Archive for ಆಗಷ್ಟ್ 26, 2008

ನಾವೆಲ್ಲಾ `ಇಲ್ಲಿ ಬಂದೆ ಸುಮ್ಮನೆ’ಗಳು!
ನಮ್ಮಲ್ಲಿ ಹೆಚ್ಚಿನವರಿಗೆ `ಅಲ್ಲಿದೆ ನಮ್ಮನೆ’. ಹೊಟ್ಟೆ ಪಾಡಿನ ಹೆಸರು ಹೇಳಿಕೊಂಡು ನಮ್ಮ ಪಾಡಿಗೆ ನಾವು ಪಟ್ಟಣವಾಸಿಗಳಾದವರು. ಇಲ್ಲಿನ ಬಾಡಿಗೆ, ಭೋಗ್ಯದ ಮನೆಯಾಚೆ ನಮಗಿರುವುದು ಸೋಗೆ ಮನೆ, ನಾಡ ಹೆಂಚಿನ ಮನೆ, ಹೊಗೆ ತುಂಬಿದ ಮನೆ, ಮಳೆ ಬಂದರೆ ಮನೆ ಸೋರುವ ಮನೆ, ರಾತ್ರಿ ಪೂರ್ತಿ ಧೋ ಎಂದು ಮಳೆಯ ಸದ್ದು ಕೇಳಿದ ಮನೆ, ನಾಟಿ ಮಾಡಲು ಬೆಳಿಗ್ಗೆ ಬೇಗ ಸಜ್ಜಾದ ಮನೆ, ತೋಟಕ್ಕೆ ಔಷಧ ಹೊಡೆಸಬೇಕೆಂದು ಗಡಿಬಿಡಿ ಮಾಡಿದ ಮನೆ, ಅಮ್ಮನಿಗೆ ಅಪ್ಪ ಪೆಟ್ಟು ಕೊಟ್ಟಿದ್ದನ್ನು ರಾತ್ರಿ ಎವೆಯಿಕ್ಕದೇ ನೋಡಿದ ಮನೆ, ನೆಂಟರು ಬಂದಾಗ ಸಂಭ್ರಮಿಸಿದ ಮನೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗ ಪಾಸ್‌ ಆದಾಗ ಕುಣಿದು ಕುಪ್ಪಳಿಸಿದ ಮನೆ, ಅಜ್ಜಿ ಸತ್ತಾಗ ಅತ್ತ ಮನೆ.
ಮನೆ ಮನೆ ನಮ್ಮ ಮನೆ, ನಾನು ಅವನು ಬೆಳೆದ ಮನೆ, ಅಪ್ಪ, ಅಮ್ಮ ಇರುವ ಮನೆ… (ಹೆಚ್ಚು…)