುವ ಬಾವಿಗಳೇ

ಆಗಬೇಕೆಂದೇನಿಲ್ಲ.

ಹಾಗೆ ನೋಡಿದರೆ

ನೀರಿಲ್ಲದ ಬಾವಿಗಳಲ್ಲಿ

ಬಿದ್ದು ಸಾಯುವವರೇ ಹೆಚ್ಚು.

ನನ್ನ ಕಾಲದಲ್ಲಿ

ಅನೇಕ ಹುಡುಗಿಯರು

ತಮ್ಮ ಮನೆಯ ನಾಲ್ಕು ಗೋಡೆಗಳೊಳಗೆ

ಉಟ್ಟ ಸೀರೆಯ ತಲೆಮುಸುಕಿನಲ್ಲಿ

ತೊಟ್ಟ ಬುರ್ಖಾದೊಳಗೆ

ಹೀಗೆ ಅಪ್ಪ ಗಂಡಂದಿರು ತೋಡಿಟ್ಟ ಬಾವಿಗಳಲ್ಲಿ

ಸತ್ತೂ ಸಾಯದೆಯೇ

ಸಾಯದೆಯೇ ಸತ್ತದ್ದನ್ನು

ನಾನು ಕಂಡಿದ್ದೇನೆ!

ಕವಿಯೆಂದು ಕರೆದುಕೊಳ್ಳುವುದು

ನಾನು ಬರೆದದ್ದರಲ್ಲಿ

ಉಳಿದೆಲ್ಲಕ್ಕಿಂತ

ಕವಿತೆಗಳೇ ಹೆಚ್ಚು.

ಆದರೂ ನನ್ನನ್ನು ನಾನು

ಎಂದೂ `ಕವಿ’ ಎಂದು

ಕರೆದುಕೊಳ್ಳುವುದಿಲ್ಲ.

ಇದು ತಪ್ಪೆಲ್ಲವೆನ್ನುವುದಕ್ಕೆ-

ಮೊನ್ನೆ ನಡುದಾರಿಯಲ್ಲೊಬ್ಬ ಗಂಡಸು

ಉಟ್ಟ ಬಟ್ಟೆ ಕಳಚಿ

`ನಾನು ಗಂಡಸು’ `ನಾನು ಗಂಡಸು’

ಎಂದು ಅರಚುತ್ತಿದ್ದುದನ್ನು ಕಂಡು

ಜನ ನಕ್ಕಿದ್ದನ್ನು ನಾನು ಕಂಡಿದ್ದೇನೆ.

ಅರೆ ಇಲ್ಲಿ ನೋಡಿದ್ರ ಪೇಪರ್ನಲ್ಲಿ

`ಅರೆ ಇಲ್ಲಿ ನೋಡಿದ್ರ ಪೇಪರ್ನಲ್ಲಿ’

`ಅದೇನು ವಿಶೇಷ, ಓದ್ರಿ’

`ಭಾಗಲಪುರದ ಜೈಲಿನಲ್ಲಿ

ಖೈದಿಗಳ ಕಣ್ಣು ಕುಕ್ಕಿದಾರಂತೆ!’

`ಕಡೇಪುಟದಲ್ಲಿ ಕಣ್ಣು ಕುಕ್ತೀರೋ

ಆ ಫೋಟೋ ಅದು ಯಾವೋಳದ್ರಿ?’

`ಮೈನ್‌ಪುರೀಲಿ ಹರಿಜನರನ್ನ

ಜೀವ ಸಹಿತ ಸುಟ್ಟರಂತೆ!’

`ಮಂಡ್ಯ ಜಿಲ್ಲಾ ದಲಿತ ಸಮ್ಮೇಳನಕ್ಕೆ

ಅಧ್ಯಕ್ಷರು ಯಾರು ಗೊತ್ತಾಯ್ತು?’

`ಗುಲ್ಬರ್ಗದಲ್ಲಿ ಎಲ್ಲೆಲ್ಲೂ

ಮಳೆ ಇಲ್ಲದೆ ಬರ ಅಂತೆ!’

`ಮುಂದಿನ ಡಿ. ಎ. ಯಾವಾಗಂತೆ,

ಸುದ್ದಿ ಇದೆಯಾ ನೋಡಿ’.

`ಜಿನಿಂಗ್‌ ಮಿಲ್‌ನ ಕಾರ್ಮಿಕರಿಗೆ

ಎಂಟು ತಿಂಗಳಿಂದ ಸಂಬಳವಿಲ್ಲ!’

`ಎಲಿಜಬೆತ್‌ ಟೇಲರ್‌ದು

ಎಂಟನೇ ಮದುವೆ ಯಾವಾಗಂತೋ?’

`ಗುಂಡೂರಾಯ ಬಚಾವಾದ

ಅವನ ಅದೃಷ್ಟವೋ ಅದೃಷ್ಟ!’

`ಈವೊತ್ತಿನ ಅದೃಷ್ಟಸಂಖ್ಯೆ

ಎಷ್ಟೂ ಅಂತ ಕೊಟ್ಟಿದಾನೆ’.

`ಇದೇನು ಬಡ್ಜೆಟ್ಟಿಗೆ ಮೊದಲೇ

ಕರ ಏರಿಸಿದ್ದಾರಂತಲ್ಲ!’

`ಕಳ್ಳ ನನ್ಮಕ್ಕಳು, ಇನ್ನು ಮೇಲೆ

ಬೀರ್‌ ಬೆಲೆ ಎಷ್ಟಾಗುತ್ತೋ?’

`ಅಯ್ಯೋ ಗೊಂದಲೂರಿನ ಗೋಲಿಬಾರ್‌ನಲ್ಲಿ

ಗುಂಡಿಗೆ ಜನ ಬಲಿಯಾದರಂತೆ!’

`ಗುಂಡು’ ಎಂದರೆ ಜ್ಞಾಪಕಕ್ಕೆ ಬಂತು,

ನಿನ್ನೆ `ವೆಸ್ಟೆಂಡ್‌’ ಅಲ್ಲಿ ಎಂಥ ಪಾರ್ಟಿ ಅಂತೀರ’.

`ಇವೊತ್ತು ಸಂಜೆ ಸ್ಟೇಡಿಯಂನಲ್ಲಿ

ವಿರೋಧ ಸಭೆ ಇದೆಯಂತಲ್ಲ!’

`ಹೌದೌದು ಹೋಗ್ಬೇಕು, ಶಾಂತಿ ಟಾಕೀಸಲ್ಲಿ

ಫಿಲ್ಮ್‌ ಯಾವದು, ಸ್ವಲ್ಪ ನೋಡಿ’.

`ಸಂಪಾದಕೀಯ-`ಹೊಟ್ಟೆಗೆ ಹಿಟ್ಟಿಲ್ಲ,

ಜುಟ್ಟಿಗೆ ಮಲ್ಲಿಗೆ ಹೂವು’.

`ಹೊಟ್ಟೆ ಹಸಿವು. ಇಷ್ಟು ಹೊತ್ತಾದರೂ

ಸರ್ವರ್‌ ಯಾರೂ ಬರಲಿಲ್ಲವೇ.’

`ಯಾರ್ರೀ ಇಲ್ಲಿ, ಈ ಟೇಬಲ್ಲಿಗೆ?’

`ಬಿಸಿ ಬಿಸಿ ಏನಿದೇರ್ರಿ?’

ಬಾಗಿಲೇ ತೆರೆದು, ಸೇವೆಯನು ಕೊಡು
We are continuously opening the doors with happiness and closing them with despair.

-ಹಾಗೆಂದು ಸಿ ಡಿ ಮೋರ್ಲೆ ಎಂಬ ಲೇಖಕ `ಡೋರ್‌’ ಎಂಬ ಲೇಖನದಲ್ಲಿ ಬಾಗಿಲನ್ನು ಬಹಳ ಅದ್ಭುತವಾಗಿ ತೆರೆದು ತೋರಿಸುತ್ತಾ ಹೋಗುತ್ತಾನೆ. ಬಾಗಿಲಿನ ಹಿಂದೆ ಏನೆಲ್ಲಾ ಇರಬಹುದು. ಬಾಗಿಲು ನಮ್ಮೆಲ್ಲಾ ರಹಸ್ಯಕ್ಕೂ ಊಹೋಪೋಹಕ್ಕೂ, ಅರ್ಧ ಸತ್ಯಕ್ಕೂ ಒಳ್ಳೆಯ ಉದಾಹರಣೆ.

ಹಿಂದೊಮ್ಮೆ ಆ ಲೇಖನದಿಂದ ತುಂಬ ಪ್ರೇರಣೆ ಹೊಂದಿ ಕಾಲೇಜು ಓದುವ ಹೊತ್ತಿಗೆ ಬರೆದ ಕವಿತೆ `ಬಾಗಿಲು’. ಸ್ವಲ್ಪ ದೀರ್ಘವಾಯಿತು ಎಂದು ನೀವು ಬೇಕಾದರೆ ಬೈಯಬಹುದು. ಮುಚ್ಚಿದ ಬಾಗಿಲು ನಮಗೆಲ್ಲಾ ನೀಡಿದ ವಿಸ್ಮಯಕ್ಕಾಗಿ ನಮಿಸುತ್ತಾ ಇಲ್ಲಿ ಆ ಕವಿತೆ ಹಾಜರಾಗುತ್ತಿದೆ.

1

ಸುಟ್ಟಿಟ್ಟಿಗೆಗೆ ಮೆದು ಮಣ್ಣು ಮೆತ್ತಿ,

ಪಂಚಾಂಗದ ಇಂಚಿಂಚೂ ನೀರೆರಚಿದಾಗ

ಸೂರಿನ ಹನಿಸುಗಳ ತಡೆಗೆ

ಪರದೆ ಕಣ್ಣ ಗೋಡೆ:

ಹೊಸಮಣ್ಣ ಪ್ರಾಕಾರದಲ್ಲಿ ಅವಿತರೆ

ಬಿಟ್ಟೀತೇ ಹುಚ್ಚು ಗಾಳಿ

ಮಳೆಯ ನಡುವೆ ಗೂಳಿ ನುಗ್ಗುವ ಪರಿ?

ಪಾಗರದ ನಡುವಿನಲಿ ನಮ್ಮನ್ನೇ ಕಳಕೊಂಡಾಗ

ನುಸುಳಿ ಹೊರ ಹೊರಡಲಿಕ್ಕೆ,

ಎಳೆ ಬಿಸಿಲಿನ ಅಂಬೆಗಾಲಿಡುವ ನಾಳೆಗಳ

ರಂಗವಲ್ಲಿ ಚುಕ್ಕೆ ಇಟ್ಟು ಸ್ವಾಗತಿಸುವುದಕ್ಕೆ

ಬೇಕಲ್ಲವೇ?-

ಕಾವಲು ಕಣ್ಣ ಮುಚ್ಚಿಸಿ

ತಿಂಗಳ ಬೆಳಕ ರಾತ್ರಿಗಳ ಅಟ್ಟಿ

ನಿಲ್ಲಿಸುವ ನಂದಿ-ಬೀಟೆ ಸಾಗವಾನಿಯ ಗಟ್ಟಿ

ಬಾಗಿಲು,

ಮತ್ತು

ಬಿಡುವ ನೆಮ್ಮದಿಯ ನಿಟ್ಟುಸಿರು.

2

ಆಫೀಸಿನ ಸದಾ ಮುಚ್ಚು ಬಾಗಿಲು,

ಅಂಗಡಿಯ ನಗೆ ತೆರೆದ ಬಾಗಿಲು,

ಕಾಲ್‌ತಲೆ ತೋರಿ-ಎದೆ ಹೊಟ್ಟೆಯ ಬಚ್ಚಿಟ್ಟ

ಆಸ್ಪತ್ರೆಯ ಅರೆ ಬಾಗಿಲು,

ಇದ್ದಂತೇ ತೋರ್ಪಡಿಸಹೊರಟ

ಗಾಜು ಹಲಗೆಯ ಧೈರ್ಯದ ಬಾಗಿಲು,

ಮುರಿವ-ಮುರಿಯದ-ಮೆರುಗಿನ

ಕದಗಳ ಬಗೆ-ಬಿನ್ನಾಣ

ಕೂಲಿ ದುಡಿತದ ತಿರುಕನಿಗೆ

ಬಿದಿರ ತಡಿಕೆಯೇ ಬಿರುಗಾಳಿ ತಡೆವ ಕಡಿವಾಣ!?

3

ಬಾಗಿಲೆಂದಾಕ್ಷಣ ಬೇರ್ಪಡಿಕೆಯ

ತೋರಿಕೆ ನೀಡುವರಿಗೇ

ಈ ಕೆಳಗಿನ ತುಸು ಅಂಬೋಣ:

ಒಂಟಿತನದ ಕೊಂಚ ತಿರುವಾಟಕ್ಕೆ,

ಅಂಟಿ ಕುಳಿತು ನೆನಪಿಸುವ ಬಿಡುವಿಗೆ,

ನಮ್ಮ ನಾವೇ ಅರಿತುಕೊಳ್ಳುವುದಕ್ಕೆ,

ಪಿಸು ಮಾತಾಡಿ ಬೆರೆತುಕೊಳ್ಳುವುದಕ್ಕೆ,

ಗಳಿಸಿಟ್ಟ ಮೊತ್ತಗಳ ಉಳಿಸಿಕೊಳ್ಳುವುದಕ್ಕೆ,

ಕೊಟ್ಟ ಕೋಡಂಗಿಯವನಲ್ಲಿ

ಇಸಕೊಂಡ ಈರಭದ್ರ ತಲೆ ಮರೆಸಿಕೊಳ್ಳುವುದಕ್ಕೆ…

ಹೀಗೆ ಹಲವಾಶಯ ಹೊತ್ತ

ಈ ಬಾಗಿಲುಗಳಿಗೆ

ಬಿಚ್ಚಿಡುವ ಸ್ವಚ್ಛ ಮನಕ್ಕಿಂತಾ

ಬಚ್ಚಿಡುವ,

ಹೊಳಪು-ಕೊಳಕು ಮುಚ್ಚಿಡುವ

ಕಾಯಕದಲ್ಲೇ ಭಗವಂತ ಪ್ರೀತಿ!

4

ಬಾಗಿಲೆಂದರೆ ಇಲ್ಲವೆಂಬುದರ

ಕಳ್ಳ ಸುಳಿವು,

ಎಷ್ಟೋ ತಪ್ಪಿಸಿ ಪ್ರೀತಿ ತೋಡಿಕೊಳ್ಳಲು

ಬಂದವನಿಗೆ

ಆಕೆಯ ಕ್ಕರಿಕೆಯ

ಮುಖದರಿವು,

ಸಾಲ ಕೊಡಲೊಪ್ಪದವನ ಉರಿ ಮುಖ,

ಹಣ ಕೊಡದಾದ

ಹಾಲು ಹಾಕುವವನ ಬರಿ ಮುಖ,

ಮುಖ-ಮುಖದಲ್ಲೇ ಮುಚ್ಚು ಬಾಗಿಲು.

ತೆರೆವಾಗಿನ ಬಾಗಿಲ

ಹೃದ್ಯ ಲಾಸ್ಯದ ಪ್ರಮೋದ,

ಮುಚ್ಚುವಾಗೆಲ್ಲೋ ಚುಚ್ಚುತ್ತಾ

ಮಡುಗಟ್ಟಿ ಕುಳಿತ

ವಿಷಾದ…

`ಹೆಣ್ಣಾಗಿದ್ದರೆ ನಾನೂ ವೇಶ್ಯೆಯಾಗುತ್ತಿದ್ದೆ’
ಸಾಹಿತ್ಯ ಸಮಾರಂಭವೊಂದರಲ್ಲಿ ಪಿಳ್ಳೆ (ಎಡಭಾಗದವರು)

ಕೆ ಜಿ ಶಂಕರ ಪಿಳ್ಳೆ. ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.

ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ’, `ಬೊಕ್ಕ’, `ತರಾವರಿ ಪೋಜಿನ ಫೋಟೋಗಳು’, `ಜಿಡ್ಡು ಮೆತ್ತಿದ ಆರಾಮಕುರ್ಚಿ’, `ಉಡುದಾರ’, `ಬಂಗಾಲ್‌’ ಮೊದಲಾದ ಕವಿತೆಗಳನ್ನು ಓದುತ್ತಾ ಓದುತ್ತಾ ಕಾವ್ಯಾಸಕ್ತರಾದ ನೀವು ಥ್ರಿಲ್‌ ಆಗಿರುತ್ತೀರಿ. ಕನ್ನಡದಲ್ಲಿ ಅಡಿಗರನ್ನು, ಲಂಕೇಶರನ್ನು ಓದಿ ಮೆಚ್ಚಿ ಆರಾಸುವವರು ಈ ಸಂಕಲನವನ್ನೂ ಅಷ್ಟೇ ಪ್ರೀತಿಯಿಂದ ಪರಿಗ್ರಹಿಸಲು ಸಾಧ್ಯ.

`ಬೊಕ್ಕ ಬೊಕ್ಕನ ಜೊತೆ ಮಾತನಾಡುವಾಗ

ಬಚ್ಚಿಡುವಂಥದ್ದು ಏನೂ ಇಲ್ಲ.

ಒಂದು ನಾಜೂಕಿನ ನಗೆಯಲ್ಲಿ

ಭೂತವೋ ಭವಿಷ್ಯವೋ ಏನು ಬೇಕಾದರೂ

ಪ್ರತಿಬಿಂಬಿಸಲು ಪ್ರಯಾಸವಿಲ್ಲ

ಆದರಿಂದು,

ಕವಿ ಕವಿಯ ಜೊತೆ ಮಾತನಾಡುವಾಗ

ಬಚ್ಚಿಡುತ್ತಾನೆ ಏನೋ ಒಂದನ್ನು.

ಯಾತ್ರಿಕ ಯಾತ್ರಿಕನ ಜೊತೆ ಮಾತಾಡುವಾಗ

ಬಚ್ಚಿಡುತ್ತಾನೆ ಏನೋ ಒಂದನ್ನು.

ನೆರೆಯವ ನೆರೆಯವನ ಜೊತೆ ಮಾತನಾಡುವಾಗ

ಬಚ್ಚಿಡುತ್ತಾನೆ ಏನೋ ಒಂದನ್ನು.

ಇಂಡಿಯಾ ಚೀನಾ ಜೊತೆ ಮಾತನಾಡುವಾಗ

ಬಚ್ಚಿಡುತ್ತವೆ ಎಲ್ಲವನ್ನೂ….’

-ಎಂದೆಲ್ಲಾ ಬರೆದು ಬೆಚ್ಚಿ ಬೀಳಿಸುವ ಅವರ ಕವಿತೆಗಳಲ್ಲಿ ನಿತ್ಯ ನೈಮಿತ್ಯಿಕ ವಿಷಯಗಳೇ ವಸ್ತುಗಳಾಗಿವೆ. ಆದರೆ ಆ ನಮ್ಮ ನಿತ್ಯದಲ್ಲೇ ಇರುವ ಸಂಗತಿಯಲ್ಲಿ ಅವರು ಸುರಿಸುವ ಜಿಜ್ಞಾಸೆ, ಓದೇ ಅನುಭವಿಸಬೇಕಾದ ಸಂಗತಿ.

ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಕೆಜಿ ಶಂಕರ ಪಿಳ್ಳೆಯವರ ಕವಿತೆಗಳು‘ ಸಂಕಲನ ಇದೀಗ ಮಾರುಕಟ್ಟೆಯಲ್ಲಿದೆ. ಮಲೆಯಾಳಂ ಮತ್ತು ಕನ್ನಡ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿ ಅನುಭವವಿರುವ ತೇರ್‌ಳಿ ಶೇಖರ್‌ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರ ಅನುವಾದದ ಸೊಗಸು ಎಷ್ಟು ಅದ್ಭುತವಾಗಿದೆ ಎಂದರೆ ಮೂಲದ ಲಯ ಒಂಚೂರೂ ಆಚೀಚೆ ಆಗಿಲ್ಲ. ಪಿಳ್ಳೆ ಕವಿತೆಗಳ ಲಯವೇ ಭಿನ್ನ. ಅದನ್ನು ಅನುವಾದದಲ್ಲೂ ಉಳಿಸಿಕೊಳ್ಳುವುದು ಅನುವಾದಕರಿಗೆ ಸಾಧ್ಯವಾಗಿದೆ ಎನ್ನುವುದು ಕಾವ್ಯಪ್ರೇಮಿಗಳಿಗೆ ಖುಷಿಯ ವಿಷಯ.

ಆ ಮೂಲ ಕಾವ್ಯದ ಪುಳಕಕ್ಕೆ, ಅನುವಾದದ ಜಲಕ್‌ಗೆ ಇಲ್ಲಿ ಒಂದೆರಡು ಕವಿತೆಗಳನ್ನು ನೀಡಲಾಗುತ್ತಿದೆ, ಓದಿ. ನೀವೇ ಇಷ್ಟಪಟ್ಟು ಆ ಸಂಕಲನವನ್ನು ಹುಡುಕಿ ಹೋಗಿಬಿಡುತ್ತೀರಾ.

ಕಾಗೆ

ಗುಡ್ಡ ನಿಂತಿದೆ ಗುಡ್ಡವಾಗಿಯೇ

ಗುಡ್ಡದ ಮೇಲೆ ಮಾವು ನಿಂತಿದೆ ಮಾವಾಗಿಯೇ

ಮಾವಿನ ಕೆಳಗೆ ಹಸು ಮೇಯುತ್ತಿದೆ ಹಸುವಾಗಿಯೇ

ಮಾವಿನ ಕಣ್ಣಿಗೆ ಕಾಗೆ ಕುಟುಕುವಾಗ

ಮಾವು ಅಲುಗಾಡುತ್ತದೆಹಸುವಾಗಿಯೇ

ಗುಡ್ಡದ ಬಾಲಕ್ಕೆ ಕಾಗೆ ಕುಟುಕುವಾಗ

ಗುಡ್ಡ ಅಲುಗಾಡುತ್ತದೆ ಹಸುವಾಗಿಯೇ

ನಾನು

ವೇಶ್ಯೆಯಾಗಿದ್ದಳು ನನ್ನ

ಮುದಿ ಮುದಿ ಮುತ್ತಜ್ಜಿ

ಹೆಣ್ಣಾಗಿದ್ದರೆ

ನಾನೂ

ವೇಶ್ಯೆಯಾಗುತ್ತಿದ್ದೆ.

ವಿಟನಾಗಿದ್ದ ನನ್ನ

ಮುದಿ ಮುದಿ ಮುತ್ತಾತ

ಗಂಡಾಗಿದ್ದರೆ

ನಾನೂ

ವಿಟನಾಗುತ್ತಿದ್ದೆ.

ಶಬ್ದಾಸುರನ ನಗರದಲ್ಲಿ

ಒಂದು ಹಿಂಡು ಕಿವಿಗಳು

ಅಲೆಯುತ್ತಿವೆ

ಮೌನವನ್ನು ದತ್ತು ಪಡೆಯಲು,

ಶಬ್ದಾಸುರನ ನಗರದಲ್ಲಿ.

ಒಲವಿನಂತೆಯೋ

ಒತ್ತೆಯಂತೆಯೋ

ಪಿ. ಎಫ್‌. ಲೋನಿನಂತೆಯೋ

ಬಂಡೆ ರಾಶಿಯಂತೆಯೋ

ೃಹತ್‌ ತಟಾಕದಂತೆಯೋ

ಥಟ್ಟನೆ

ಆವಿಯಾಗಿ ಮರೆಯಾದ ಮೌನವನ್ನು.

ಕೆತ್ತಿ ಕೆತ್ತಿ ಶಿಲ್ಪಗಳನ್ನೋ

ಮೊಗೆದು ನೆನಸಿ ಹಣ್ಣುಗಳನ್ನೋ

ಬೆಳೆಸಬಹುದಾದ ಮೌನವನ್ನು.

ಅರ್ಥ

ಭಾಷೆಯ ದಾರದಲ್ಲಿ ಪೋಣಿಸಿ

ಜಗತ್ತನ್ನು

ಗಡಿಯಾರದಂತೆ

ಹೊತ್ತು ನಡೆಯುತ್ತೇನೆ

ಎತ್ತ ಹೋಗುವಾಗಲೂ

ಏನೇ ಮಾಡುವಾಗಲೂ

ಆದ್ದರಿಂದ

ಯಾವ ದೂರಕ್ಕೂ

ಯಾವ ಕರ್ಮಕ್ಕೂ

ಯಾವ ಮಾತಿಗೂ

ಯಾವ ತಾಳಕ್ಕೂ

ಯಾವ ಹೊತ್ತಲ್ಲೂ

ಒಂದೇ ಒಂದು ಅರ್ಥ: ಕಾಲ.

(ಮುಂದಿನ ಓದಿಗೆ ನೀವು ಆ ಸಂಕಲನವನ್ನು ತೆಗೆದುಕೊಳ್ಳಲೇಬೇಕು.)

ಇವತ್ತೇ `ಆಮೀರ್‌’ ನೋಡಿ
ಮೊನ್ನೆ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಜಗತ್ತಿನ ಇಡೀ ಭಯೋತ್ಪಾದನೆಯನ್ನು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮಗಳ ಕುಲುಮೆಯಲ್ಲಿ `ಜ್ವಲಿಸುತ್ತಿರುವ ತಾಜ್‌ ಹೊಟೇಲ್‌’ ಭಯೋತ್ಪಾದನೆಯ ಸಂಕೇತವಾಗಿ ಹೋಗಿದ್ದೂ ಆಗಿದೆ. ಆದರೆ ಭಯೋತ್ಪಾದನೆ ಜಗತ್ತನ್ನು ಸುಡುತ್ತಾ ಬಂದು ಎಷ್ಟೋ ವರ್ಷಗಳಾದವು. ಅದರ ಬಿಸಿ ಮುಂಬೈ, ದೆಹಲಿ, ಬೆಂಗಳೂರುಗಳನ್ನು ತಟ್ಟಿದ್ದೂ ಇತ್ತೀಚೆಗೇನಲ್ಲ.

ಆದರೆ ಕಳೆದ ಒಂದು ವರ್ಷದಿಂದೀಚೆ ಭಯೋತ್ಪಾದಕ ಕೃತ್ಯದ ಮೇಲೆ ಹಿಂದಿಯಲ್ಲಿ ಒಂದೇ ಸಮನೆ ಚಿತ್ರಗಳು ತಯಾರಾಗುತ್ತಿವೆ. `ಮುಂಬೈ ಮೇರಿ ಜಾನ್‌’, `ಎ ವೆಡ್ನೆಸ್‌ಡೇ’, `ಆಮೀರ್‌’ ಹಾಗೂ `ಶೂಟ್‌ ಆನ್‌ ಸೈಟ್‌’ ಅಂಥ ನಾಲ್ಕು ಸಿನಿಮಾಗಳು. ಅವುಗಳಲ್ಲಿ `ಎ ವೆಡ್ನೆಸ್‌ಡೇ’ ಚಿತ್ರವನ್ನು ನಮ್ಮ ಗಾಂನಗರವೂ ನೋಡಿಬಿಟ್ಟಿದೆ. ಮೇಕಿಂಗ್‌ ದೃಷ್ಟಿಯಿಂದ ಉತ್ತಮ ಚಿತ್ರವನ್ನಾಗಿ ಅದನ್ನು ನೋಡಬಹುದಾದರೂ ಅದು ಪ್ರತಿಪಾದಿಸುವ ಮೌಲ್ಯ, ಅಂತರಂಗದಲ್ಲಿ ಅದಕ್ಕಿರುವ ರಂಜಕ ಗುಣ, ಪ್ರಚೋದಿಸುವ ಮನಸ್ಥಿತಿಯನ್ನು ಯಾರಾದರೂ ಪ್ರಶ್ನಿಸಿಯಾರು.

ಅವುಗಳಲ್ಲಿ `ಮುಂಬೈ ಮೇರಿ ಜಾನ್‌’ ಮತ್ತು `ಆಮೀರ್‌’ ಹೆಚ್ಚು ಸಂವೇದನೆಯ ಸಿನಿಮಾ. ಅದರಲ್ಲೂ `ಆಮೀರ್‌’ ಒಂದು ಘಟನೆಯ ಕತೆಯಾಗುತ್ತಲೇ ಸಾಮಾನ್ಯರ ಜಗತ್ತಿನ ತಲ್ಲಣದ ನೇರ ಪ್ರಸಾರವೂ ಆಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿಯ ಒಂದು ದಿನದ ಬದುಕಲ್ಲಿ ಎದುರಾಗುವ ಹಠಾತ್‌ ಬೆಳವಣಿಗೆ, (ಈಗಿನ ಭಯೋತ್ಪಾದಕ ವಾತಾವರಣದಲ್ಲಿ)ನಮ್ಮ ನಿಮ್ಮ ಮನೆಯಲ್ಲಿ ಕೂಡ ಆಗಬಹುದಾದ ವಾತಾವರಣವಾಗಿ ಕಾಣುತ್ತದೆ. ಆ ಚಿತ್ರದ ವ್ಯಕ್ತಿ ಹಂತಹಂತವಾಗಿ ನಾವೆಲ್ಲರೂ ಆಗಿ ಬದಲಾಗುವುದರಲ್ಲೇ ಚಿತ್ರದ ಯಶಸ್ಸಿದೆ. ಏನಿಲ್ಲ, ಇವತ್ತು (ಭಾನುವಾರ, 4,ಜನವರಿ 2009) `ಆಮೀರ್‌’ `ಎನ್‌ಡಿಟೀವಿ ಕಲರ್ಸ್‌’ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ನೋಡಿ. ಇಲ್ಲದಿದ್ದರೆ ಆ ಚಿತ್ರದ ಡಿವಿಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹುಡುಕಿದರೆ ಕಷ್ಟವೇನಿಲ್ಲ. ಸಿನಿಮಾ ಹ್ಯಾಗಿದೆ? ಮುಂದೆ ಓದಿ.`ಆಮೀರ್‌’, ಡಾ. ಅಮೀರ್‌ ಆಲಿ ಎಂಬ ಡಾಕ್ಟರ್‌ನ ಕತೆ. ಅಮೆರಿಕಾದಲ್ಲಿ ಓದುತ್ತಿದ್ದ ಯುವಕ ಕಾರ್ಯ ನಿಮಿತ್ತ ತನ್ನ ತವರಾದ ಮುಂಬೈಗೆ ಮರಳುತ್ತಾನೆ. ಅಷ್ಟರಲ್ಲಿ ಮುಂಬೈನ ಮೂಲಭೂತವಾದ ಗುಂಪೊಂದು ಆತನ ಇಡೀ ಕುಟುಂಬದ ಸದಸ್ಯರನ್ನು ಅಪಹರಿಸಿರುತ್ತದೆ. ಆತನ ಎಲ್ಲಾ ಸಂಪರ್ಕ ಸಾಧ್ಯತೆಯನ್ನೂ ಮುಚ್ಚಿ, ಒಬ್ಬ ಅನಾಮಿಕ ಮುಖಂಡ ಒಂದು ಫೋನ್‌ ನೀಡಿ ಆಮೀರ್‌ನನ್ನು ನಿರ್ದೇಶಿಸತೊಡಗುತ್ತಾನೆ. ಅನಂತರ ಅಲ್ಲಿರುವುದು ಆಮೀರ್‌, ಹೊರಹೋಗುವ ಕರೆಯನ್ನು ನಿಷೇಸಿಕೊಂಡು ಅವನ ಕೈಯಲ್ಲಿ ಕುಳಿತ ಮೊಬೈಲ್‌ ಮತ್ತು ಅವನನ್ನು ಹೆಜ್ಜೆ ಹೆಜ್ಜೆಗೂ ನಿರ್ದೇಶಿಸುವವನ ದನಿ.

ಇಲ್ಲಿ ಆಮೀರ್‌ ಒಬ್ಬ ಮುಸಲ್ಮಾನ ಎನ್ನುವುದಷ್ಟೇ ಆ ಮೂಲಭೂತವಾದಿಗೆ ಬೇಕಾಗಿರುವ ವಿಷಯ. ಹಳೆ ಮುಂಬೈನ ಬೀದಿಯನ್ನೂ ಅಲ್ಲಿನ ಜನವಾಸದ ದುಃಸ್ಥಿತಿಯನ್ನೂ ತೋರಿಸುತ್ತಾ ಆ ಮುಖಂಡ ಫೋನಲ್ಲೇ ಚರ್ಚೆಗಾರಂಭಿಸುತ್ತಾನೆ: `ನೋಡು, ನೀನೇನೋ ಅಲ್ಲಿಗೆ ಹೋಗಿ ಡಾಕ್ಟರ್‌ ಆದೆ. ಆದರೆ ಇಲ್ಲಿ ನೋಡು, ನಿನ್ನ ಕೋಮಿನವರು ಎಂಥ ಹತಭಾಗ್ಯ ಬದುಕನ್ನು ಕಾಣುತ್ತಿದ್ದಾರೆ! ಅವರ ಉದಾರಕ್ಕೆ ನೀನು ಭಯೋತ್ಪಾದಕ ಕೃತ್ಯಕ್ಕೆ ಬರಬೇಕು. ನಿಮ್ಮವರಿಗೆ ನ್ಯಾಯ ಸಲ್ಲಬೇಕು’. ಇದನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದಿದ್ದರೂ ಹಲವು ರೀತಿಯಲ್ಲಿ ಆತ ಮೂಲಭೂತವಾದಿಯನ್ನು ವಿರೋಸುತ್ತಿದ್ದರೂ ತನ್ನ ಎಲ್ಲಾ ಚಲನವಲನಗಳೂ ಆ ಮೂಲಭೂತವಾದಿಯ ನಿಯಂತ್ರಣದಲ್ಲಿದೆ ಎಂದು ಗೊತ್ತಾದ ಕಾರಣ, ತನ್ನ ಕುಟುಂಬ ವರ್ಗವನ್ನು ಉಳಿಸಲು ಯಾವುದೋ ಬಸ್‌ನಲ್ಲಿ ಬಾಂಬ್‌ ಇಡಲು ಆಮೀರ್‌ ಒಪ್ಪಿಕೊಳ್ಳುತ್ತಾನೆ. ಅಲ್ಲಿಂದ ಕತೆ ಇನ್ನೊಂದು ತೀವ್ರ ಸ್ತರವನ್ನು ತಾಕುತ್ತದೆ.

ಉಸಿರು ಬಿಗಿಹಿಡಿದು ನೋಡಬೇಕಾದ ಒಂದು ಥ್ರಿಲ್ಲರ್‌ ಆಗಿ ಮೇಲ್ಮಟ್ಟಕ್ಕೆ `ಆಮೀರ್‌’ ಕಾಣಿಸಿಕೊಂಡರೂ ಅದು ಅಷ್ಟೇ ಅಲ್ಲ. ಚಿತ್ರದ ಆತ್ಮವಾಗಿ ಭಯೋತ್ಪಾದನೆಯ ಅಸ್ತ್ರವಾಗುವ ಅಮಾಯಕನೊಬ್ಬನಿದ್ದಾನೆ. ಈ ಜಗತ್ತಲ್ಲಿ ನಡೆಯುತ್ತಿರುವ ಅಸಂಖ್ಯ ಭಯೋತ್ಪಾದಕ ಕೃತ್ಯದಲ್ಲಿ `ಉಗ್ರ’ ಎಂಬ ಹಣೆಪಟ್ಟಿ ಹೊತ್ತು ಸಾಯುವವರಲ್ಲಿ ಇಂಥ ಎಷ್ಟೋ ಅಮಾಯಕರೂ ಇರಬಹುದು ಎಂಬ ಚರ್ಚೆಗೆ ಈ ಚಿತ್ರ ತೊಡಗುತ್ತಾ ಹೋಗುತ್ತದೆ. ಇದ್ಯಾವ ಗೊಡವೆಗೂ ಹೋಗದ, ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿಕೊಂಡು, ಜೀವ ವಿರೋ ಭಯೋತ್ಪಾದಕತೆಯನ್ನು ಖಂಡಿಸುತ್ತಿದ್ದ `ಆಮೀರ್‌’ನಂಥ ಯುವಕನೇ ಭಯೋತ್ಪಾದನೆಯ ಅಸ್ತ್ರವಾಗಿಬಿಡುವ ದಿಗ್ಭ್ರಮೆಯಲ್ಲೇ ಚಿತ್ರದ ವ್ಯಂಗ್ಯವಿದೆ.

ಅಂದಹಾಗೆ `ಆಮೀರ್‌’ ಕತೆಗೆ ಸೂರ್ತಿಯಾಗಿರುವುದು ಫಿಲಿಫೈನ್ಸ್‌ ಚಿತ್ರ `ಕ್ಯಾವಿಟೆ’. ಅಲ್ಲಿ ನಡೆಯುವ ಇಂಥದೇ ಒಂದು ಘಟನೆಯನ್ನು ನಿರ್ದೇಶಕ ರಾಜ್‌ಕುಮಾರ್‌ ಗುಪ್ತಾ, ನಮ್ಮ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಹೇಳಲು ಹೋಗಿದ್ದಾರೆ. ಅದರಲ್ಲಿ ಅವರು ಗೆದ್ದಿದ್ದಾರೆ ಕೂಡ. ಇಡೀ ಚಿತ್ರ ಆಮೀರ್‌ನ ಪಾತ್ರದಿಂದಲೇ ನಡೆಯುತ್ತದೆ. ಅಲ್ಲಿ ಇಲ್ಲಿ ಬಂದು ಹೋಗುವ ಒಂದಷ್ಟು ಸಣ್ಣಪುಟ್ಟ ಪಾತ್ರಗಳು, ಮೂಲಭೂತವಾದಿಯ ಮಾತು, ನೆರಳಲ್ಲಿ ಕಂಡುಬರುವ ಅವನ ಆಕಾರ ಹೊರತುಪಡಿಸಿದರೆ ಇಡೀ ಚಿತ್ರವನ್ನು ಆಮೀರ್‌ ಪಾತ್ರಧಾರಿರಾಜೀವ್‌ ಖಂಡೇಲ್‌ವಾಲ್‌ ಆಳುತ್ತಾರೆ. ಅವರ ಅಭಿನಯ, ಪಾತ್ರದ ಮನಃಸ್ಥಿತಿಯ ತೀವ್ರತೆಯನ್ನು ಮೂರ್ತಗೊಳಿಸಿಬಿಟ್ಟಿದೆ.

ದೃಶ್ಯದ ದೃಷ್ಟಿಯಿಂದ ಇದೊಂದು ಸ್ಲೋಮೋಷನ್‌ ಕಾವ್ಯ. ಹಳೆ ಮುಂಬೈಯ ಗಲ್ಲಿ ಗಲ್ಲಿಗಳು, ಅಲ್ಲಿನ ಭಯ, ಅನುಮಾನಾಸ್ಪದ ನಡೆವಳಿಕೆ, ಕೊಳಚೆ, ಕೊಂಪೆ, ಕತ್ತರಿಸುತ್ತಿರುವ ಮಾಂಸದಂಗಡಿ- ಎಲ್ಲವೂ ಇಡೀ ಚಿತ್ರದ ಆಶಯವನ್ನು ಕಟ್ಟಿಕೊಟ್ಟಿವೆ. ಇಡೀ ಚಿತ್ರ ಸ್ಲೋಮೋಷನ್‌ನಲ್ಲೇ ಸಾಗುತ್ತಾ, `ವರ್ತಮಾನ ಕಾಲ’ವಾಗಿಹೋಗುತ್ತಿರುವ ಭಯೋತ್ಪಾದನೆಯನ್ನು ದೃಶ್ಯಭಾಷೆಯಲ್ಲೇ ಹೇಳುತ್ತಿರುವಂತೆ ಕಾಣಿಸುತ್ತದೆ.

ಇನ್ನು ತಾಂತ್ರಿಕವಾಗಿ ಆ ಚಿತ್ರದ ಬಗ್ಗೆ ಮಾತಾಡುವುದಕ್ಕೆ ಇನ್ನಷ್ಟು ಪದಗಳು ಬೇಕಾಗುತ್ತದೆ.

ಮತ್ತೊಂದು ವರ್ಷ: ಹೊಸ ವರ್ಷನ್‌!
ಗೋಡೆಯ ಮೇಲೆ ಹೊಸ ಕ್ಯಾಲೆಂಡರ್‌ ಹಾಕಬೇಕು, ಎಲ್ಲಾದರೂ ಡೇಟ್‌ ಬರೆಯಬೇಕಾಗಿ ಬಂದಾಗ ಬದಲಾದ ಇಸ್ವಿಯನ್ನು ನೆನಪು ಮಾಡಿ ನೆನಪಿಟ್ಟುಕೊಳ್ಳಬೇಕು. ಜನವರಿಯಿಂದಾದರೂ ಸರಿಯಾಗುತ್ತೇನೆ ಎಂದು ಮತ್ತೊಂದು ವರ್ಷ ಹೊಸ ರೆಸಲ್ಯೂಷನ್‌ ತೆಗೆದುಕೊಳ್ಳಬೇಕು. ಈ ವರ್ಷದಿಂದ ಕುಡಿತವನ್ನು ಬಿಟ್ಟೆ, ಇನ್ನು ಸಿಗರೇಟು ಮುಟ್ಟುವುದೇ ಇಲ್ಲ ಎಂದೆಲ್ಲಾ ನೆಂಟರಿಷ್ಟರ ಹತ್ತಿರ ಜನವರಿ ಮೊದಲ ವಾರದಲ್ಲೇ ಕೊಚ್ಚಿಕೊಳ್ಳುವುದಾದರೆ ಕೊಚ್ಚಿಕೊಳ್ಳಿ. ಇಲ್ಲದಿದ್ದರೆ ಜನವರಿ ಮುಗಿಯುತ್ತಲೇ ಜಾರಿಗೆ ಬಂದ ಆ ರೆಷಲ್ಯೂಷನ್‌ ಜಾರಿ ಹೋಗಿಬಿಡಬಹುದು.

ಜನವರಿ ಒಂದು ಥರ ಸ್ಟಾಕ್‌ ಕ್ಲಿಯರೆನ್ಸ್‌ ತಿಂಗಳು. ಕಳೆದ ವರ್ಷ ಬಾಕಿ ಇಟ್ಟುಕೊಂಡ ವಿಷಯಗಳನ್ನೆಲ್ಲಾ ಮುಗಿಸಲೇಬೇಕಾಗುತ್ತದೆ. ತೆಗೆದುಕೊಳ್ಳಬೇಕಾದ ಹೊಸ ವಸ್ತು, ಹಣ ತೊಡಗಿಸಬೇಕಾದ ಮ್ಯೂಚುವಲ್‌ ಫಂಡ್‌, ಪ್ರಾರಂಭಿಸಬೇಕಾದ ಹೊಸ ವ್ಯಾಪಾರ, ನಿಲ್ಲಿಸಲು ನಿರ್ಧರಿಸಿದ ಜಗಳ, ತೆಗೆದುಕೊಳ್ಳಬೇಕೆಂದುಕೊಂಡ ಸೈಟ್‌, ಕೊಂಡ ಸೈಟ್‌ನಲ್ಲಿ ಕಟ್ಟಿಸಲು ಶುರುಮಾಡಬೇಕಾದ ಮನೆ, ತುಂಬಬೇಕಾದ ಸಾಲ, ಭರಿಸಬೇಕಾದ ಬಡ್ಡಿ ಇತ್ಯಾದಿ ಇತ್ಯಾದಿ. ಹಳೆಯ ವರ್ಷದಲ್ಲಿ ಬಿಡುಗಡೆ ಮಾಡಬೇಕಾಗಿದ್ದ ಚಿತ್ರವನ್ನು ಬೇಕೆಂದೇ ಮುಂದೂಡಿ, ಹೊಸ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದುಕೊಂಡಿದ್ದೆಲ್ಲಾ ಆಗುತ್ತದಾ, ಬಿಡುಗಡೆಯಾದ ಚಿತ್ರ ಹಿಟ್‌ ಆಗುತ್ತದಾ ಎಂದೇ ಚಿಂತಿಸುತ್ತಾ ಜನವರಿ ಪ್ರತಿ ಹೊಸವರ್ಷಕ್ಕೂ ಒಂದು ಥರದ ಜನ`ವರಿ’ಯೇ ಆಗುತ್ತದೆ.

ಹೊಸ ವರ್ಷ ಎಂದರೆ ಸಂಭ್ರಮ. ಅಲ್ಲಿ ಇರುವುದು ಭರವಸೆ. ಆದರೆ ಆ ಭರವಸೆ ಹೆಚ್ಚಿನ ಸಂದರ್ಭದಲ್ಲಿ ಕ್ಷಣಿಕ, ಕೆಲವೊಂದು ಶಾಶ್ವತ. ಕಾಲೇಜಿನ ಎಷ್ಟೋ ಹುಡುಗ, ಹುಡುಗಿಯರು ಮಾತು ಬಿಟ್ಟಿದ್ದರೂ ಹೊಸ ವರ್ಷದಂದು ದೋಸ್ತರಾಗುತ್ತಾರೆಂಬುದು ಒಂದು ಶಾಶ್ವತ ಭರವಸೆ. ಬೈಯುವ ಮಾಸ್ತರು, ಲೆಕ್ಚರರ್‌ಗಳು ವಿದ್ಯಾರ್ಥಿಗಳನ್ನು ಹೊಸ ವರ್ಷದ ದಿನವಾದರೂ ಚೆನ್ನಾಗಿ ಮಾತಾಡಿಸುತ್ತಾರೆ ಎಂಬ ಭರವಸೆ ಕಾಲೇಜಿನ ಕ್ಲಾಸ್‌, ಪಿರಿಯಡ್‌ಗಳಿಗೆ. ಇದು ಕ್ಷಣಿಕ ಆಗಿರಲೂಬಹುದು. ರೇಗುವ ಕಂಡಕ್ಟರ್‌, ಸರಿಯಾಗಿ ಮಾತಾಡಿಸದೇ ದಿನಾ ಟೆಕ್ಕಿಗಳನ್ನು ತುಂಬಿಸಿಕೊಳ್ಳುವ ಕ್ಯಾಬ್‌ಡ್ರೈವರ್‌, ಪ್ರಾಜೆಕ್ಟ್‌ ಹೆಡ್‌, ಸರ್ಕಾರಿ ಆಸ್ಪತ್ರೆ ಡಾಕ್ಟರ್‌, ಮಹಾನಗರ ಪಾಲಿಕೆಯ ಸಿಬ್ದಂದಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳೆಲ್ಲಾ ಆ ಒಂದು ದಿನವಾದರೂ `ಹ್ಯಾಪಿ ನ್ಯೂ ಈಯರ್‌’ ಸ್ವೀಕರಿಸಿ, ನಗುತ್ತಾ `ವಿಶ್‌’ವಾಸ ತೋರಿಸಬಹುದು ಎಂಬುದು ಶಾಶ್ವತವೋ, ಕ್ಷಣಿಕವೋ- ನಿರ್ಧರಿಸಲಾಗದ ಭರವಸೆ.

ಹೊಸ ವರ್ಷದ ಮೊದಲ ದಿನ ಹಳ್ಳಿ, ಕುಗ್ರಾಮಗಳ ಪಾಲಿಗೆ ಎಂದಿನಂತೆ ಮತ್ತೊಂದು ದಿನ ಅಷ್ಟೇ. ಆದರೆ ನಗರಕ್ಕೆ ಅದು ವಿಶೇಷ ದಿನ. ಆ ದಿನದ ಹಿಂದಿನ ರಾತ್ರಿ ಅವರು ತಮ್ಮ ದೇಹ, ಮನಸ್ಸುಗಳನ್ನು ಸಂಭ್ರಮದ ಮೂಸೆಯಲ್ಲಿ ಬಿಸಿ ಮಾಡಿಕೊಂಡಿರುತ್ತಾರೆ. ಆ ಬಿಸಿಯ ಮೇಲಿಟ್ಟ ಹೆಂಚಲ್ಲಿ ಕಾಯುವ ದೋಸೆಯಂತೆ ಅವರ ಮುಂದಿನೆಲ್ಲಾ ಕನಸುಗಳು ಎರೆಯಲ್ಪಡುತ್ತವೆ. ಸಾಂಸ್ಕೃತಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವುದೋ, ಚಿರಾಟ, ಕುಡಿತ, ನಲಿತಗಳಲ್ಲಿ ಸಂಭ್ರಮ ಕಂಡುಕೊಳ್ಳುವುದೋ ಎಂಬುದು ವೈಯಕ್ತಿಕ ಆಯ್ಕೆ. ಆದರೆ ನಗರದ ಎಲ್ಲರಿಗೂ ಒಂದು ಸಂಭ್ರಮದ ಅಭಿವ್ಯಕ್ತಿ ಬೇಕಾಗಿರುತ್ತದೆ. ಆ ಅಭಿವ್ಯಕ್ತಿಗೆ ಹೊಸ ವರ್ಷ ಎನ್ನುವುದೂ ಒಂದು ಆಪ್ಷನ್‌ ಅಷ್ಟೇ. ಮನಸ್ಸನ್ನು ಖುಷಿಗೊಳಿಸುವ ಅನೇಕ ನೆಪಗಳಲ್ಲಿ ಇದೊಂದು ಪ್ರಮುಖ ನೆಪ.

ಈ ನವ ವರ್ಷಾಚರಣೆ ಎಂಬುದು ಭಾರತದಲ್ಲಿ ಯಾವಾಗಿನಿಂದಲೂ ಒಂದು ವಿವಾದಿತ ಆಚರಣೆ. ಕಾರಣ, ಅದೊಂದು ಅನುಕರಣೆ. ಭಾರತಕ್ಕೆ ಹೊಸ ವರ್ಷ ಜನವರಿ ಒಂದು ಅಲ್ಲವೇ ಅಲ್ಲ. ಸಾಂಸ್ಕೃತಿಕವಾಗಿ ಭಿನ್ನ ಭಿನ್ನ ಆಚರಣೆಯನ್ನು ಆಶ್ರಯಿಸಿರುವ ಭಾರತದಲ್ಲಿ, ಒಂದೊಂದು ರಾಜ್ಯ ಒಂದೊಂದು ಸಂದರ್ಭವನ್ನು ಹೊಸ ವರ್ಷವೆಂದು ನಂಬಿಕೊಂಡು ಬಂದಿದೆ. ಕರ್ನಾಟಕ ಮತ್ತು ಆಂಧ್ರಕ್ಕೆ ಯುಗಾದಿ ಹೊಸ ವರ್ಷ. ಹಾಗಾಗಿ ಹೊಸ ವರ್ಷ ಈ ಭಾಗದ ಜನರಿಗೆ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಬರುತ್ತದೆ.

ಇನ್ನು ಮಹಾರಾಷ್ಟ್ರದ ಕಡೆ ಗುಡಿ ಪದ್ವಾ ಎಂಬ ಆಚರಣೆ ಇದೆಯಂತೆ. ಅದೂ ಹೆಚ್ಚು ಕಡಿಮೆ ನಮ್ಮ ಯುಗಾದಿ ಆಚರಣೆಯ ಹೊತ್ತಿಗೆ ಅಂದರೆ ಚೈತ್ರ ಮಾಸದಲ್ಲಿ ಬರುತ್ತದೆ. ಇನ್ನು ತಮಿಳುನಾಡಿಗೆ ಏಪ್ರಿಲ್‌ನಲ್ಲಿ ಹೊಸ ವರ್ಷ. ಏಪ್ರಿಲ್‌ 13 ಅಥವಾ 14ಕ್ಕೆ ನಡೆಯುವ ಈ ಆಚರಣೆಗೆ `ಪುತ್ತಂಡು’ ಎಂದು ಕರೆಯುತ್ತಾರಂತೆ. ಮಲೆಯಾಳಿಗಳು `ವಿಶು’ ಎಂಬ ಹಬ್ಬವನ್ನು ದೊಡ್ಡದಾಗಿಯೇ ಆಚರಿಸುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಕರ್ನಾಟಕದ ತುಳುವರು `ಬಿಸುಪರ್ಬ’ವೆಂಬ ಹಬ್ಬವನ್ನು ಹೊಸ ವರ್ಷದ ಸ್ವರೂಪದಲ್ಲೇ ಆಚರಿಸಿಕೊಳ್ಳುತ್ತಾರೆ. ಹೀಗೆ ಈ ಎಲ್ಲಾ ಕಾಲಗಳೂ ಲೆಕ್ಕದ ಪ್ರಕಾರ ನಮಗೆ ಹೊಸ ವರ್ಷಾಚರಣೆ ಆಗಬೇಕು.

ಸಾಂಸ್ಕೃತಿಕವಾಗಿ ಭಾರತದಲ್ಲಿ ಬೇರೆ ಬೇರೆ ಕಾಲವನ್ನು ಹೊಸ ವರ್ಷವನ್ನಾಗಿ ನೋಡಿರುವುದರಿಂದ ಜನವರಿ ತಿಂಗಳ ಮೊದಲ ದಿನವನ್ನು `ಹೊಸ ವರ್ಷ’ವೆಂದು ಸಂಭ್ರಮಿಸಬೇಕೇಕೆ ಎನ್ನುವುದು ಸಂಪ್ರದಾಯವಾದಿಗಳ ಪ್ರಶ್ನೆ. ಆದರಿದನ್ನು ಯಾರು ಒಪ್ಪುತ್ತಾರೋ ಬಿಡುತ್ತಾರೋ, `ಹೊಸ ವರ್ಷ’ಕ್ಕೆ ಅದು ಸಂಬಂಧವಿಲ್ಲ. ಜಾಗತೀಕರಣದ ಪ್ರಭಾವದಿಂದ ಇಂಥ ವಿವೇಚನೆಗಳಿಗೆ ಅವಕಾಶವಿಲ್ಲ. ಜಗತ್ತಿಗೆ ಯಾವುದು ಹಬ್ಬವೋ ಆ ದಿನವೇ ಭಾರತದ ನಗರಗಳ ಜಗತ್ತಿಗೂ ಹಬ್ಬ.

ಹಾಗೆ ನೋಡಿದರೆ ಜನವರಿಯಿಂದ ಪ್ರಾರಂಭವಾಗುವ ಹೊಸ ಕ್ಯಾಲೆಂಡರ್‌ ವರ್ಷಕ್ಕೂ ಮಾನಸಿಕ ಸ್ಥಿತಿಗೂ ಸಂಬಂಧವಿದೆ. ಈ ಹೊತ್ತಿನಲ್ಲಿ ಜಗತ್ತಿನ ಎಲ್ಲಾ ಮನಸ್ಸುಗಳೂ ಪ್ರಫುಲ್ಲವಾಗಿ ವರ್ತಿಸುತ್ತವೆ. ಯಾವುದಾದರೂ ವಿಷಯ ನಮ್ಮ ಎದೆಬಡಿತವನ್ನು ಜಾಸ್ತಿ ಮಾಡಿದರೆ, ಎದೆ ಬಡಿತವನ್ನು ಸಮಸ್ಥಿತಿಗೆ ತಂದರೆ ಅದು ಒಂದು ಕೆಲಸದ ಮೇಲೆ ಉಂಟುಮಾಡುವ ಪರಿಣಾಮ ಬೇರೆ ಬೇರೆ. ಸೋಮವಾರ ಬೆಳಿಗ್ಗೆ ಈ ಜಗತ್ತಿನಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತವೆ ಎಂದು ಹಿಂದೊಂದು ಸಮೀಕ್ಷೆ ಮಾಡಲಾಗಿತ್ತು. ಅಂದರೆ ಭಾನುವಾರದ ರಜೆಯಂದು ಸುಸ್ಥಿತಿಯಲ್ಲಿರುವ ಮನಸ್ಸು, ಸೋಮವಾರದ ಕೆಲಸಕ್ಕೆ ಹೊರಡುತ್ತಲೇ ಉದ್ವೇಗಕ್ಕೆ, ಚಿಂತೆಗೆ ಈಡಾಗುತ್ತದೆ. ಹೀಗೆ ನಮ್ಮ ಮನಸ್ಸಿನ ಸ್ಥಿತಿಗೂ ಕೆಲಸಕ್ಕೂ ಒಂದು ಸಂಬಂಧವಿದೆ.

ಹಾಗಾಗಿ ನವ ವರ್ಷಾಚರಣೆ ಎಂಬ ಸಂಭ್ರಮ ನಮ್ಮ ಕೆಲಸವನ್ನು ಚೆಂದಗಾಣಿಸಿ ಕೊಡುತ್ತದಾದರೆ ಅದು ಯಾರಿಗೆ ಬೇಡ. ಆದರೆ ಸಂಭ್ರಮಾಚರಣೆಯಲ್ಲೇ ಯಾರಿಗಾದರೂ ಸಾಮಾಜಿಕವಾಗಿ, ವೈಯಕ್ತಿಕವಾಗಿ ತೊಂದರೆಯಾಗುವುದಾದರೆ ಅದು ನಮಗೂ ಬೇಡ, ನಿಮಗೂ ಬೇಡ.

ಉದಯವಾಣಿಯ `ನಮ್ಮ ಬೆಂಗಳೂರು’ ಪುರವಣಿಯ ಪ್ರಕಟಿತ ಲೇಖನ

ಅವಳು ಹೊರಗೆ, ಇವಳು ಬಳಿಗೆ
ಚಿತ್ರಕೃಪೆ: ಸ್ಪ್ರಾಗ್‌ ಫೋಟೋ ಸ್ಟಾಕ್‌

ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿಸುತ್ತದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ನಿರೀಕ್ಷೆ, ಕಾತರದ ಕಣ್ಣುಗಳು. ಪ್ರತಿ ವರ್ಷ ಕಳೆಯುವಾಗಲೂ ಆ ವರ್ಷ `ಸಾಕಪ್ಪಾ’ ಎನಿಸಿರುತ್ತದೆ, ಅಯ್ಯೋ ಈ ವರ್ಷದಷ್ಟು ಕೆಟ್ಟದಾಗಿ ಯಾವುದೂ ಇರಲಿಲ್ಲ ಎಂಬ ಭ್ರಮೆ ಮೂಡುತ್ತದೆ. ಅಂದರೆ ಮನೆಯ ಅಜ್ಜಿಯಂತೆ ಆಕೆ ಯಾರಿಗೂ ಬೇಡ. ಹೊಸ ವರ್ಷ ಮನೆಗೆ ಬರುತ್ತಿರುವ ಹೊಸ ಹೆಣ್ಣಂತೆ, ಎಲ್ಲರಿಗೂ ಕುತೂಹಲ.

ಗೋಡೆಯ ಮೇಲೆ ಕ್ಯಾಲೆಂಡರ್‌ ಬದಲಾಗಿ, ಸಹಿ ಕೆಳಗೆ ಬರೆಯುವ ದಿನಾಂಕಗಳು ಬದಲಾಗಿ, ಇಸವಿಗೆ ಒಂದು ವರ್ಷ ಹೆಚ್ಚು ವಯಸ್ಸಾಗಿ ಜಗತ್ತು ಮುಂದಡಿ ಇಡುತ್ತಿದೆ. ಡಿಸೆಂಬರ್‌ನ ಚಳಿ, ನವೆಂಬರ್‌ನ ಬಾಂಬ್‌ ದಾಳಿ, ಈ ವರ್ಷದ ಕೊನೆಯ ರಿಸೆಷನ್‌ ಭೂತ, ಸಮರ ಭೀತಿ-ಗಳ ಮಧ್ಯೆ ಬೆಳಗ್ಗೆ ಬರುವ ಸೂರ್ಯನಂತೆ ಹೊಸ ವರ್ಷ ಬರುತ್ತಿದೆ. ಆದರೆ ಆ ಹೊತ್ತಿಗೆ ಕಳೆದ `ಹಳೆಯ ವರ್ಷ’ ನಮ್ಮ ಬ್ಲಾಗ್‌ನ ಕವಿತೆಗೆ ಕಂಡಿದ್ದು ಹೀಗೆ.

ಹೇಗೆ?

`ಅ-ಮೃತವರ್ಷಿಣಿ’ ಕವಿತೆ ಏನನ್ನುತ್ತಿದೆಯೋ, ಹಾಗೆ.

ಒಂದೇ ವರ್ಷದ ಹಿಂದೆ

ವರ್ಷಾರಂಭದ ತಾರೀಕುಗಳ,

ವಾರಗಳ,

ದಿವಾ, ಗಳಿಗೆಗಳ

ಮನೆಗೆ ನಗುನಗುತ್ತಾ ಕಾಲಿಟ್ಟವಳು

ಆಕೆ, ವರ್ಷಿಣಿ.

ಹಳೆಯ ಕಸಗಳ

ಒಂದೂ ಬಿಡದೇ ಎತ್ತಿ ಎಸೆದು

ಹೊಸ ಸರಸಗಳ

ಮೆಲ್ಲ ಮೆಲ್ಲ ಎತ್ತಿಟ್ಟು

ಎಲ್ಲರನ್ನೂ ಮುತ್ತಿಟ್ಟಳು,

ಹಸಿದ ಬಾಯಿಗಳಿಗೆ ತುತ್ತಿತ್ತಳು.

ಈ ಜಗತ್ತಿನ ಎಲ್ಲಾ

ಸಂಭ್ರಮಗಳೂ

ಇವಳ ಮಡಿಲ ಮೇಲಾಡಿ,

ಸಂಕಟಗಳೆಲ್ಲಾ

ಒಡಲನ್ನು ಹುಡಿಮಾಡಿ

ಹಾರಿ ಹೋದವು ಕಾಲದ

ರೆಕ್ಕೆಯ ಮೇಲೆ…

ಈಕೆ ಕಂಪಿಸುವ ಕೈಗಳಲ್ಲಿ

ಅನ್ನಕ್ಕಿಟ್ಟು,

ಬೆಳ್ಳಗಾಗುತ್ತಿರುವ ಕೂದಲನ್ನು

ಎತ್ತಿ ಕಟ್ಟಿ

ಅಸಂಖ್ಯ ಪುಟ್ಟ ಬದುಕುಗಳನ್ನು

ಸಾಲು ಕೂರಿಸಿ ಉಣ್ಣಲಿಕ್ಕಿದಳು.

ಆ ಅನ್ನವನ್ನು ಕಳವು ಮಾಡಿದವರನ್ನು,

ಅಡುಗೆಯೊಲೆಯ ಉರಿಯಲ್ಲೇ

ಊರು ಸುಟ್ಟವರನ್ನು

ವರ್ಷಮ್ಮ ಹೊಗೆಯ ಮಧ್ಯೆ

ಸಂಕಟದಿಂದ ನೋಡಿದಳು,

ಆ ಹೊಗೆಯೇ ಆಕೆಗೆ

ಹಗೆಯಾಯಿತು,

ಹೊಗೆಯಲ್ಲಿ ಸಿಕ್ಕಿಕೊಂಡ ಮೇಲೆ

ಹಾಸಿಗೆಯೇ ಅವಳ ಪಾಲಾಯಿತು…

ಅಳಿದ ದಿನ, ವಾರ, ತಿಂಗಳುಗಳ

ಹಗ್ಗದ ಮಂಚದ ಮೇಲೆ

ಈಗ ಈ ಅಮೃತವರ್ಷಿಣಿ

ಹಣ್ಣು ಹಣ್ಣು ಮುದುಕಿ..

ಅವಳ ಕಣ್ಣಲ್ಲಿ ಆಡಲಾಗದ ಪಾಡು,

ಕಿವಿಯಲ್ಲಿ ಇರಿಸಿಕೊಳ್ಳಲಾರದ ಹಾಡು.

ಯಾರ್ಯಾರೋ

ಶತಾಯುಷಿಗಳಾಗುತ್ತಾರಂತೆ-

ಸಾವು ಕರೆಯುವುದನ್ನು ಮರೆತು.

ಹಾಗೇ ಈಕೆಯೂ

ಸಾಯದೇ ಉಳಿದುಕೊಂಡರೆ

ಅಜ್ಜಿ ಶುಷ್ರೂಷೆ ಕಳೆದು

ಎದ್ದು ನಿಲ್ಲುತ್ತಾಳೆ,

ಆ ಸಲವಾದರೂ

ಈ ಅಜ್ಜಿಯಿಂದ ಎತ್ಯಾಡಿಸಿಕೊಂಡ

ವಾರ, ತಿಂಗಳು, ಗಳಿಗೆಗಳು

ಅಜ್ಜಿಗೇ ಅಮ್ಮನಾಗಬಹುದು,

ಅವಳನ್ನು ಇನ್ನಾದರೂ

ಚೆನ್ನಾಗಿ ನೋಡಿಕೊಳ್ಳಬಹುದು.

ಐಸಿಯುಯಲ್ಲಿ

ಒರಗಿರುವ ವರ್ಷಜ್ಜಿಗೆ

ಆರೈಕೆ ಬೇಕು,

ನಮ್ಮ ನಿಮ್ಮೆಲ್ಲರ

ಹಾರೈಕೆಯಾದರೂ ಸಾಕು.

ಕಳೆದ ರಾತ್ರಿ ಕಂಡ ಕೆಟ್ಟ ಕನಸು
(ಧರ್ಮಾಂಧತೆಗೆ ಬಲಿಯಾದ ಜಗತ್ತಿನ ಎಲ್ಲಾ ಅಮಾಯಕರಿಗೆ ಮಿಡಿಯುವ ಬರಹ)

ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ  ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.

`ಪರ್ಜಾನಿಯಾ’ ಕತೆ ಗೋಧ್ರಾ ದುರಂತದ ನಂತರ ನಡೆಯುವ  ಅಹ್ಮದಾಬಾದ್‌ನ ಒಂದು ಘಟನೆ. ನಾಸಿರುದ್ದೀನ್‌ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ  ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್‌ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ.

ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ.

ಆ ಬೆಳಿಗ್ಗೆ ಇಡೀ ಜಗತ್ತು ಒಳ್ಳೆಯದನ್ನು ಹಾರೈಸಿ, ಎಲ್ಲರೂ ತಮ್ಮ ತಮ್ಮ ದೇವರನ್ನು ಪ್ರಾರ್ಥಿಸಿ ತಂತಮ್ಮ ಕೆಲಸಕ್ಕೆ ಹೊರಟು ಹೋದ ಮೇಲೆ ಯಾರೋ ಸುದ್ದಿ ಮುಟ್ಟಿಸುತ್ತಾರೆ. ಸಾವಿರದ ಲೆಕ್ಕದಲ್ಲಿರುವ ದೊಡ್ಡ ಹಿಂದೂ ಗುಂಪೊಂದು ದಾಳಿ ಮಾಡತೊಡಗುತ್ತದೆ. ನಾಸಿರುದ್ಧೀನ್‌ರ ಪಾರ್ಸಿಕುಟುಂಬ, ಮುಸ್ಲಿಂ ಕುಟುಂಬಗಳು ಸೇರಿದಂತೆ ಅನೇಕ ಧರ್ಮದವರಿರುವ ಒಂದು ಅಪಾರ್ಟ್‌ಮೆಂಟ್‌ಗೆ ಬಾಗಿಲು ಹಾಕಲಾಗುತ್ತದೆ, ಅವರಿಂದ ರಕ್ಷಿಸಿಕೊಳ್ಳಲು.

ಅಷ್ಟರಲ್ಲಿ ನಾಸಿರುದ್ಧೀನ್‌ ಶಾ ಆಫೀಸಿನಲ್ಲಿದ್ದಾರೆ. ಇಲ್ಲಿರುವುದು ಇಬ್ಬರು ಮಕ್ಕಳ ಜೊತೆ ಸಾರಿಕಾ ಮಾತ್ರ. ಹಾಕಿದ ಬಾಗಿಲಲ್ಲೇ ದೊಡ್ಡ ಕಿಡಿಗೇಡಿ, ಮತಾಂಧ ಗುಂಪು ಸಿಕ್ಕ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ, ಹಿಂದೂವಾ ಎಂದು ಪರೀಕ್ಷಿಸುತ್ತದೆ. ಕೊನೆಗೆ ಬಾಗಿಲು ಒಡೆದು ಅವರೆಲ್ಲಾ  ಸಾವಿರ ಸಾವಿರ ಸಂಖ್ಯೆಯಲ್ಲಿ ದಾಳಿ ಮಾಡುತ್ತಾರೆ. ನೋಡು ನೋಡುತ್ತಿದ್ದಂತೇ ಬೆಂಕಿ ಹಚ್ಚುತ್ತಾರೆ, ಘೋಷಣೆ ಕೂಗುತ್ತಾರೆ. ಮಹಡಿ ಮೇಲಿದ್ದವರನ್ನು ಕೆಳಗೆ ಎಳೆತಂದು ಸಾಯಿಸುತ್ತಾರೆ. ಏನಾಗುತ್ತಿದೆ, ಎಲ್ಲಿ ಹೋಗಬೇಕು ಎಂಬೆಲಾಲ ಆಲೋಚನೆ ಬರುವ ಮೊದಲೇ ನೂರಾರು ಮಂದಿ ಬೆಂಕಿಗೆ ಉರಿದು ಬೀಳುವ ಇರುವೆಗಳೆಂತೆ ಸಾವಿಗೀಡಾಗುತ್ತಾರೆ. ಅಪಾರ್ಟ್‌ಮೆಂಟ್‌ ಸುಟ್ಟು ಕರಕಲಾಗುತ್ತಾ ಸ್ಮಶಾನದಂತೆ ಹೊಗೆ, ಧಗೆ, ಬೂದಿಗಳಿಂದ ತುಂಬಲಾರಂಭಿಸುತ್ತದೆ.

ಈಗ ಅಲ್ಲೇ ಸಾರಿಕಾ ಮತ್ತು ಮಕ್ಕಳಿರುವ ಪಾರ್ಸಿ ಕುಟುಂಬವೂ ಜೀವ ಉಳಿಸಿಕೊಳ್ಳಲು ಪರದಾಡುತ್ತಿದೆ. ಮಹಡಿಯಲ್ಲಿರುವ ಈ ಮೂವರು ಆಶ್ರಯಕ್ಕಾಗಿ ಅಲೆದರೂ ಸಾಧ್ಯವಾಗುವುದಿಲ್ಲ. ಕೊನೇ ಪಕ್ಷ ತನ್ನಿಬ್ಬರು ಮಕ್ಕಳಿಗೆ ಆಶ್ರಯ ನೀಡುವಂತೆ ಸಾರಿಕಾ ಬೇಡಿಕೊಳ್ಳುತ್ತಾಳೆ. ಬಾಗಿಲು ಬಡಿದು, ಅತ್ತು ಗೋಗರೆದು ಬೇಡಿಕೊಳ್ಳುತ್ತಾಳೆ. ಆದರೆ ಯಾವ ಮುಚ್ಚಿದ ಬಾಗಿಲೂ ಅರೆಯಷ್ಟೂ ತೆರೆದುಕೊಳ್ಳುವುದಿಲ್ಲ. ಅಷ್ಟರಲ್ಲಿ ಕಿಡಿಗೇಡಿ ಗುಂಪು ಇವರನ್ನು ಅಟ್ಟಿಸಿಕೊಂಡು ಮಹಡಿಗೇ ಬಂದುಬಿಡುತ್ತದೆ. ಈಗ ಬೇರೆ ದಾರಿ ಇಲ್ಲದೇ ಕೈಕೂಸಿನಂತೆ ಮಗಳನ್ನು ಅವುಚಿಕೊಂಡು ಸಾರಿಕಾ ಮಹಡಿಯಿಂದ ಹಾರಿ ಕೆಳಗೆ ಬೀಳುತ್ತಾಳೆ. ಆದರೆ ಅಷ್ಟರಲ್ಲಿ ಮಗ ಪರ್ಜಾನ್‌ ಅಲ್ಲೇ ಉಳಿದುಬಿಟ್ಟಿರುತ್ತಾನೆ. ಮಗಳನ್ನು  ಕಾಪಾಡುತ್ತಾ, ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುತ್ತಾ ಮಗ ಎಲ್ಲಾದರೂ ಇದ್ದಾನಾ ಎಂದು ಹುಡುಕುತ್ತಾ ಸಾರಿಕಾ ಓಡುತ್ತಾಳೆ. ಅಷ್ಟರಲ್ಲಿ ಕಿಡಿಗೇಡಿಗಳ ಕೋಮಿನ ಹುಡುಗನೊಬ್ಬ ಸಹಾಯ ಮಾಡಿ, ಅವರಿಂದ ಇವರಿಬ್ಬರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ. ದೂರದಲ್ಲಿ ಮಗ ಕಾಣೆಯಾಗಿರುತ್ತಾನೆ, ತನ್ನ ಕುಟುಂಬವನ್ನು ನೋಡದೇ ಕಂಗಾಲಾಗಿ ನಾಸಿರುದ್ದೀನ್‌ ಶಾ ಅಲೆಯುತ್ತಿರುತ್ತಾರೆ.

ಕುರುಕ್ಷೇತ್ರದಲ್ಲಿ ಸತ್ತ ತಮ್ಮ ಮಕ್ಕಳನ್ನು ಹುಡುಕುತ್ತಾ ರಾತ್ರಿ ಎಲ್ಲಾ ಸೈನಿಕರು ಅಲೆಯುತ್ತಿದ್ದರಂತಲ್ಲಾ, ಹಾಗೆ ಇಲ್ಲೂ ಕಾಣೆಯಾದ ಮಕ್ಕಳನ್ನು ಹೆಣಗಳ ಮಧ್ಯೆ ಅರಸುತ್ತಾ, ಮಗನಂತೆ ಕಾಣುವ ಹೆಣ ತಮ್ಮ ಮಗನದ್ದಾಗದಿರಲಿ ಎಂದು ಹಾರೈಸುತ್ತಾ ಸುಟ್ಟ ಅಪಾರ್ಟ್‌ಮೆಂಟ್‌ ಅನ್ನು ಅಲೆಯುತ್ತಾರೆ. ಕೂಗುತ್ತಾ, ಮರುಗುತ್ತಾರೆ. ಅಲ್ಲಿಂದ ಅವರ ಹುಡುಕಾಟ ಶುರುವಾಗುತ್ತದೆ. ನೂರಾರು ಮಂದಿ ಸತ್ತು, ಅದೆಷ್ಟೋ ಮಂದಿ ನಿರ್ಗತಿಕರಾಗಿರುತ್ತಾರೆ. ಆ ಮಧ್ಯೆ ಗಾಂೀಜಿ ಮೇಲೆ ಸಂಶೋಧನೆ ನಡೆಸಲು ಬಂದ ಅಮೆರಿಕನ್‌ ಪ್ರಜೆಗೆ ಗಾಂಯ ಅಹಿಂಸೆಗೆ ವಿರುದ್ಧವಾದ ಹಿಂಸಾತ್ಮಕ ಕೆಲಸಗಳು ದಿಗ್‌ಭ್ರಮೆಗೊಳಿಸಿರುತ್ತದೆ. ಆತ ನಿರ್ಗತಿಕ ಶಾ- ಸಾರಿಕಾ ಮತ್ತು ಮಗಳನ್ನು ತನ್ನ ಮನೆಗೆ ತಂದಿಟ್ಟುಕೊಂಡು ಸಲಹುತ್ತಾನೆ. ಕಳೆದ ಮಗನಿಗಾಗಿ ಹುಡುಕಾಟ ಶುರುವಾಗುತ್ತದೆ. ಆದರೆ ಹುಡುಗಾಟದ ಹಿಂದೆ ಹೆಜ್ಜೆ ಹೆಜ್ಜೆಗೂ ರಾಜಕೀಯ ಶಕ್ತಿಗಳು ಕೈವಾಡ ನಡೆಸುತ್ತವೆ, ಪೊಲೀಸ್‌ ಶಕ್ತಿಗಳ ಬಲವೂ ಇದಕ್ಕೆ ಸೇರಿಕೊಳ್ಳುತ್ತದೆ.

ಇದು ಯಾವುದೋ ಧರ್ಮವನ್ನು, ಕೋಮನ್ನು ಬೊಟ್ಟುಮಾಡಿ ಹೇಳುತ್ತಿದೆಯೆಂದು ಕಂಡುಬಂದರೂ ನಿರ್ದಿಷ್ಟ ಕೋಮನ್ನು ಮೀರಿ ಇಲ್ಲಿನ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇಲ್ಲಿ ದೌರ್ಜನ್ಯಕ್ಕೊಳಗಾದ ಕೋಮ ಹಾಗೂ ದೌರ್ಜನ್ಯ ಎಸಗಿದ ಕೋಮು ಅದಲು ಬದಲಾಗಬಹುದು. ಆದರೆ ಕೃತ್ಯ ಒಂದೇ, ಸ್ವರೂಪ ಒಂದೇ. ಯಾರಿಗಾದರೂ ಆಗುವ ನೋವು ಒಂದೇ, ಕೊನೆಯಲ್ಲೂ ತಮ್ಮ ಮಗನನ್ನು ಮರಳಿ ಪಡೆಯಲಾಗದ ಕುಟುಂಬವೊಂದರ ನೋವು ಹಾಗೆಯೇ ಇರುತ್ತದೆ. ಇದೂ ಒಂದು ಭಯೋತ್ಪಾದಕತೆಯ ರೂಪವಲ್ಲದೇ ಬೇರೇನಲ್ಲ.

ಗೋಧ್ರಾ ಘಟನೆಯಿಂದ ಹಿಡಿದು ಮುಂಬೈನಲ್ಲಿ ಇತ್ತೀಚೆಗಾದ ಭಯೋತ್ಪಾದಕ ಕೃತ್ಯದವರೆಗೆ ಎಲ್ಲವೂ ಮಾಡಿದ್ದೊಂದೇ- ಹಿಂಸೆ. ಒಂದು ಹಿಂಸೆಯ ಹಿಂದೆ ರಾಜಕೀಯ ನಡೆಯುವುದು ಮತ್ತು ಶ್ರೀಸಾಮಾನ್ಯನ ರಕ್ಷಣೆಗಾಗಿ ಇರುವ ಎಲ್ಲಾ ಶಕ್ತಿಗಳೂ ಈ ಹಿಂಸಾಚಾರಿಗಳ ಆಶ್ರಯಕ್ಕೆ ನಿಲ್ಲುವುದು ಪ್ರಜಾಸತ್ತಾತ್ಮಕತೆಯ ದೊಡ್ಡ ಕ್ರೌರ್ಯ. ಕೋಮು, ಧರ್ಮಗಳೆಲ್ಲವನ್ನೂ ಮೀರಿ ಮಾನವೀಯತೆ ಮುಖ್ಯವಾದಾಗಲಷ್ಟೇ ಒಂದು ಸಮಾಜ ಶಾಂತಿಯುತವಾಗಿ ನಿಲ್ಲಲು ಸಾಧ್ಯ.

ಮುಂಬೈ ಘೋರ ದುರಂತದ ನಂತರ  ಇದೀಗ ಅಲ್ಲಿ ಕೃತ್ಯ ಎಸಗಿದ್ಯಾರು, ಪಾಕಿಸ್ತಾನ, ಯುದ್ಧ, ರಕ್ಷಣಾ ವ್ಯವಸ್ಥೆಯ ವೈಫಲ್ಯ, ಬೇಹುಗಾರಿಕೆ ಸಂಸ್ಥೆಗಳು ನೀಡಿಲ್ಲದ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟರ ಮಟ್ಟಿಗೆ ರಕ್ಷಣೆ ಇದೆ… ಎಂಬಿತ್ಯಾದಿ ಚರ್ಚೆಯೇ ನಡೆಯುತ್ತಿದೆ. ಮಾಧ್ಯಮಗಳೂ ಅದೇ ಮುಖದಲ್ಲಿ ಚರ್ಚೆ ನಡೆಸಿ ಸುಸ್ತಾಗಿವೆ. ಆದರೆ ಮುಂಬೈನಲ್ಲಿ ಪರ್ಜಾನ್‌ನಂಥ ಅದೆಷ್ಟು ಹುಡುಗರು ಇದ್ದಾರು, ಇನ್ನೂ ಅದೆಷ್ಟೋ ಮಂದಿ  ಬದುಕಿದ್ದಾರೋ ಇಲ್ಲವೋ ಎಂದು ಯಾರೂ ಕೇಳುತ್ತಿಲ್ಲ. ತಾಜ್‌ ಹೊಟೇಲ್‌ನ ಕತೆಯಾಯ್ತು, ರೈಲ್ವೇ ನಿಲ್ದಾಣದಲ್ಲಿ ಸತ್ತ, ತಮ್ಮವರನ್ನು ಕಳೆದುಕೊಂಡ ಅಮಾಯಕರ ಕತೆ ಏನಾಯಿತು ಎಂದೇ ಗೊತ್ತಾಗುತ್ತಿಲ್ಲ.

`ಪರ್ಜಾನಿಯಾ’ ಅಂಥ ಕಾಣೆಯಾದ ಅದೆಷ್ಟೋ ಹತಭಾಗ್ಯರನ್ನು ನಮಗೆ ನೆನಪು ಮಾಡಿಕೊಡುತ್ತದೆ. ಅವರಿಗಾದ ಅನ್ಯಾಯಕ್ಕೆ ನಮ್ಮ ರಕ್ತ ಕುದಿಯುತ್ತದೆ. ಅದರ ಜೊತೆ ನಮ್ಮ ಕಣ್ಣೀರು ಅವರಿಗಾಗಿ ತುಳುಕುತ್ತದೆ.

ಚಳಿಗಾಳಿ ಸಹಿ ಹಾಕಿದೆ ಮನಸಿನಲಿ…
ಈ ಚಳಿ ಯಾಕಾಗಿದೆ, ಏನು ನಿನ್ನ ಚಳಿಯ ಲೀಲೆ, ಚಳಿಗಾಳಿ, ಚಳಿಗಾಳಿ ಸಹಿ ಹಾಕಿದೆ ಮನಸಿನಲಿ…

ಹೀಗೆ ನಮ್ಮ ಜನಪ್ರಿಯ ಚಿತ್ರಗೀತೆಗಳನ್ನೆಲ್ಲಾ ಬದಲಿಸಿಕೊಂಡು ಹಾಡುವಂತೆ, ನಡುಗುತ್ತಾ ಮುದುರುವಂತೆ ಈ ಸಲ ಚಳಿಗಾಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. `ಗರಿಮುದುರು ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು’ ಎಂಬ ಎಸ್‌ವಿ ಪರಮೇಶ್ವರ ಭಟ್ಟರ ಸಾಲುಗಳನ್ನು ಕೇಳುತ್ತಿದ್ದರೆ ನಮಗೆಲ್ಲಾ ಚಳಿಯ ಈ ದಿನಗಳೇ ನೆನಪಾಗುತ್ತವೆ.

ಕಿವಿಗೊಂದು ಮಫ್ಲರ್‌, ಮೈಗೆ ಸ್ವೆಟರ್‌, ಕಾಲಿಗೆ ಸಾಕ್ಸ್‌, ಆಗಾಗ ಉಜ್ಜಿ ಉಜ್ಜಿ ಕೈಬಿಸಿ ಮಾಡಿಕೊಳ್ಳುವ ಅಗತ್ಯ, ಬೆಂಕಿ ಕಂಡರೆ, ಬಿಸಿಲು ಬಿದ್ದರೆ ಮೈ ಒಡ್ಡುವ ತವಕ. ಬೆಳಿಗ್ಗೆಯ ವಾಕಿಂಗ್‌ ಬ್ಯಾನ್‌ ಮಾಡಿ, ಸಂಜೆಯ ಯಾವುದಾದರೂ ಮೀಟಿಂಗ್‌ ಕ್ಯಾನ್ಸಲ್‌ ಮಾಡಿ ಮನೆ ಸೇರಿಕೊಂಡು, ಕಂಬಳಿ ಸೇರಿಕೊಳ್ಳುವವರ ಸಂಖ್ಯೆ ಜಾಸ್ತಿ ಇರಬಹುದು.

ತುಟಿ ಒಡೆಯದಿರಲು ಲಿಪ್‌ಗಾರ್ಡೂ ಮೈಕೈ ಒಡೆದು ಸಿಪ್ಪೆ ಏಳದಿರಲು ವ್ಯಾಸಲಿನ್ನೂ ನಮಗೀಗ ಬೇಕಾಗಿದೆ. ಅದನ್ನು ಕೊಂಡು ತರುವವರೂ ಹೆಚ್ಚು, ಅದಕ್ಕಾಗಿ ಅಂಗಡಿಯಲ್ಲಿ ವ್ಯಾಪಾರವೂ ಹೆಚ್ಚು. ಇಂಥದೇ ಚಳಿಯ ಬಗ್ಗೆ ಶೇಕ್ಸ್‌ಪಿಯರ್‌ `ಬ್ಲೋ ಬ್ಲೋ ದೌ ವಿಂಟರ್‌ವಿಂಡ್‌’ ಎಂದು ಬರೆದ. ಅವನು ಚಳಿಗಾಳಿ ಬಗ್ಗೆ ಬರೆದ ಸಂದರ್ಭದಲ್ಲಿ ಅವನದೇ ಪಾತ್ರ ಕಿಂಗ್‌ ಲೀಯರ್‌ ತನ್ನ ಮಕ್ಕಳಿಂದ ಬೇರ್ಪಟ್ಟು, ನಿರ್ಗತಿಕನಾಗಿದ್ದ. ನಿರ್ಗತಿಕನಾಗುವುದಕ್ಕಿಂತ ಚಳಿ ಬೇರಿಲ್ಲ. `ಸುಳಿ ಸುಳಿ ಓ ಚಳಿಗಾಳಿ, ಮನುಷ್ಯಗಿಂತ ನೀ ನಿರ್ದಯವಲ್ಲ ತಿಳಿ’ ಎಂದು ಶೇಕ್ಸ್‌ಪಿಯರ್‌ ಅದ್ಭುತವಾಗಿ ಬರೆಯುತ್ತಾ ಹೋಗುತ್ತಾನೆ.

ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೂಲಕ ಮನಸ್ಸನ್ನು ಬೆಚ್ಚಗಾಗಿಸಲು ಇಲ್ಲಿ ಚಳಿಗಾಲದ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಲಾಗುತ್ತಿದೆ. ಇದನ್ನು ನ್ಯೂಸ್‌ ಏಜನ್ಸಿ, ಫೋಟೋ ಬಕೆಟ್‌ ಮೊದಲಾದ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಅವರಿಗೆಲ್ಲಾ ಕೃತಜ್ಞತೆಗಳು.