ಕಳ್ಳ ಕುಳ್ಳರ ನಮಸ್ಕಾರ!

Posted: ನವೆಂಬರ್ 14, 2007 in Uncategorized

ಬ್ಲಾಗ್‌ ಮಳ್ಳರಿಗೆ ಈ ಕಳ್ಳ ಕುಳ್ಳರ ನಮಸ್ಕಾರ!
ಇದು ವಿಕಾಸ್‌ ನೇಗಿಲೋಣಿ ಮತ್ತು ಚೇತನ್‌ ನಾಡಿಗೇರ್‌ ಎಂಬ ಇಬ್ಬರು ಸ್ನೇಹಿತರು ಸೇರಿ ಪ್ರಾರಂಭಿಸುತ್ತಿರುವ ಒಂದು ಬ್ಲಾಗ್‌. ಕಳ್ಳ ಮತ್ತು ಕುಳ್ಳ ಎಂಬ ಅಭಿದಾನವನ್ನು ಇಬ್ಬರಲ್ಲೊಬ್ಬರಿಗೆ ಖಚಿತವಾಗಿ ಆರೋಪಿಸಿದರೆ ಅದು ವಿವಾದವಾಗುವುದರಿಂದ ಹೆಸರಿಸುವುದು ನಿಮಗೆ ಬಿಟ್ಟಿದ್ದು. ನಾವಿಬ್ಬರೂ ವೃತ್ತಿಯಲ್ಲಿ ಪತ್ರಕರ್ತರು. ಪ್ರವೃತ್ತಿಯಲ್ಲಿ ಇಬ್ಬರಿಗೂ ಸಿನಿಮಾ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಸಮಾನ ಅಭಿರುಚಿ ಇದೆ.

ನಾವಿಬ್ಬರೂ ಅನೇಕ ವರ್ಷಗಳಿಂದ ಒಂದೇ ವಿಷಯದ ಮೇಲೆ ಪರಸ್ಪರ ಚರ್ಚೆ ನಡೆಸಿದ್ದೇವೆ, ವಿರೋಧಿ ಹೇಳಿಕೆಯನ್ನಿಟ್ಟುಕೊಂಡು ಜಗಳ ಆಡಿದ್ದೇವೆ, ತಮಾಷೆ ಮಾಡಿಕೊಂಡಿದ್ದೇವೆ, ತಮಾಷೆಗೆ ಈಡಾಗಿದ್ದೇವೆ. ಆದರೆ ನಗರ ಪ್ರದೇಶದ ಸದ್ಯದ ವೈಚಾರಿಕ ಮತ್ತು ಸಂವೇದನೆಯ ಏಕಾಕಿತನವನ್ನು ನಾವಿಬ್ಬರೂ ಅನುಭವಿಸಿರುವುದರಿಂದ ಅದನ್ನು ಮೀರಲು ನಮ್ಮ ಚರ್ಚೆ, ಜಗಳಗಳನ್ನು ಮಾರ್ಗವನ್ನಾಗಿ ಮಾಡಿಕೊಂಡಿದ್ದೇವೆ. ಇಂಥ ಚರ್ಚೆಯಲ್ಲಿ ಹುಟ್ಟಿದ್ದೇ ಇಬ್ಬರೂ ಸೇರಿ ಬ್ಲಾಗ್‌ ಒಂದನ್ನು ರೂಪಿಸುವ ಕನಸು. ಆ ಕನಸಿನ ಪರಿಣಾಮವೇ ಕಳ್ಳ- ಕುಳ್ಳರ ಈ `ಬ್ಲಾಗಾಕಾರ’ ಲೆಕ್ಕದ ಪ್ರಾರಂಭ.
ಇಲ್ಲಿ ವಿಕಾಸನಿಗೆ ತೋಚಿದ್ದನ್ನು ವಿಕಾಸ, ಚೇತನನನಿಗೆ ತೋಚಿದ್ದನ್ನು ಚೇತನ (ಅಥವಾ ವೈಸ್‌ವರ್ಸಾ) ಬರೆಯುತ್ತಾನೆ. ಅದರಲ್ಲಿ ಕೆಲವೊಮ್ಮೆ ಲಘು ವಿಷಯಗಳೂ, ಕೆಲವೊಮ್ಮೆ ಗಂಭೀರ ವಿಚಾರಗಳೂ ಪ್ರಸ್ತಾಪಿಸಲ್ಪಡಬಹುದು. ಎಲ್ಲೋ ಕೇಳಿದ ಹಾಡು, ಪದ್ಯದ ಹಂಚಿಕೆ, ಪರಭಾಷಾ ಪದ್ಯದ ಅನುವಾದ, ಥಟ್ಟನೆ ಹೊಳೆದ ಕತೆ, ಕೇಳಿದ ಕತೆ, ಅನುಭವ, ಲಹರಿ, ಶಾಯರಿಗಳು ಈ `ಬ್ಲಾಗಂಗಡಿ’ಯಲ್ಲಿ ಸಿಗುತ್ತವೆ. `ಕಳ್ಳ ಕುಳ್ಳ’ ಎಂದು ಬ್ಲಾಗ್‌ಗೆ ಹೆಸರಿಟ್ಟ ಮಾತ್ರಕ್ಕೆ ಅದು `ಲಘುಬಗೆಯ ಬ್ಲಾಗ್‌’ ಎಂದು ಭಾವಿಸುವುದನ್ನು ನಿಷೇಧಿಸಲಾಗಿದೆ!
ನೀವು ಪ್ರತಿಕ್ರಿಯಿಸಿ
ಕಳ್ಳ- ಕುಳ್ಳ

ಟಿಪ್ಪಣಿಗಳು
  1. Malla ಹೇಳುತ್ತಾರೆ:

    Kalla kullarige ee malla maduva namaskaragalu…

    Nimmibbara blog nodi kushiyayithu. Yakendare Makkala Dinacharane dina…ibbaru makkalu (obbarige maduve agiddaru lekka illa) eno hosatanna madtidaralla ade kushi…

    Inta makkala sankhye hecchagali…

  2. bariolu ಹೇಳುತ್ತಾರೆ:

    ಮಕ್ಕಳ ಆಟ ಬಲ್ಲವರಾರು?
    ಅವುಗಳ *****ವ ತೊಳೆಯುವರಾರು?
    ಕೇಳದೆ ಬ್ಲಾಗನು ಬರೆವ
    ಕೇಳದೆ ಕಷ್ಠವ ಕೊಡುವ
    ತಮ್ಮ ಮನದಂತೆ ಗಿಲ್ಲಿ ದಾಂಡು ಆಡುವ…

  3. ಕಳ್ಳ ಕುಳ್ಳ ಬಂಧುಗಳಿಗೆ ಈ ಮಳ್ಳನ ನಮಸ್ಕಾರಗಳು. ನಾನೂ ನಿಮ್ಮಂತೆಯೇ ಒಬ್ಬ ಳ್ಳ. ಅದು ಮಳ್ಳ…… ನಾನೂ ಒಂಥರಾ ಕುಳ್ಳ.

    ನಿಮ್ಮಿಬ್ಬರ ಜೋಡಿ. ಬ್ಲಾಗಿನ ಮೋಡಿ… ಸಖತ್‌ ಆಗಿದೆ.

    ಇದನ್ನೇ ಮುಂದುವರಿಸಿ

    ನಮಸ್ಕಾರ

  4. Puneeth.B.A. ಹೇಳುತ್ತಾರೆ:

    ಕಳ್ಳ-ಕುಳ್ಳರಿಗೆ ನನ್ನ ಕಡೆಯಿಂದ ವಂದನೆಗಳು,ಅಭಿನಂದನೆಗಳು…
    ಬಹಳ ಚೆನ್ನಾಗಿ ಬರೆಯುತ್ತಿರಿ…
    keep it going…

    All the best..

    ಒಮ್ಮೆ ಹಾಗೆ ಸುಮ್ಮನೆ ನನ್ನ ಬ್ಲಾಗನ್ನು ನೋಡಿ:
    http://www.haagesummane.wordpress.com

    -ಇಂತಿ ನಿಮ್ಮ ಪ್ರೀತಿಯ
    ಪುನೀತ್…

  5. sharada ಹೇಳುತ್ತಾರೆ:

    Congrats! Vikas & Chetan! Nimma Blaagangadi chenaagide.

  6. jayadev ಹೇಳುತ್ತಾರೆ:

    ella ok.
    aadre, ellide swami nimma kaamplimentary kaapi ??

    jp

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s