ನಮ್ಮಬಗ್ಗೆ
ಬ್ಲಾಗ್ ಮಳ್ಳರಿಗೆ ಈ ಕಳ್ಳ ಕುಳ್ಳರ ನಮಸ್ಕಾರ!
ಇದು ವಿಕಾಸ್ ನೇಗಿಲೋಣಿ ಮತ್ತು ಚೇತನ್ ನಾಡಿಗೇರ್ ಎಂಬ ಇಬ್ಬರು ಸ್ನೇಹಿತರು ಸೇರಿ ಪ್ರಾರಂಭಿಸುತ್ತಿರುವ ಒಂದು ಬ್ಲಾಗ್. ಕಳ್ಳ ಮತ್ತು ಕುಳ್ಳ ಎಂಬ ಅಭಿದಾನವನ್ನು ಇಬ್ಬರಲ್ಲೊಬ್ಬರಿಗೆ ಖಚಿತವಾಗಿ ಆರೋಪಿಸಿದರೆ ಅದು ವಿವಾದವಾಗುವುದರಿಂದ ಹೆಸರಿಸುವುದು ನಿಮಗೆ ಬಿಟ್ಟಿದ್ದು. ನಾವಿಬ್ಬರೂ ವೃತ್ತಿಯಲ್ಲಿ ಪತ್ರಕರ್ತರು. ಪ್ರವೃತ್ತಿಯಲ್ಲಿ ಇಬ್ಬರಿಗೂ ಸಿನಿಮಾ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಸಮಾನ ಅಭಿರುಚಿ ಇದೆ.
ನಾವಿಬ್ಬರೂ ಅನೇಕ ವರ್ಷಗಳಿಂದ ಒಂದೇ ವಿಷಯದ ಮೇಲೆ ಪರಸ್ಪರ ಚರ್ಚೆ ನಡೆಸಿದ್ದೇವೆ, ವಿರೋಧಿ ಹೇಳಿಕೆಯನ್ನಿಟ್ಟುಕೊಂಡು ಜಗಳ ಆಡಿದ್ದೇವೆ, ತಮಾಷೆ ಮಾಡಿಕೊಂಡಿದ್ದೇವೆ, ತಮಾಷೆಗೆ ಈಡಾಗಿದ್ದೇವೆ. ಆದರೆ ನಗರ ಪ್ರದೇಶದ ಸದ್ಯದ ವೈಚಾರಿಕ ಮತ್ತು ಸಂವೇದನೆಯ ಏಕಾಕಿತನವನ್ನು ನಾವಿಬ್ಬರೂ ಅನುಭವಿಸಿರುವುದರಿಂದ ಅದನ್ನು ಮೀರಲು ನಮ್ಮ ಚರ್ಚೆ, ಜಗಳಗಳನ್ನು ಮಾರ್ಗವನ್ನಾಗಿ ಮಾಡಿಕೊಂಡಿದ್ದೇವೆ. ಇಂಥ ಚರ್ಚೆಯಲ್ಲಿ ಹುಟ್ಟಿದ್ದೇ ಇಬ್ಬರೂ ಸೇರಿ ಬ್ಲಾಗ್ ಒಂದನ್ನು ರೂಪಿಸುವ ಕನಸು. ಆ ಕನಸಿನ ಪರಿಣಾಮವೇ ಕಳ್ಳ- ಕುಳ್ಳರ ಈ `ಬ್ಲಾಗಾಕಾರ’ ಲೆಕ್ಕದ ಪ್ರಾರಂಭ.
ಇಲ್ಲಿ ವಿಕಾಸನಿಗೆ ತೋಚಿದ್ದನ್ನು ವಿಕಾಸ, ಚೇತನನನಿಗೆ ತೋಚಿದ್ದನ್ನು ಚೇತನ (ಅಥವಾ ವೈಸ್‌ವರ್ಸಾ) ಬರೆಯುತ್ತಾನೆ. ಅದರಲ್ಲಿ ಕೆಲವೊಮ್ಮೆ ಲಘು ವಿಷಯಗಳೂ, ಕೆಲವೊಮ್ಮೆ ಗಂಭೀರ ವಿಚಾರಗಳೂ ಪ್ರಸ್ತಾಪಿಸಲ್ಪಡಬಹುದು. ಎಲ್ಲೋ ಕೇಳಿದ ಹಾಡು, ಪದ್ಯದ ಹಂಚಿಕೆ, ಪರಭಾಷಾ ಪದ್ಯದ ಅನುವಾದ, ಥಟ್ಟನೆ ಹೊಳೆದ ಕತೆ, ಕೇಳಿದ ಕತೆ, ಅನುಭವ, ಲಹರಿ, ಶಾಯರಿಗಳು ಈ `ಬ್ಲಾಗಂಗಡಿ’ಯಲ್ಲಿ ಸಿಗುತ್ತವೆ. `ಕಳ್ಳ ಕುಳ್ಳ’ ಎಂದು ಬ್ಲಾಗ್‌ಗೆ ಹೆಸರಿಟ್ಟ ಮಾತ್ರಕ್ಕೆ ಅದು `ಲಘುಬಗೆಯ ಬ್ಲಾಗ್’ ಎಂದು ಭಾವಿಸುವುದನ್ನು ನಿಷೇಧಿಸಲಾಗಿದೆ!
ನೀವು ಪ್ರತಿಕ್ರಿಯಿಸಿ
ಕಳ್ಳ- ಕುಳ್ಳ
ನಮಸ್ಕಾರ…ಈವತ್ತು ದಲ್ಲಿ ನಿಮ್ಮ ಕವನ ಅಮ್ಮನ ಕೈ ಬಲೆ ಸದ್ದು ಓದಿದೇ ಸ್ವಾಮಿ
ಒಂದು ಘಂಟೆ ಆಯ್ತು ಕಣ್ಣೀರು ಇನ್ನೂ ನಿಂತಿಲ್ಲ…ನಾನು ಸಧ್ಯಕ್ಕೆ ಸೌದಿ ಅರೇಬಿಯಾದಲ್ಲಿ
ಕೆಲಸ ಮಾಡುತ್ತಿದ್ದೇನೆ…ಅಮ್ಮ ಮೈಸೂರಿನಲ್ಲಿ ಇದ್ದಾರೆ…ಅವರನ್ನ ನೋಡಿ ಒಂದೂವರೆ ವರ್ಷ
ಆಯ್ತು…ಈಗ ನಿಮ್ಮ ಕವನ ಓದಿ ಅಮ್ಮನ ನೆನಪು ತುಂಬಾ ಕಾಡ್ತಾ ಇದೆ..
A wonderful blog. I am a regular visitor to this bubly blog. Thank you for giving the voracious articles.
-Kaligananath Gudadur
vikas , very nice story.
all the best vikas.
very interesting blog